Posts

Showing posts from July, 2023
Image
  Pious & Cool Morning to All. Happy Friday 7th July 2023 @ TapOvanam, Hiremath, Tumkur ಮಹಾಜನಗಳೇ, ನಿಮ್ಮ ಶಾಸಕರು ಸಂತರಲ್ಲ; ಅವರು ಸಂತೆ. ವಿಧಾನಸಭೆಯ ಕಲಾಪಗಳನ್ನು ನೋಡಿ. ನಿಮಗೆ ನಮ್ಮ ಮಾತು “ಗ್ಯಾರಂಟಿ” ಎನಿಸುತ್ತದೆ. ಈಗ ಗ್ಯಾರಂಟಿಯೊಂದಿಗೆ ಹೇಳಿದರೆ ನಿಮಗೆ ತಿಳಿಯುತ್ತದೆ!! ವಿಧಾನಸಭೆಯ ಕಲಾಪಗಳಲ್ಲಿ ರಾಜ್ಯದ ಹಿತ ಮತ್ತು ರಾಜ್ಯದ ಜನತೆಯ ಹಿತದ ಚರ್ಚೆಗಿಂತಲೂ ಅದು, ಇದು, ಹಾಗೆ, ಹೀಗೆ ಎಂಬ ವಿಷಯಕ್ಕೆ ಸಂಬಂಧಿಸಿದ ಚರ್ವಿತಚರ್ವಣವೇ ಜಾಸ್ತಿ ಇರುತ್ತದೆ. ವಿಧಾನಸಭೆಯ ಕಲಾಪಗಳು ಬೆಂಗಳೂರಿನ ಮ್ಯಾಜೆಸ್ಟಿಕ್ ಸರ್ಕಲ್ ಮತ್ತು ಕಲಾಸಿಪಾಳ್ಯಂಗಳಲ್ಲಿನ ಗದ್ದಲ, ಗಲಾಟೆಯನ್ನು ಮೀರಿಸುವಂತೆ ಇರುತ್ತವೆ. ನಮ್ಮ ಶಾಸಕರುಗಳ ಭಾಷೆಯೂ ಕೂಡ ಹಾಗೇನೇ. ಅದು ಮ್ಯಾಜೆಸ್ಟಿಕ್ ಅಲ್ಲ; ಅದು ಕಲಾಸಿಪಾಳ್ಯಮ್!! ಬಹುತೇಕ ನಮ್ಮ ಶಾಸಕರುಗಳು “ಸಿನ್ಸೀಯರು” ಅಲ್ಲ, “ಸೀರಿಯಸ್ಸು” ಅಲ್ಲ. ಶಾಸಕರಲ್ಲಿ ಇರಬೇಕಾದ ಆ ಘನತೆ, ಗೌರವ, ಗಾಂಭೀರ್ಯವೇ ಇಲ್ಲವಾಗಿದೆ. ಅದುವೇ ಅವರಲ್ಲಿ ತೀವ್ರ ಅಭಾವಕ್ಕೆ ತುತ್ತಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಶ್ರೀಮಂತರು ಶಾಸಕರಾಗುವುದಕ್ಕಿಂತ ಸಂಸ್ಕಾರವಂತರು ಶಾಸಕರಾದರೆ ಒಳ್ಳೆಯದು. ಅದು ನಮ್ಮ ದೇಶದ ಮತ್ತು ನಮ್ಮ ಮುಂದಿನ ಜನಾಂಗದ ಭವಿಷ್ಯದ ದೃಷ್ಟಿಯಿಂದ ಒಳ್ಳೆಯದು. ಎಲ್ಲ ಶಾಸಕರೂ ಹಾಗೆಯೇ ಎಂದೇನಿಲ್ಲ. ಆದರೆ ಬಹುತೇಕ ಮತ್ತು ಬಹುಪಾಲು ಜನ ಶಾಸಕರು “ಹಾಗೆ” ಇರುವುದರಿಂದ ಎಲ್ಲರೂ ಹಾಗೇನೇ ಎನ್ನುವಂತಾಗಿದ...
Image
  6th July 2023 @ TapOvanam, Hiremath, Tumkur ಜನಗಳು ಬದಲಾವಣೆಯನ್ನು ಬಯಸಿದ್ದರು. ಅಧಿಕಾರಿಗಳ ವರ್ಗಾವಣೆಯನ್ನಲ್ಲ!! ಸರಕಾರ ಬದಲಾವಣೆಗಿಂತ ವರ್ಗಾವಣೆಗೇನೇ ಹೆಚ್ಚು ಆದ್ಯತೆಯನ್ನು ಕೊಟ್ಟುಕೊಂಡಂತಿದೆ. ಈಗ ಮಾತ್ರ ಹಾಗೆ ಅಂತ ಅಲ್ಲ, ಯಾವಾಗಲೂ ಹಾಗೇನೇ!! ``ಬದಲಾವಣೆ ಜಗದ ನಿಯಮ; ವರ್ಗಾವಣೆ ಸರಕಾರದ ನಿಯಮ'' ಸರಕಾರಗಳ ಬದಲಾವಣೆಯಾದಾಗ ವರ್ಗಾವಣೆ ಅನಿವಾರ್ಯ ಎನ್ನುವಂತಾಗಿದೆ. ಸರಕಾರ ಅಧಿಕಾರಿಗಳನ್ನು ತನಗೆ ಅನುಕೂಲವೆನಿಸುವ “ಕಂಫರ್ಟೇಬಲ್” (Comfortable) ಆಗುವ ಜಾಗೆಗಳಲ್ಲಿ ಕುಳ್ಳಿರಿಸುತ್ತದೆ. ಡಾ. ಶಿವಾನಂದ ಶಿವಾಚಾರ್ಯರು ಹಿರೇಮಠ, ತಪೋವನ, ತುಮಕೂರು