- Get link
- X
- Other Apps
Good Evening, Happy Monday, 12th September 2022
@ TapOvanam, Hiremath, Tumkur
ದಾಸರ ಮಾತು, ಬರೀ ಮಾತಲ್ಲ;
ಅದು ವಾಣಿ ದಾಸವಾಣಿ.
ಅದು ಆರ್ಷವಾಣಿ.
ಬಿಂದಾಸ್ ಮಾತು,
ಬರೀ ಮಾತು, ಬಾಯ್ಮಾತು ಅಷ್ಟೇ.
ದಾಸರ ಮಾತು, ದಾಸ ಉವಾಚವಿದು
ದಾಸವಾಣಿಯಾಗುತ್ತದೆ.
ಅಂತಿಂಥ ಬಿಂದಾಸ್ ಮಾತು, ಗಾಳಿಮಾತಾಗುತ್ತದೆ.
ದಾಸರ ಮಾತಲ್ಲಿ ಘನತೆ ಇದೆ,
ಗೌರವ ಇದೆ, ಗಾಂಭೀರ್ಯವಿದೆ.
ಬಿಂದಾಸ್ ಮಾತುಗಳಲ್ಲಿ ಮೇಲಿನ
ಈ ಯಾವೊಂದೂ ಅಕ್ಷರಶಃ ಇಲ್ಲ.
ದಾಸರ ಮಾತುಗಳಲ್ಲಿ ತೂಕವಿದೆ.
ಬಿಂದಾಸ್ ಮಾತುಗಳಲ್ಲಿ ತೂಕವಿಲ್ಲ.
ದಾಸರ ಮಾತು ಅನುಭವಕ್ಕೆ ವೇದಿಕೆಯಾಗುತ್ತದೆ.
ಬಿಂದಾಸ್ ಮಾತು ಚರ್ಚೆಗೆ ವೇದಿಕೆಯಾಗುತ್ತದೆ.
ದಾಸರ ಮಾತು ದಿಕ್ಕು ತೋರಿಸುತ್ತದೆ.
ಬಿಂದಾಸ್ ಮಾತು ದಿಕ್ಕು ತಪ್ಪಿಸುತ್ತದೆ.
ದಾಸರ ಮಾತು ಅನುಭವಮಂಟಪ.
ಬಿಂದಾಸ್ ಮಾತು ಸಮಾಜಕಂಟಕ.
ದಾಸರ ಮಾತು ವಿಶ್ವವಿದ್ಯಾಲಯ.
ಬಿಂದಾಸ್ ಮಾತು ವಿಷಮೋದ್ಯಮ.
ದಾಸರ ಮಾತು ಪ್ರಮಾಣ.
ಬಿಂದಾಸ್ ಮಾತು ಪ್ರಮಾಣವಲ್ಲ.
ದಾಸರ ಮಾತು ಪ್ರಮಾಣವಾದ ಕಾರಣ,
ಕನಕದಾಸರು, ಪುರಂದರದಾಸರು, ಸೂರದಾಸ್‌ರು, ಕಬೀರದಾಸರು
ಇವರೆಲ್ಲರುಗಳ ಮಾತುಗಳು ಪ್ರಮಾಣವಾಗಿವೆ ಮತ್ತು ಜನವಾಣಿಯಾಗಿವೆ.
ಬಿಂದಾಸ್ ಮಾತುಗಳು ಬರೀ ಗಾಳಿಮಾತುಗಳಾಗಿದ್ದರಿಂದ
ಪ್ರಮಾಣವಾಗದೆ ಅವು ಅಲ್ಲಿ, ಇಲ್ಲಿ, ಅಲ್ಲಲ್ಲಿ ಸೋರಿಹೋಗಿವೆ.
ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತುಮಕೂರು
1Latha Aradhya
- Get link
- X
- Other Apps
Comments
Post a Comment