Good Morning, Happy Monday
2nd October 2023
@ TapOvanam, Hiremath, Tumkur
ಮಹಾತ್ಮರ ಬದುಕು, ಬಾಳುವೆಯೇ ಹಾಗೆ.
ಅವರು ಅದೆಷ್ಟೋ ಜನಗಳ ಬದುಕಿಗೆ
ಅನ್ನ, ನೀರು ಗಂಜಿ.
ಅವರು ಬದುಕಿರುವಾಗಲೇನೋ ಸರಿಯೇ ಸರಿ.
ಆದರೆ ಅವರು ಇಲ್ಲ-ಇನ್ನಿಲ್ಲವಾದ ಮೇಲೆಯೂ
ಅದೆಷ್ಟೋ ಜನರಿಗೆ
ಅವರು ಅನ್ನ, ನೀರು, ಗಂಜಿಯಾಗಿ
ಬದುಕು ಕೊಟ್ಟುಕೊಂಡಿರುತ್ತಾರೆ.
ಗಾಂಧೀಜಿ ಕೂಡ ಈ ಮಾತಿಗೆ ಹೊರತಲ್ಲ!!
ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತಪೋವನ, ತುಮಕೂರು
Good Morning, Happy Monday 2nd October 2023 @ TapOvanam, Hiremath, Tumkur ಸೆಪ್ಟೆಂಬರ್ ಮಾಹೆಯಲ್ಲಿ ಗೌರೀ ಗಣೇಶಜಿ. ಅಕ್ಟೋಬರ್ ಮಾಹೆಯಲ್ಲಿ ಗಾಂಧೀಜಿ, ಶಾಸ್ತ್ರೀಜಿ. ಈ ವರುಷದ ಸೆಪ್ಟೆಂಬರ್ ತಿಂಗಳಿನಲ್ಲಿ ಗೌರೀ ಗಣೇಶ ಹಬ್ಬ ಅಕ್ಟೋಬರ್ ತಿಂಗಳಿನಲ್ಲಿ ಗಾಂಧೀಜಿ, ಶಾಸ್ತ್ರೀಜಿ ಜಯಂತಿ, ಹುಟ್ಟುಹಬ್ಬ. ಗೌರೀ, ಗಣೇಶ ಹಬ್ಬ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ. ಗಾಂಧೀಜಿ, ಶಾಸ್ತ್ರೀಜಿ ಜಯಂತಿ ಸಾರ್ವಜನಿಕ ಹಾಗೂ ದೇಶಭಕ್ತಿ ಪ್ರೇರಕ. ಗಣೇಶ ವಿನಾಯಕ, ಗಣನಾಯಕ, ಗಾಂಧೀಜಿ, ಶಾಸ್ತ್ರೀಜಿ ನಾಯಕರು, ರಾಷ್ಟ್ರನಾಯಕರು. ಗಣೇಶ ವಿಘ್ನನಾಶಕ, ವಿಘ್ನವಿನಾಶಕ ಮತ್ತು ಮುಕ್ತಿದಾಯಕ. ಗಾಂಧೀಜಿ, ಶಾಸ್ತ್ರೀಜಿ ದಾಸ್ಯನಾಶಕರು ಮತ್ತು ಸ್ವಾತಂತ್ರ್ಯದಾಯಕರು. ಗೌರೀ, ಗಣೇಶರ ಆಗಮನದಿಂದ ಲೋಕೋದ್ಧಾರ. ಗಾಂಧೀಜಿ, ಶಾಸ್ತ್ರೀಜಿಯವರ ಆಗಮನದಿಂದ ದೇಶೋದ್ಧಾರ. ಗೌರೀ ಗಣೇಶರು ಕೈಲಾಸದಿಂದ ಭೂಮಿಗೆ ಬಂದವರು. ಗಾಂಧೀಜಿ, ಶಾಸ್ತ್ರೀಜಿಗಳು ತ್ಯಾಗ, ಬಲಿದಾನಗಳಿಂದ ಭೂಮಿಯಿಂದ ಕೈಲಾಸದೆತ್ತರಕ್ಕೆ ಬೆಳೆದವರು. ಗೌರೀ ಗಣೇಶ ಭಕ್ತವತ್ಸಲರು. ಗಾಂಧೀಜಿ, ಶಾಸ್ತ್ರೀಜಿ ದೇಶವತ್ಸಲರು. ಗೌರೀ ಗಣೇಶರದು ಅಮ್ಮ, ಮಗನ ಸಂಬಂಧ. ಗಾಂಧೀಜಿ, ಶಾಸ್ತ್ರೀಜಿಗಳದು ತತ್ತ್ವ, ಸಿದ್ಧಾಂತದ ಸಂಬಂಧ. ಗೌರೀ ಗಣೇಶರು ಜನಗಳಿಗೆ ಭಕ್ತಿಯ ಪಾಠಮಾಡುತ್ತಾರೆ. ಗಾಂಧೀಜಿ, ಶಾಸ್ತ್ರೀಜಿ ಜನಗಳಿಗೆ ದೇಶಭಕ್ತಿಯ ಪಾಠಮಾಡುತ್ತಾರೆ. ಗೌರೀ, ಗಣೇಶರ ಹಬ್ಬದಿಂದ ಜನಗಳ ಮೈ, ಮನಸ್ಸುಗಳಲ್ಲಿ ಪುಳಕ ಗಾ...
Comments
Post a Comment