- Get link
- X
- Other Apps
Good Evening, Happy Sunday 11th September 2022 @ TapOvanam, Hiremath, Tumkur
ಡಾ. ಶಿವಾನಂದ ಶಿವಾಚಾರ್ಯರು
ತುಮಕೂರು 11:
“ಶಿಕ್ಷಕರು ಅಕ್ಷರಲೋಕದ ಒಡನಾಡಿಗಳು.
ಅಕ್ಷರವೇ ಅವರ ಪರಮಾರ್ಥ ಮತ್ತು ಅಕ್ಷರವೇ ಅವರ ಪುರುಷಾರ್ಥ.
ಅಕ್ಷರವೇ ಅವರ ಧರ್ಮ, ಅರ್ಥ, ಕಾಮ, ಮೋಕ್ಷ.
ಶಿಕ್ಷಕರು ಮಕ್ಕಳ ಬಾಳಲ್ಲಿ ಬೆಳಕನ್ನು ತುಂಬುವ ಬೆಳದಿಂಗಳು.
ಶಿಕ್ಷಕರು ಉದ್ಯೋಗಿಗಳಲ್ಲ. ಅವರು ಯೋಗಿಗಳು.
ಅವರದು ಅಕ್ಷರಯೋಗ ಮತ್ತು ಅವರದು ಅಕ್ಷರತಪಸ್ಸು.
ಶಿಕ್ಷಕರು ಅಕ್ಷರದೇವರು. ಅಷ್ಟು ಮಾತ್ರವಲ್ಲ,
ಶಿಕ್ಷಕರಿಗೆ ಅಕ್ಷರವೇ ದೈವ.
ಮಕ್ಕಳಿಗೆ ಶಿಕ್ಷಕರು ಸಾಕ್ಷಾತ್ ದೇವರು.
ಮಕ್ಕಳಿಗೆ ಶಿಕ್ಷಕರು ಗುರುರ್ಬ್ರಹ್ಮ,
ಗುರುರ್ವಿಷ್ಣುಃ, ಗುರುರ್ದೇವೋ ಮಹೇಶ್ವರಃ.
ಶಿಕ್ಷಕರು ಪಡೆಯುವುದು ಸಂಬಳವಲ್ಲ.
ಅದು ವೇತನವಲ್ಲ. ಅದು ಸ್ಯಾಲರಿಯಲ್ಲ. ಅದು ಪೇಮೆಂಟ್ ಅಲ್ಲ.
ಅದು ಗೌರವಧನ. ಅದು ಗೌರವಸಂಭಾವನೆ. ಅದು ಗುರುದಕ್ಷಿಣೆ.
ಅನುದಾನಸಹಿತ ಶಾಲೆಗಳಲ್ಲಿ ಸರಕಾರ ಶಿಕ್ಷಕರಿಗೆ ಗುರುದಕ್ಷಿಣೆಯನ್ನು ಕೊಟ್ಟರೆ
ಅನುದಾನರಹಿತ ಶಾಲೆಗಳಲ್ಲಿ ಸಂಸ್ಥೆಗಳು ಶಿಕ್ಷಕರಿಗೆ ಗುರುದಕ್ಷಿಣೆಯನ್ನು ಕೊಡುತ್ತವೆ.
ಹಾಗೆಯೇ ಶಿಕ್ಷಕರೂ ಸಹ
ತಾವು ಸಂಬಳಕ್ಕಾಗಿ ದುಡಿಯುತ್ತಿದ್ದೇವೆ
ಎಂದು ಅಂದುಕೊಳ್ಳಕೂಡದು.
ಶಿಕ್ಷಕರು ತಮ್ಮನ್ನು ತಾವು ಮಕ್ಕಳ ಭವಿಷ್ಯಕ್ಕಾಗಿ ಶ್ರಮಿಸುತ್ತಿದ್ದೇವೆ,
ದೇಶಕ್ಕೊಂದು ಭದ್ರಭವಿಷ್ಯವನ್ನು ರೂಪಿಸಿಕೊಡುವುದಕ್ಕಾಗಿ
ತಮ್ಮನ್ನು ತಾವು ತೊಡಗಿಸಿಕೊಂಡಿದ್ದೇವೆ ಎಂದು ಅಂದುಕೊಳ್ಳಬೇಕು.
ನಾವು ಜನಗಳು, ಶಿಕ್ಷಕರನ್ನು ವೃತ್ತಿನಿರತರು ಎಂದು ಭಾವಿಸದೆ
ಅವರನ್ನು ಅಕ್ಷರದಾಸೋಹನಿರತರು ಎಂದು ಭಾವಿಸಬೇಕು.
ಶಿಕ್ಷಕರು ಯಾವುದೇ ಕಾರಣಕ್ಕೂ ತಮ್ಮನ್ನು ತಾವು ದೂಷಿತ, ಕಲುಷಿತಗೊಳ್ಳಿಸಿಕೊಳ್ಳಬಾರದು.
ಏಕೆಂದರೆ ಸಾಕ್ಷರರು ವಿಪರೀತರಾದರೆ,
ಮತ್ತವರು ಉಲ್ಟಾ ಹೊಡೆದರೆ ರಾಕ್ಷಸರಾಗುತ್ತಾರೆ”
- ಎಂದು ತುಮಕೂರು ಹಿರೇಮಠಾಧ್ಯಕ್ಷರಾದ ಡಾ. ಶ್ರೀ ಶ್ರೀ ಶಿವಾನಂದ
ಶಿವಾಚಾರ್ಯ ಸ್ವಾಮೀಜಿಯವರು
ತುಮಕೂರಿನಲ್ಲಿ ನಡೆದ ಶಿಕ್ಷಕ ದಿನಾಚರಣೆ
ಮತ್ತು ಪ್ರತಿಭಾನ್ವಿತ ಶಿಕ್ಷಕಿಯರಿಗೆ
ಗೌರವ ಸಮರ್ಪಣೆ ಕಾರ್ಯಕ್ರಮವನ್ನು
ಉದ್ಘಾಟಿಸಿ ಆಶೀರ್ವಚನವನ್ನು ನೀಡುತ್ತ
ಈ ಮೇಲಿನ ಮಾತುಗಳನ್ನು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ
ಶ್ರೀಮತಿ ಲೀಲಾವತಿ ರೇಣುಕಾಪ್ರಸಾದ್‌ರವರು ಮಾತನಾಡುತ್ತ,
“ಶಿಕ್ಷಕವೃತ್ತಿಗೆ ನಿವೃತ್ತಿಯೇ ಇಲ್ಲ.
ಶಿಕ್ಷಕರು ಅದೊಮ್ಮೆ ಶಿಕ್ಷಕರಾದರೆ
ಅವರು ಆಮರಣಪರ್ಯಂತ ಶಿಕ್ಷಕರೇ”
ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸರಕಾರದಿಂದ
ಮತ್ತು ಹತ್ತು ಹಲವಾರು ಸಂಘ, ಸಂಸ್ಥೆಗಳಿಂದ
“ಅತ್ಯುತ್ತಮ ಶಿಕ್ಷಕಿ” ಪ್ರಶಸ್ತಿವಿಜೇತರಾದ
ಶ್ರೀಮತಿ ಮಂಜುಳಾದೇವಿಯವರ
70ನೇ ಜನ್ಮವರ್ಧಂತಿ ಮಹೋತ್ಸವವನ್ನು
ಆಚರಿಸುತ್ತ ಅವರನ್ನು
ತುಂಬು ಅಭಿಮಾನದಿಂದ ಗೌರವಿಸಲಾಯಿತು.
ಹಾಗೆಯೇ ಪ್ರತಿಭಾನ್ವಿತ ಶಿಕ್ಷಕಿಯರಾದ
ಶ್ರೀಮತಿ ನಾಗಲಾಂಬಿಕೆ (ನಿಡವಂದ),
ಶ್ರೀಮತಿ ಬಿ. ಜಲಜಾಕ್ಷಿ (ಗುಡಿಪಾಳ್ಯ),
ಶ್ರೀಮತಿ ಟಿ. ವಿ. ಮಂಜುಳಾದೇವಿ (ಬಾಗಲೂರು),
ಶ್ರೀಮತಿ ಟಿ. ಆರ್. ಆಶಾಕಿರಣ್ (ದಾವಣಗೆರೆ),
ಶ್ರೀಮತಿ ಟಿ. ವಿ. ಲಲಿತಮ್ಮ (ಗುಬ್ಬಿ),
ಶ್ರೀಮತಿ ರತ್ನಮ್ಮ (ಮಾಗಡಿ)
ಹಾಗೂ ಸಮಾಜಸೇವಕಿ
ಮತ್ತು ಮೈಸೂರು ಟ್ರಾಫಿಕ್ ವಾರ್ಡನ್
ಶ್ರೀಮತಿ ಟಿ. ಆರ್. ಮಾಲಿನಿ ಫಾಲಾಕ್ಷ
ಇವರುಗಳನ್ನು ಗೌರವಿಸಿ ಅಭಿನಂದಿಸಲಾಯಿತು.
Like
Comment
Share
- Get link
- X
- Other Apps
Comments
Post a Comment