1.
ವೀರಭದ್ರ ವೀರಗಾಸೆಯೂ ಅಹುದು.
ಆತ ವೀರಗಾಥೆಯೂ ಅಹುದು.
2.
ವೀರಭದ್ರ ಸಾಹಸಗಾಥೆಯೂ ಅಹುದು.
ಆತ ಸಾಧನಾಗೀತೆಯೂ ಅಹುದು.
3.
ವೀರಭದ್ರ ಕಲೆಯೂ ಅಹುದು; ಆತ ಕಾಲನೂ ಅಹುದು.
ವೀರಭದ್ರ ಕುಣಿಯಲು ನಿಂತರೆ ಕಲೆ.
ವೀರಭದ್ರ ಕುಣಿಸಲು ನಿಂತರೆ ಕಾಲ, ಸಾಕ್ಷಾತ್ ಪ್ರಳಯಕಾಲ.
4.
ತಾಳ, ಮೇಳ, ಹೆಜ್ಜೆ, ಗೆಜ್ಜೆ ಜೊತೆಯಾದರೆ ವೀರಭದ್ರ ಕಲಾಭಾರ್ಗವ.
ತಾಳ, ಮೇಳ, ಹೆಜ್ಜೆ, ಗೆಜ್ಜೆ ತಪ್ಪಿದರೆ ವೀರಭದ್ರ ಕಾಲಭೈರವ.
5.
ವೀರಭದ್ರ ಮೀಸೆ ಕುಣಿಸಿದರೆ ಆತ ಮೀಸೆ ವೀರಭದ್ರ.
ವೀರಭದ್ರ ಕಣ್ಣು ಕೆಂಪಾಗಿಸಿದರೆ ಆತ ಕೆಂಗಣ್ಣ ವೀರಭದ್ರ.
ವೀರಭದ್ರ ಕಣ್ಣರಳಿಸಿದರೆ ಆತ ಕರುಣಾಳು ವೀರಭದ್ರ.
6.
ವೀರಭದ್ರ ಒಲಿದರೆ ಪ್ರಸನ್ನರುದ್ರ;
ಮರೆತರೆ ಆತ ಪ್ರಳಯರುದ್ರ.
7.
ಅರಿದೊಡೆ ಶರಣ, ಮರೆದೊಡೆ ಮಾನವ ಎಂಬ ಹಾಗೆ.
ಅರಿತರೆ ವೀರಭದ್ರ ಆಪದ್ಬಾಂಧವ;
ಮರೆತರೆ ವೀರಭದ್ರ ಆಪತ್ತಿಗೆ ಬಾಂಧವ.
ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತುಮಕೂರು
Comments
Post a Comment