ಕೃಷ್ಣನ ಸಹಿತ ಎಲ್ಲರಿಗೂ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು -- ಭಾಗ 2

                     

                      ಕೃಷ್ಣನ ಸಹಿತ ಎಲ್ಲರಿಗೂ ಕೃಷ್ಣ ಜನ್ಮಾಷ್ಟಮಿಯ 

ಶುಭಾಶಯಗಳು.

ಭಾಗ 2


ಕೃಷ್ಣ ಎಂದರೆ 

ಭೂತಾನಾಂ ಆದಿಶ್ಚ ಮಧ್ಯಂ ಚ ಅಂತ ಏವ ಚ - ಸಚರಾಚರಗಳ ಆದಿ, ಮಧ್ಯ, ಅಂತ್ಯ. 

ಕೃಷ್ಣ ಎಂದರೆ 

ಆದಿತ್ಯಾನಾಂ ವಿಷ್ಣುಃ - ಅದಿತಿಯ ದ್ವಾದಶಪುತ್ರರಲ್ಲಿ ಒಬ್ಬನಾದ ವಿಷ್ಣು.

ಕೃಷ್ಣ ಎಂದರೆ 

ಜ್ಯೋತಿಷಾಂ ಅಂಶುಮಾನ್ ರವಿಃ - ನಕ್ಷತ್ರಗಳ ಕಿರಣಪುಂಜದಲ್ಲಿ ಸೂರ್ಯರಶ್ಮಿ

ಕೃಷ್ಣ ಎಂದರೆ 

ಮರುತಾಂ ಮರೀಚಿಃ - ಮರುದ್ದೇವತೆಗಳಲ್ಲಿ ಮರೀಚಿ 

ಕೃಷ್ಣ ಎಂದರೆ 

ನಕ್ಷತ್ರಾಣಾಂ ಶಶೀ - ನಕ್ಷತ್ರಗಳ ಅಧಿಪತಿಯಾದ ಚಂದ್ರ

ಕೃಷ್ಣ ಎಂದರೆ 

ವೇದಾನಾಂ ಸಾಮವೇದ:  - ವೇದಗಳಲ್ಲಿ ಸಾಮವೇದ.

ಕೃಷ್ಣ ಎಂದರೆ 

ದೇವಾನಾಂ ವಾಸವಃ - ದೇವತೆಗಳಲ್ಲಿ ಇಂದ್ರ.

ಕೃಷ್ಣ ಎಂದರೆ 

ಇಂದ್ರಿಯಾಣಾಂ ಮನಃ - ಇಂದ್ರಿಯಗಳಲ್ಲಿ ಮನಸ್ಸು.

ಕೃಷ್ಣ ಎಂದರೆ 

ಭೂತಾನಾಂ ಚೇತನಾ - ಭೂತ, ಪ್ರಾಣಿಗಳ ಚೈತನ್ಯಶಕ್ತಿ.

 ಕೃಷ್ಣ ಎಂದರೆ 

ರುದ್ರಾಣಾಂ ಶಂಕರಃ - ಏಕಾದಶ ರುದ್ರರಲ್ಲಿ ಶಂಕರ.

 ಕೃಷ್ಣ ಎಂದರೆ 

ಯಕ್ಷ, ರಕ್ಷಸಾಂ ವಿತ್ತೇಶ - ಯಕ್ಷ, ರಾಕ್ಷಸರ ಅಧಿಪತಿ ಕುಬೇರ.

ಕೃಷ್ಣ ಎಂದರೆ 

ವಸೂನಾಂ ಪಾವಕಃ - ಅಷ್ಟವಸುಗಳಲ್ಲಿ ಒಬ್ಬನಾದ ಅಗ್ನಿ. 

ಕೃಷ್ಣ ಎಂದರೆ 

ಶಿಖರಿಣಾಂ ಮೇರುಃ - ಪರ್ವತಗಳಲ್ಲಿ ಮೇರುಪರ್ವತ. 

ಕೃಷ್ಣ ಎಂದರೆ 

ಪುರೋಧಸಾಂ ಬೃಹಸ್ಪತಿಃ - ಪುರೋಹಿತರಲ್ಲಿ ಬೃಹಸ್ಪತಿ. 

ಕೃಷ್ಣ ಎಂದರೆ 

ಸೇನಾನೀನಾಂ ಸ್ಕಂದಃ - ಸೇನಾಪತಿಗಳಲ್ಲಿ ಸ್ಕಂದ, ಷಣ್ಮುಖ.

ಕೃಷ್ಣ ಎಂದರೆ 

ಸರಸಾಂ ಸಾಗರಃ - ಜಲಾಶಯಗಳಲ್ಲಿ ಸಮುದ್ರ, ಸಾಗರ.

ಕೃಷ್ಣ ಎಂದರೆ 

ಮಹರ್ಷೀಣಾಂ ಭೃಗುಃ - ಮಹರ್ಷಿಗಳಲ್ಲಿ ಭೃಗು.

ಕೃಷ್ಣ ಎಂದರೆ 

ಗಿರಾಂ ಅಕ್ಷರಮ್ - ಶಬ್ದಗಳಲ್ಲಿ, ಸಾರಸ್ವತದಲ್ಲಿ ಏಕಾಕ್ಷರ.

ಕೃಷ್ಣ ಎಂದರೆ 

ಯಜ್ಞಾನಾಂ ಜಪಯಜ್ಞಃ - ಯಜ್ಞಗಳಲ್ಲಿ ಜಪಯಜ್ಞ. 

 ಕೃಷ್ಣ ಎಂದರೆ 

ಸ್ಥಾವರಾಣಾಂ ಹಿಮಾಲಯಃ - ಪರ್ವತಗಳಲ್ಲಿ ಹಿಮಾಲಯ.

 ಕೃಷ್ಣ ಎಂದರೆ

 ವೃಕ್ಷಾಣಾಂ ಅಶ್ವತ್ಥಃ - ವೃಕ್ಷಗಳಲ್ಲಿ ಅಶ್ವತ್ಥವೃಕ್ಷ.

ಕೃಷ್ಣ ಎಂದರೆ 

ದೇವರ್ಷೀಣಾಂ ನಾರದಃ - ದೇವರ್ಷಿಗಳಲ್ಲಿ ನಾರದ. 

ಕೃಷ್ಣ ಎಂದರೆ 

ಗಂಧರ್ವಾಣಾಂ ಚಿತ್ರರಥಃ - ಗಂಧರ್ವರಲ್ಲಿ ಚಿತ್ರರಥ. 

ಕೃಷ್ಣ ಎಂದರೆ 

ಸಿದ್ಧಾನಾಂ ಕಪಿಲಃ - ಸಿದ್ಧರಲ್ಲಿ ಕಪಿಲಮುನಿ. 

ಕೃಷ್ಣ ಎಂದರೆ 

ಅಶ್ವಾನಾಂ ಉಚ್ಚೈಶ್ರವಸಃ - ಕುದುರೆಗಳಲ್ಲಿ ಉಚ್ಚೈಶ್ರವಸ್ಸು.

 ಕೃಷ್ಣ ಎಂದರೆ 

ಗಜೇಂದ್ರಾಣಾಂ ಐರಾವತಃ - ಆನೆಗಳಲ್ಲಿ ಐರಾವತ. 

ಕೃಷ್ಣ ಎಂದರೆ 

ನರಾಣಾಂ ನರಾಧಿಪಃ - ಮನುಷ್ಯರಲ್ಲಿ ಮಹಾರಾಜ.

ಕೃಷ್ಣ ಎಂದರೆ 

ಆಯುಧಾನಾಂ ವಜ್ರಮ್ - ಆಯುಧಗಳಲ್ಲಿ ವಜ್ರಾಯುಧ. 

ಕೃಷ್ಣ ಎಂದರೆ 

ಧೇನೂನಾಂ ಕಾಮಧುಕ್, ಕಾಮಧೇನು - ಹಸು, ಗೋವುಗಳಲ್ಲಿ ಕಾಮಧೇನು. 

ಕೃಷ್ಣ ಎಂದರೆ 

ಪ್ರಜನಕ್ಕೆ ಕಾರಣನಾದ ಕಂದರ್ಪ - ಸಂತಾನೋತ್ಪತ್ತಿಗೆ ಕಾರಣನಾದ ಕಾಮದೇವ.

 ಕೃಷ್ಣ ಎಂದರೆ 

ಸರ್ಪಾಣಾಂ ವಾಸುಕಿಃ - ಸರ್ಪಗಳಲ್ಲಿ ಸರ್ಪರಾಜ ವಾಸುಕಿ.

ಕೃಷ್ಣ ಎಂದರೆ 

ನಾಗಾನಾಂ ಅನಂತಃ - ನಾಗಗಳಲ್ಲಿ ಆದಿಶೇಷ.

ಕೃಷ್ಣ ಎಂದರೆ 

ಯಾದಸಾಂ ವರುಣಃ - ಜಲಚರಗಳಲ್ಲಿ ಜಲಾಧಿಪತಿ ವರುಣ. 

ಕೃಷ್ಣ ಎಂದರೆ 

ಪಿತೃಣಾಂ ಅರ್ಯಮಾ - ಪಿತೃದೇವತೆಗಳಲ್ಲಿ ಅರ್ಯಮ.

 ಕೃಷ್ಣ ಎಂದರೆ 

ಸಂಯತಾಂ ಯಮಃ - ನಿಗ್ರಹಿಸುವವರಲ್ಲಿ ಯಮಧರ್ಮ.

 ಕೃಷ್ಣ ಎಂದರೆ ದೈತ್ಯಾನಾಂ ಪ್ರಹ್ಲಾದಃ - ದೈತ್ಯರಲ್ಲಿ ಪ್ರಹ್ಲಾದ, ಭಕ್ತಪ್ರಹ್ಲಾದ.

 ಕೃಷ್ಣ ಎಂದರೆ 

ಕಲಯತಾಂ ಕಾಲಃ - ಎಣಿಕೆ, ಕ್ಷಣಗಣನೆಯಲ್ಲಿ ಕಾಲ, ಸಮಯ.

 ಕೃಷ್ಣ ಎಂದರೆ 

ಮೃಗಾಣಾಂ ಮೃಗೇಂದ್ರಃ  - ಮೃಗ, ಪ್ರಾಣಿಗಳಲ್ಲಿ ಕಾಡಿನರಾಜ ಸಿಂಹ.

ಕೃಷ್ಣ ಎಂದರೆ

ಪಕ್ಷಿಣಾಂ ವೈನತೇಯಃ - ಪಕ್ಷಿಗಳಲ್ಲಿ ಪಕ್ಷಿರಾಜ ಗರುಡ. 

ಕೃಷ್ಣ ಎಂದರೆ 

ಪವತಾಂ ಪವನಃ - ಪಾವನಿಸುವಲ್ಲಿ ಮತ್ತು ಪವಿತ್ರೀಕರಿಸುವಲ್ಲಿ ಪವನ, ಗಾಳಿ

ಕೃಷ್ಣ ಎಂದರೆ 

ಶಸ್ತ್ರಭೃತಾಂ ರಾಮಃ - ಶಸ್ತ್ರಧರ, ಶಸ್ತ್ರಪಾಣಿಗಳಲ್ಲಿ ಶ್ರೀರಾಮ. 

 ಕೃಷ್ಣ ಎಂದರೆ 

ಝಷಾಣಾಂ ಮಕರಃ - ಮೀನು ಇತ್ಯಾದಿ ಜಲಚರಗಳಲ್ಲಿ ಮೊಸಳೆ.

 ಕೃಷ್ಣ ಎಂದರೆ 

ಸ್ರೋತಸಾಂ ಜಾಹ್ನವೀ - ಹರಿವ ನದಿಗಳಲ್ಲಿ ಗಂಗೆ, ಭಾಗೀರಥಿ.

 ಕೃಷ್ಣ ಎಂದರೆ 

ಸರ್ಗಾಣಾಂ ಆದಿ ಮಧ್ಯ ಅಂತಃ - ಸೃಷ್ಟಿ ಕ್ರಿಯೆ, ಪ್ರಕ್ರಿಯೆಯ ಆದಿ, ಮಧ್ಯ ಮತ್ತು ಅಂತ್ಯ.

ಕೃಷ್ಣ ಎಂದರೆ 

ವಿದ್ಯಾನಾಂ ಅಧ್ಯಾತ್ಮವಿದ್ಯಾ - ವಿದ್ಯೆಗಳಲ್ಲಿ ಅಧ್ಯಾತ್ಮವಿದ್ಯೆ, ಬ್ರಹ್ಮವಿದ್ಯೆ. 

ಕೃಷ್ಣ ಎಂದರೆ 

ಪ್ರವದತಾಂ ವಾದಃ  - ವಿತಂಡವಾದ, ಜಲ್ಪವಾದ...., ಇತ್ಯಾದಿಗಳಲ್ಲಿ ಸಂವಾದ.

ಕೃಷ್ಣ ಎಂದರೆ 

ಅಕ್ಷರಾಣಾಂ ಅಕಾರಃ - ಅಕ್ಷರಗಳಲ್ಲಿ ಅಕಾರ, ಅ ಅಕ್ಷರ. 

ಕೃಷ್ಣ ಎಂದರೆ 

ಸಾಮಾಸಿಕಸ್ಯ ದ್ವಂದ್ವಃ - ಸಮಾಸಗಳಲ್ಲಿ ದ್ವಂದ್ವ  ಸಮಾಸ. 

ಕೃಷ್ಣ ಎಂದರೆ 

ಕಾಲೋ ಅಕ್ಷಯಃ - ಭೂತ, ವರ್ತಮಾನಾದಿ ಕಾಲಗಳಲ್ಲಿ ಅಕ್ಷಯಕಾಲ.

ಕೃಷ್ಣ ಎಂದರೆ 

ವಿಶ್ವತೋಮುಖಃ - ಜಗದಗಲ, ಮುಗಿಲಗಲ, ಮಿಗೆಯಗಲ, ವಿಶ್ವತೋಮುಖ, ವಿಶ್ವತೋಬಾಹು.

ಕೃಷ್ಣ ಎಂದರೆ 

ಧಾತಾ - ಪಾಲನೆ, ಪೋಷಣೆ, ಧಾರಣ ಮಾಡುವವರಲ್ಲಿ ಧಾತಾ.

ಕೃಷ್ಣ ಎಂದರೆ 

ಸರ್ವಹರಃ ಮೃತ್ಯುಃ - ಸರ್ವಹರನಾದ ಮೃತ್ಯು. 

ಕೃಷ್ಣ ಎಂದರೆ 

ಭವಿಷ್ಯತಾಂ ಉದ್ಭವಃ - ಹುಟ್ಟೋದಕ್ಕೆಲ್ಲ ಉತ್ಪತ್ತಿಕಾರಣ.

ಕೃಷ್ಣ ಎಂದರೆ 

ನಾರೀಣಾಂ ಕೀರ್ತಿಃ, ಶ್ರೀಃ, ವಾಕ್ - ಹೆಂಗಳೆಯರಲ್ಲಿ ಕೀರ್ತಿ, ಸಂಪತ್ತು, ವಾಣಿ

ಕೃಷ್ಣ ಎಂದರೆ 

ಮೇಧಾ, ಧೃತಿಃ, ಕ್ಷಮಾ - ಸ್ತ್ರೀಶಕ್ತಿಯಾದ ಧೀಶಕ್ತಿ, ಧೃತಿ- ಧೈರ್ಯ, ಕ್ಷಮಾಶಕ್ತಿ.

ಕೃಷ್ಣ ಎಂದರೆ 

ಸಾಮ್ನಾಂ ಬೃಹತ್ಸಾಮಃ -  ಗಾನಯೋಗ್ಯ ಶ್ರುತಿಗಳಲ್ಲಿ ಬೃಹತ್ಸಾಮ. 

ಕೃಷ್ಣ ಎಂದರೆ 

ಛಂದಸಾಂ ಗಾಯತ್ರೀ - ಛಂದಸ್ಸುಗಳಲ್ಲಿ ಗಾಯತ್ರೀ ಛಂದಸ್ಸು. 

ಕೃಷ್ಣ ಎಂದರೆ 

ಮಾಸಾನಾಂ ಮಾರ್ಗಶೀರ್ಷಃ - ಮಾಸಗಳಲ್ಲಿ ಮಾರ್ಗಶಿರ ಮಾಸ.

ಕೃಷ್ಣ ಎಂದರೆ 

ಋತೂನಾಂ ಕುಸುಮಾಕರಃ - ಋತುಗಳಲ್ಲಿ ವಸಂತಋತು. 

ಕೃಷ್ಣ ಎಂದರೆ 

ಛಲಯತಾಂ ದ್ಯೂತಮ್ - ಕಪಟ, ವಂಚನೆ, ವಂಚಿಸುವಲ್ಲಿ ದ್ಯೂತ, ಜೂಜು.

ಕೃಷ್ಣ ಎಂದರೆ 

ತೇಜಸ್ವಿನಾಂ ತೇಜಃ - ತೇಜಸ್ವಿಗಳ ಮಧ್ಯದಲ್ಲಿ ಭೂರಿತೇಜಸ್ಸು. 

ಕೃಷ್ಣ ಎಂದರೆ 

ವ್ಯವಸಾಯೋ ಜಯಃ - ಸಮರಾಂಗಣದಲ್ಲಿ ಜಯ, ವಿಜಯ.

ಕೃಷ್ಣ ಎಂದರೆ 

ಸತ್ತ್ವವತಾಂ ಸತ್ತ್ವಮ್ - ಸಾತ್ತ್ವಿಕರ ಮಧ್ಯದಲ್ಲಿ ಸಾತ್ತ್ವಿಕ ಭಾವ.

ಕೃಷ್ಣ ಎಂದರೆ 

ವೃಷ್ಣೀನಾಂ ವಾಸುದೇವಃ - ವೃಷ್ಣಿ ವಂಶೀಯರಲ್ಲಿ ವಾಸುದೇವ. 

ಕೃಷ್ಣ ಎಂದರೆ 

ಪಾಂಡವಾನಾಂ ಧನಂಜಯಃ - ಪಾಂಡವರಲ್ಲಿ ಧನಂಜಯ, ಅರ್ಜುನ.

ಕೃಷ್ಣ ಎಂದರೆ 

ಮುನೀನಾಂ ವ್ಯಾಸಃ - ಮುನಿ, ಮುನಿಶ್ರೇಷ್ಠರಲ್ಲಿ ವ್ಯಾಸಮುನಿ. 

ಕೃಷ್ಣ ಎಂದರೆ 

ಕವೀನಾಂ ಉಶನಾ ಕವಿಃ - ಕವಿ, ಕವಿಶ್ರೇಷ್ಠರಲ್ಲಿ ಕವಿ ಶುಕ್ರಾಚಾರ್ಯ.

ಕೃಷ್ಣ ಎಂದರೆ 

ದಮಯತಾಂ ದಂಡಃ - ದಮನಮಾಡುವವರಲ್ಲಿ ದಂಡ.

ಕೃಷ್ಣ ಎಂದರೆ 

ಜಿಗೀಷತಾಂ ನೀತಿಃ - ಜಯವನ್ನು ಇಚ್ಛಿಸುವ ಜಿಗೀಷುಗಳಲ್ಲಿ ನೀತಿ ಮತ್ತು ನೀತಿಸಂಹಿತೆ.

ಕೃಷ್ಣ ಎಂದರೆ 

ಗುಹ್ಯಾನಾಂ ಮೌನಮ್ - ಗೌಪ್ಯವಿಷಯಗಳಲ್ಲಿ ಮೌನ. 

ಕೃಷ್ಣ ಎಂದರೆ 

ಜ್ಞಾನವತಾಂ ಜ್ಞಾನಮ್ - ಜ್ಞಾನಗಳ ಮಧ್ಯದಲ್ಲಿ ತತ್ತ್ವಜ್ಞಾನ.

ಕೃಷ್ಣ ಎಂದರೆ 

ಸರ್ವಭೂತಾನಾಂ ಬೀಜಃ - ಎಲ್ಲಕ್ಕೂ, ಸರ್ವಭೂತಗಳಿಗೂ ಕಾರಣಕರ್ತ.

ಕೃಷ್ಣ ಎಂದರೆ 

ತೇನ ವಿನಾ ಚರಾಚರಂ ಭೂತಂ ನಾಸ್ತಿ - ಅನ್ಯಥಾ ನಾಸ್ತಿ, ತ್ವಮೇವ ಶರಣಂ ಮಮ.

ಕೃಷ್ಣ ಎಂದರೆ 

ತೇನ ವಿನಾ ತೃಣಮಪಿ ನ ಚಲತಿ.

ಕೃಷ್ಣ ಎಂದರೆ 

ದಿವ್ಯಾನಾಂ ವಿಭೂತೀನಾಂ ನಾಂತಃ ಅಸ್ತಿ - 

ಕೃಷ್ಣ ಎಂದರೆ ದಿವ್ಯ. 

ಕೃಷ್ಣ ಎಂದರೆ ವಿಭೂತಿ, 

ಕೃಷ್ಣ ಎಂದರೆ ನಾಂತಃ - ಅಂತವಿಲ್ಲದ್ದು.

ಅಷ್ಟು ಮಾತ್ರವಲ್ಲ, 

ಕೃಷ್ಣ ಎಂದರೆ  ಅಂತವಿಲ್ಲದ ದಿವ್ಯ. 

ಕೃಷ್ಣ ಎಂದರೆ ಅನಂತ ವಿಭೂತಿ. 


ಕೃಷ್ಣ ಎಂದರೆ ಹೀಗೆಲ್ಲ,  ಹಾಗೆಲ್ಲ......,  ಎಂದು ನಾವು ಹೇಳುತ್ತಿಲ್ಲ. 

ಕೃಷ್ಣ ಎಂದರೆ ಹೀಗೆ, ಹೀಗೆ, ಹೀಗೆ....., ಎಂದು ನಾವು ಹೇಳುತ್ತಿಲ್ಲ. 

ಇದರಲ್ಲಿ ನಮ್ಮದೇನೂ ಇಲ್ಲ. ಇದಾವುದನ್ನೂ ನಾವು ಕಲ್ಪಿಸಿಕೊಂಡು ಹೇಳುತ್ತಿಲ್ಲ

ಇದು 100% ನಮ್ಮ ಸ್ವಕಪೋಲಕಲ್ಪಿತವಲ್ಲ.

ಇದೆಲ್ಲವನ್ನೂ ಖುದ್ದಾಗಿ ಕೃಷ್ಣನೇ ಹೇಳಿದ್ದಾನೆ.

ನಿಮಗೆ ಪ್ರಮಾಣ ಬೇಕೆಂದರೆ, ನೀವುಗಳು

ಭಗವದ್ಗೀತೆಯ 10ನೆಯ ಅಧ್ಯಾಯವನ್ನು ತೆರೆದುನೋಡಬಹುದು.

ಭಗವದ್ಗೀತೆಯ 10ನೇ ಅಧ್ಯಾಯದ 20ನೇ ಶ್ಲೋಕದಿಂದ 

ಸರಿಸುಮಾರು 10ನೇ ಅಧ್ಯಾಯದ 40ನೇ ಶ್ಲೋಕದವರೆಗೂ 

ಅಂದರೆ 10ನೇ ಅಧ್ಯಾಯ ಮುಗಿಯುವವರೆಗೂ 

ಕೃಷ್ಣ ತಾನೇನು, ತಾನೆಂಥವನು, ತಾನು ಹೇಗೆ, 

ಏನು,  ಎತ್ತ, ತನ್ನ ಚಾರುಚರ್ಯೆಗಳೇನು ಎಂಬುವ ಕುರಿತು 

ಸವಿಸ್ತಾರವಾಗಿ ಹೇಳಿದ್ದಾನೆ. 

ಈ ಒಂದು ಇಪ್ಪತ್ತು ಶ್ಲೋಕಗಳಲ್ಲಿ 

ಕೃಷ್ಣನ ಸಂಪೂರ್ಣ “ಬಯೋಡಾಟಾ”  Bio- Data ಇದೆ. 

ಕೃಷ್ಣನನ್ನು ನಾವು, ನೀವುಗಳು ಪರಿಚಯಿಸಬೇಕಿಲ್ಲ. 

ಕೃಷ್ಣ ಸ್ವತಃ ತನ್ನನ್ನು ತಾನೇ ಪರಿಚಯಿಸಿಕೊಂಡಿದ್ದಾನೆ.

ಕೃಷ್ಣ ತನ್ನ ಆತ್ಮಕಥೆಗೆ ತಾನೇ ಧ್ವನಿಯಾಗಿದ್ದಾನೆ. 

ಕೃಷ್ಣ ತನ್ನ ಕಥೆಗೆ ತಾನೇ ಉವಾಚವಾಗಿದ್ದಾನೆ.  

ಕೊನೆಯಲ್ಲಿ ಮತ್ತೆ, ಮತ್ತೊಂದು ಸಲ ಕೃಷ್ಣ ಅರ್ಜುನನಿಗೆ 

ಇನ್ ಎ ನಟ್‌ಶೆಲ್ - In a nutshell (ಸಂಕ್ಷಿಪ್ತವಾಗಿ) ಮಾದರಿಯಲ್ಲಿ

ಮತ್ತು “ಸಿನಾಪ್ಸಿಸ್” Synopsis (ಸಾರಾಂಶ, ಮುಖ್ಯಾಂಶ) ಮಾದರಿಯಲ್ಲಿ ಹೇಳುತ್ತಾನೆ,

“ಯತ್ ಯತ್ ವಿಭೂತಿಮತ್ ಸತ್ತ್ವಂ ಶ್ರೀಮದೂರ್ಜಿತಮೇವ ವಾ |

ತತ್ ತದೇವ ಅವಗಚ್ಛ, ತ್ವಂ ಮಮ ತೇಜೋS<ಂಶ ಸಂಭವಮ್ || 

ಅಥವಾ ಬಹುನಾ ಏತೇನ ಕಿಂ ಜ್ಞಾತೇನ ತವಾರ್ಜುನ |

ವಿಷ್ಟಭ್ಯಾಹಮಿದಂ ಕೃತ್ಸ್ನಂ ಏಕಾಂಶೇನ ಸ್ಥಿತೋ ಜಗತ್ ||''  ಎಂದು.

ಇದು ಕಾರಣ, ಈ ಎಲ್ಲವೂ, ಈ ಸಚರಾಚರವೆಲ್ಲವೂ ಕೃಷ್ಣಮಯ

ಈ ಎಲ್ಲವೂ ``ಕೃಷ್ಣಸಂಭವ'' ಮತ್ತು ``ಕೃಷ್ಣತೇಜೋಸಂಭವ''. 

ಇದೆಲ್ಲವೂ “ಈಶಾವಾಸ್ಯ” ಮತ್ತು “ಈಶಾವಾಸ್ಯಮಿದಂ ಸರ್ವಂ” ಎಂದು

ಈಶೋಪನಿಷತ್ತು, ಈಶಾವಾಸ್ಯೋಪನಿಷ್ತು ಹೇಳುವ ಹಾಗೆ

ಈ ಎಲ್ಲವೂ “ಕೃಷ್ಣಾವಾಸ್ಯ” 

ಮತ್ತು “ಕೃಷ್ಣಾವಾಸ್ಯಮಿದಂ ಸರ್ವಮ್”!!

ಇಂಥ ಮಹಾನುಭಾವನಿಗೆ 

ಮತ್ತು ಪರಮಾನುಭವದ ಪ್ರಮುಖ ವಕ್ತಾರ 

ಶ್ರೀಕೃಷ್ಣ ಪರಮಾತ್ಮನಿಗೆ

ಆತನ ಹುಟ್ಟುಹಬ್ಬದಂದು, 

ಆತನ ಜನ್ಮದಿನದಂದು ನಾವು, ನೀವುಗಳೆಲ್ಲ ಸೇರಿ 

“ಹ್ಯಾಪಿ ಬರ್ಥಡೇ”, Happy Birthday 

 “ಹ್ಯಾಪಿ ಜನ್ಮಾಷ್ಟಮಿ” Happy Janmaashtami ಹೇಳುವಾ.

ಹಾಗೆಯೇ ಆತನಿಗೆ ಕರಮುಗಿದು ಶಿರಬಾಗಿ ವಂದಿಸುವಾ.

ಆತನಿಗೆ “ನಮಸ್ತೇ”, “ನಮೋ ನಮಃ”

ಮತ್ತು “ಜೈ ಹೋ” ಹೇಳುವಾ. 




ಡಾ. ಶಿವಾನಂದ ಶಿವಾಚಾರ್ಯರು
                                                                ಹಿರೇಮಠ, ತುಮಕೂರು

Comments

Popular posts from this blog