Good Morning, Happy Sunday
28th August 2022
@ Hiremath, TapOvanam, Tumkur
ಅಮಾವಾಸ್ಯೆ ಇದು,
ಬಿದಾಯೀ, ಬಧಾಯಿಗಳ ಸುಂದರ ವೇದಿಕೆ, ಕೂಡಲಸಂಗಮ.
ಅಮಾವಾಸ್ಯೆಯಲ್ಲಿ ಒಂದು ಮಾಜಿಯಾಗುತ್ತದೆ;
ಇನ್ನೊಂದು ಹಾಲಿಯಾಗುತ್ತದೆ.
ಅಮಾವಾಸ್ಯೆಯು ಒಂದು ಮಾಸಕ್ಕೆ ನಿವೃತ್ತಿ ವೇದಿಕೆಯಾದರೆ
ಇನ್ನೊಂದು ಮಾಸಕ್ಕೆ ಅದು ಸ್ವಾಗತ ವೇದಿಕೆಯಾಗುತ್ತದೆ.
ಅಮಾವಾಸ್ಯೆಯು ಒಂದು ಮಾಸದ ತಿಥಿಗೆ ಸಾಕ್ಷಿಯಾದರೆ
ಇನ್ನೊಂದು ಮಾಸದ ಜಯಂತಿಗೆ ಸಾಕ್ಷಿಯಾಗುತ್ತದೆ.
ಒಂದೆಡೆ ನಿನ್ನೆಯ ಅಮಾವಾಸ್ಯೆ
(27. 08. 2022)
ಶ್ರಾವಣ ಮಾಸದ ಬೀಳ್ಕೊಡುಗೆಗೆ ವೇದಿಕೆಯಾದರೆ
ಇನ್ನೊಂದು ಕಡೆ ಅದು ಭಾದ್ರಪದ ಮಾಸದ
ಸ್ವಾಗತಕ್ಕೆ ವೇದಿಕೆಯಾಯಿತು.
ನಿನ್ನೆ ಶ್ರಾವಣ ಮಾಸಕ್ಕೆ ಬೀಳ್ಕೊಡುಗೆ!
ಭಾದ್ರಪದ ಮಾಸಕ್ಕೆ ಸುಸ್ವಾಗತ!!
ನಿನ್ನೆ ಶ್ರಾವಣ ಮಾಸಕ್ಕೆ ಬಿದಾಯೀ
ಭಾದ್ರಪದ ಮಾಸಕ್ಕೆ ಬಧಾಯೀ
ನಿನ್ನೆಗೆ ಶ್ರಾವಣ ಮಾಸ
ತನ್ನ ಅವಧಿಯನ್ನು ಪೂರೈಸಿ ಮಾಜಿಯಾಯಿತು.
ಭಾದ್ರಪದ ಮಾಸ ನಿನ್ನೆ ತಾನೆ
ಪದಗ್ರಹಣ ಮಾಡಿ ಹಾಲಿಯಾಯಿತು.
ಶ್ರಾವಣಮಾಸ ಶಿವಪೂಜೆಗೆ ಮೀಸಲು
ಭಾದ್ರಪದಮಾಸ ಗೌರೀ, ಗಣೇಶಪೂಜೆಗೆ ಮೀಸಲು
ಶ್ರಾವಣ ಮಾಸದಲ್ಲಿ ಹರ ಹರ ಮಹಾದೇವ.
ಭಾದ್ರಪದ ಮಾಸದಲ್ಲಿ ವಕ್ರತುಂಡ ಮಹಾಕಾಯ.
ಶ್ರಾವಣ ಮಾಸದಲ್ಲಿ “ಹರ ಹರ, ಪರಿಹರ”.
ಭಾದ್ರಪದ ಮಾಸದಲ್ಲಿ “ಅವಿಘ್ನಂ ಕುರು ಮೇ ದೇವ”.
ಶ್ರಾವಣ ಮಾಸದಲ್ಲಿ ಆಗಸ್ಟ್ 15, ಸ್ವಾತಂತ್ರ್ಯ ದಿನಾಚರಣೆ.
ಭಾದ್ರಪದ ಮಾಸದಲ್ಲಿ ಸೆಪ್ಟೆಂಬರ್ 5, ಶಿಕ್ಷಕ ದಿನಾಚರಣೆ.
ಶ್ರಾವಣ ಮಾಸದಲ್ಲಿ ರಾಷ್ಟ್ರದೇವೋ ಭವ.
ಭಾದ್ರಪದ ಮಾಸದಲ್ಲಿ ಆಚಾರ್ಯ ದೇವೋ ಭವ.
ಭಾದ್ರಪದ ಮಾಸದಲ್ಲಿ ನಾವೆಲ್ಲರೂ
“ಭದ್ರಂ ಕರ್ಣೇಭಿಃ ಶ್ರುಣುಯಾಮ ದೇವಾಃ
ಭದ್ರಂ ಪಶ್ಯೇಮಾಕ್ಷಿಭಿರ್ಯಜತ್ರಾಃ |
ಸ್ಥಿರೈರಂಗೈಸ್ತುಷ್ಟುವಾಂಗ್ಸ್‌ಸ್ತನೂಭಿಃ
ವ್ಯಶೇಮ ದೇವಹಿತಂ ಯದಾಯುಃ ||”
ಎಂದು ಹೇಳಿಕೊಂಡಿರೋಣ.
ಭಾದ್ರಪದ ಮಾಸದಲ್ಲಿ ಆದಷ್ಟು
ಎಲ್ಲರೂ ಭದ್ರವಾಗಿರೋದನ್ನೇ
ಯೋಚಿಸಿಕೊಂಡಿರೋಣ.
ಆದಷ್ಟು ಮತ್ತು ಯಥಾಸಾಧ್ಯ
ಅಭದ್ರವಾಗಿರುವ ಉಪದ್ರವಕಾರಿ ಯೋಚನೆ,ಆಲೋಚನೆಗಳಿಂದ
ಸುರಕ್ಷಿತ ಅಂತರವನ್ನು ಕಾಯ್ದುಕೊಂಡಿರೋದಕ್ಕೆ
ಪ್ರಯತ್ನಿಸಿಕೊಂಡಿರೋಣ.
ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತುಮಕೂರು
Comments
Post a Comment