Our Indian Flag
ನಮ್ಮ ರಾಷ್ಟ್ರದ ತ್ರಿವರ್ಣ ಧ್ವಜ ತ್ಯಾಗ, ಭೋಗ, ಯೋಗಗಳ ಸಂಗಮ.
ಕೇಸರಿ ವರ್ಣ ತ್ಯಾಗದ ದ್ಯೋತಕವಾದರೆ
ಹಸಿರು ವರ್ಣ ಭೋಗದ ದ್ಯೋತಕ.
ಬಿಳಿ ವರ್ಣವಿದು ಯೋಗದ ದ್ಯೋತಕ.
ತ್ಯಾಗ, ಭೋಗಗಳ ಯೋಗವೇ ನಮ್ಮ ಭಾರತ.
ತ್ಯಾಗ, ಭೋಗ, ಯೋಗವೇ ನಮ್ಮ ಸಂಸ್ಕೃತಿ.
ಹಾಗಾದರೆ ಮಧ್ಯದಲ್ಲಿರುವ ಚಕ್ರ ಏನು?
ಚಕ್ರವದು ನಮ್ಮ ದೇಶ ತ್ಯಾಗ, ಭೋಗ, ಯೋಗಗಳ
ಸುತ್ತಮುತ್ತ ತಿರುಗಿಕೊಂಡಿರುತ್ತದೆ ಎಂಬುವುದಕ್ಕೆ ಅನ್ವರ್ಥಕ.
ಚಕ್ರವದು ಬರೀ ಚಕ್ರವಲ್ಲ. ಅದು ಅಶೋಕ ಚಕ್ರ.
ತ್ಯಾಗ, ಭೋಗ, ಯೋಗಗಳ ಸುತ್ತಮುತ್ತ ತಿರುಗಿಕೊಂಡಿದ್ದರೆ ಸುಖವಾಗಿರುತ್ತಿಯಾ.
ಹಾಗಿದ್ದರೆ ಅಳುವ ಪ್ರಸಂಗ ಬರುವುದಿಲ್ಲ.
ಬರೀ ಭೋಗ, ಭೋಗ ಎಂದು ಅಂದುಕೊಂಡಿದ್ದರೆ ಅಳುತ್ತಿಯಾ ಎಂದರ್ಥ.
ಅಳಬಾರದು, ಶೋಕಿಸಬಾರದು ಎಂದರೆ ತ್ಯಾಗ, ಭೋಗ, ಯೋಗಗಳನ್ನು
ನಿಮ್ಮ ಜೀವನಶೈಲಿಯನ್ನಾಗಿ ಮಾಡಿಕೊಳ್ಳಿ ಎಂದು ಅಶೋಕ ಚಕ್ರ ಸೂಚಿಸುತ್ತದೆ.
ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತುಮಕೂರು
ಡಾ. ಶಿವಾನಂದ ಶಿವಾಚಾರ್ಯರು, ಹಿರೇಮಠ, ತುಮಕೂರು
Comments
Post a Comment