ತಪೋವನದಲ್ಲಿ ಶ್ರಾವಣ ಮಾಸದ ಕೊನೆಯ ಸೋಮವಾರದಂದು “ಓಂ ನಮೋ ಶ್ರಾವಣ, ಉಘೇ ಶ್ರಾವಣ” ಕಾರ್ಯಕ್ರಮ.
ತುಮಕೂರು ಹಿರೇಮಠ
ತಪೋವನದಲ್ಲಿ ಶ್ರಾವಣ ಮಾಸದ
ಕೊನೆಯ ಸೋಮವಾರದಂದು
“ಓಂ ನಮೋ ಶ್ರಾವಣ, ಉಘೇ ಶ್ರಾವಣ”
ಕಾರ್ಯಕ್ರಮ
ತುಮಕೂರು ಹಿರೇಮಠಾಧ್ಯಕ್ಷರಾದ
ಡಾ. ಶ್ರೀ ಶ್ರೀ ಶಿವಾನಂದ ಶಿವಾಚಾರ್ಯ
ಮಹಾಸ್ವಾಮಿಗಳವರ ಜೊತೆಯಲ್ಲಿ
ಶಿವಪೂಜೆ ಮತ್ತು ಸಾಮೂಹಿಕ ಇಷ್ಟಲಿಂಗಪೂಜೆ.
ದಿನಾಂಕ: 22. 08. 2022, ಸೋಮವಾರದಂದು
ಸಮಯ: ಬೆಳಿಗ್ಗೆ 08. 00 ಗಂಟೆಗೆ
ಭಾರತದ ಸ್ವಾತಂತ್ರ್ಯೋತ್ಸವದ
ಅಮೃತ ಮಹೋತ್ಸವದ ನಿಮಿತ್ತ
ಭಾರತ ಶಾಂತಿಗಾಗಿ ಮತ್ತು ವಿಶ್ವಶಾಂತಿಗಾಗಿ
ಸಾಮೂಹಿಕ ಶಿವಸಂಕಲ್ಪ
ನಮಕ, ಚಮಕ, ಪುರುಷಸೂಕ್ತದೊಂದಿಗೆ
ಸಾಮೂಹಿಕ ರುದ್ರಾಭಿಷೇಕ
ಅಂಗೈನಲ್ಲಿರುವ ಲಿಂಗಯ್ಯನಿಗೆ
ಅಷ್ಟವಿಧಾರ್ಚನೆ ಮತ್ತು ಷೋಡಶೋಪಚಾರ ಪೂಜೆ.
ಅಷ್ಟೋತ್ತರ ಶತನಾಮಾವಲಿಯೊಂದಿಗೆ ಜಪಯಜ್ಞ
ಪ್ರಣವಸಹಿತ ಪಂಚಾಕ್ಷರಮಂತ್ರ ಜಪಯಜ್ಞ
ಮಹಾಮಂಗಳಾರುತಿ
ಗುರುಗಳ ಪಾದಪೂಜೆ
ಮತ್ತು ತೀರ್ಥ, ಪ್ರಸಾದ ವಿತರಣ
ಶ್ರೀ ಶ್ರೀಗಳವರಿಂದ
“ನಮೋ ಶ್ರಾವಣ,
ಉಘೇ ಶ್ರಾವಣ” ಕುರಿತು ಆಶೀರ್ವಚನ
ಆಗಮಿಸಿದ ಎಲ್ಲ ಭಕ್ತರಿಗೂ
ಗುರುಗಳಿಂದ ಆಶೀರ್ವಾದ
ಪೂಜೆಯ ನಂತರ ಭಕ್ತಾದಿಗಳೆಲ್ಲರಿಗೂ
ಮಹಾಪ್ರಸಾದ ಮತ್ತು ದಾಸೋಹ
ಇದೇ ಸಂದರ್ಭದಲ್ಲಿ,
ಸಮಾಜದಲ್ಲಿ
ಸಮಾಜಮುಖಿಯಾಗಿ ಕೆಲಸಮಾಡಿ
“ಸೈ” ಎನ್ನಿಸಿಕೊಂಡ ಸತ್ಯಶುದ್ಧಕಾಯಕವೀರರನ್ನು
ಗೌರವಿಸಿ ಅಭಿನಂದಿಸಲಾಗುವುದು.
ಆಗಮಿಸಿದ ಭಕ್ತರು ಸಾಯಂಕಾಲದವರೆಗೆ
ತಪೋವನದಲ್ಲಿ ನಡೆಯುವ
ಸತ್ಕಥಾಲಾಪ, ಭಜನೆ, ಸತ್ಸಂಗ,
ನಾಮಜಪ ಕಾರ್ಯಕ್ರಮದಲ್ಲಿ
ಪಾಲ್ಗೊಳ್ಳಬಹುದು.
ತಪೋವನವು ತುಮಕೂರಿನಿಂದ
16 ಕಿ. ಮೀ. ದೂರದಲ್ಲಿದೆ
ಮತ್ತು
ಬೆಂಗಳೂರಿನಿಂದ 45. ಕಿ. ಮೀ. ದೂರದಲ್ಲಿದೆ.
ಹಳೇ ನಿಜಗಲ್‌ನ ಉದ್ದಾನ ವೀರಭದ್ರಸ್ವಾಮಿ
ದೇವಸ್ಥಾನದ ಹತ್ತಿರದಲ್ಲಿದೆ.
(ತುಮಕೂರಿನಿಂದ ಒಂದಷ್ಟು
ದೂರವೇನೋ ಅಹುದು.
ಆದರೆ ಕಾಶಿ, ಕೇದಾರ, ಕೈಲಾಸದಷ್ಟು ದೂರವಲ್ಲ:
ಪುಣ್ಯಕ್ಕಾಗಿ, ಪುಣ್ಯಪ್ರಾಪ್ತಿಗಾಗಿ
ಮತ್ತು ಒಂದಷ್ಟು ಮಾನಸಿಕ ನೆಮ್ಮದಿಗಾಗಿ!!)
ಆಸ್ತಿಕ ಮಹಾಶಯರಿಗೆ ಮತ್ತು ಆಸಕ್ತರೆಲ್ಲರಿಗೂ
ಹೃತ್ಪೂರ್ವಕ ಸ್ವಾಗತ, ಸುಸ್ವಾಗತ
ಹಿರೇಮಠ ಮತ್ತು ತಪೋವನ, ತುಮಕೂರು
Comments
Post a Comment