6th July 2023
@ TapOvanam, Hiremath, Tumkur

ಜನಗಳು ಬದಲಾವಣೆಯನ್ನು ಬಯಸಿದ್ದರು.
ಅಧಿಕಾರಿಗಳ ವರ್ಗಾವಣೆಯನ್ನಲ್ಲ!!
ಸರಕಾರ ಬದಲಾವಣೆಗಿಂತ ವರ್ಗಾವಣೆಗೇನೇ
ಹೆಚ್ಚು ಆದ್ಯತೆಯನ್ನು ಕೊಟ್ಟುಕೊಂಡಂತಿದೆ.
ಈಗ ಮಾತ್ರ ಹಾಗೆ ಅಂತ ಅಲ್ಲ,
ಯಾವಾಗಲೂ ಹಾಗೇನೇ!!
``ಬದಲಾವಣೆ ಜಗದ ನಿಯಮ;
ವರ್ಗಾವಣೆ ಸರಕಾರದ ನಿಯಮ''
ಸರಕಾರಗಳ ಬದಲಾವಣೆಯಾದಾಗ
ವರ್ಗಾವಣೆ ಅನಿವಾರ್ಯ ಎನ್ನುವಂತಾಗಿದೆ.
ಸರಕಾರ ಅಧಿಕಾರಿಗಳನ್ನು
ತನಗೆ ಅನುಕೂಲವೆನಿಸುವ
“ಕಂಫರ್ಟೇಬಲ್” (Comfortable) ಆಗುವ
ಜಾಗೆಗಳಲ್ಲಿ ಕುಳ್ಳಿರಿಸುತ್ತದೆ.
ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತಪೋವನ, ತುಮಕೂರು

Comments

Popular posts from this blog