Good Morning, Happy Wednesday

24th August 2022 @ TapOvanam, Hiremath, Tumkur





ಹೊಟ್ಟೆ ತುಂಬ ಊಟ ಕೊಡೋದನ್ನು
ರೂಢಿಸಿರುವ ಸರಕಾರಗಳು
ಜನಗಳಿಗೆ ಕೈ ತುಂಬ ಕೆಲಸ ಕೊಟ್ಟು
ಕೈ ತುಂಬ ಸಂಬಳ ಕೊಡೋದನ್ನು ರೂಢಿಸಿದ್ದರೆ
ಈ ದೇಶದಲ್ಲಿ ಕಾಯಕವೇ ಕೈಲಾಸವಾಗುತ್ತಿತ್ತು.
ಜನಗಳಿಗೆ ಕೈ ತುಂಬ ಕೆಲಸ ಕೊಡದೆ
ಹೊಟ್ಟೆ ತುಂಬ ಉಚಿತವಾಗಿ
ಊಟ ಮತ್ತು ಊಟದ ಸಾಮಗ್ರಿಗಳನ್ನು
ಕೊಡುತ್ತಿರುವುದರಿಂದ
ಕಾಯಕವೀಗ ಕೈಲಾಸವಾಸಿಯಾಗಿದೆ.
ಭಾರತವೀಗ ಸೋಂಬೇರಿಗಳ ಸ್ವರ್ಗವಾಗಿದೆ.
ನೀವೇನಾದರೂ ಕೆಲಸ ಮಾಡಿಸಬೇಕೆಂದರೆ
ಈಗ ನಿಮಗೆ ಕೆಲಸಗಾರರು ಸಿಕ್ಕುವುದೇ ಕಷ್ಟವಾಗಿದೆ.
ಯಾವುದಕ್ಕೂ ಜನ್ಮಭೂಮಿ ಸ್ವರ್ಗಕ್ಕಿಂತಲೂ ಶ್ರೇಷ್ಠ
ಎಂಬ ನಮ್ಮ ಶ್ರೀರಾಮಚಂದ್ರನ ಮಾತು ಸುಳ್ಳಾಗಲಿಲ್ಲ ಬಿಡಿ.
ಏನಕೇನ ಪ್ರಕಾರೇಣ ರಾಮನ ಮಾತು ಸತ್ಯವಾಗಿದೆ!!
ಕಾಯಕ ಕೈಲಾಸಕ್ಕೆ ಹೋಗಿದೆ,
ಜನ್ಮಭೂಮಿ ಸ್ವರ್ಗವಾಗಿದೆ.
ಜನಗಳು ಸೋಮಾರಿತನವನ್ನು ಸುಖಿಸಿಕೊಂಡಿದ್ದಾರೆ.


ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತುಮಕೂರು

Comments

Popular posts from this blog