Good Evening, Happy Thursday
8th September 2022
@ TapOvanam, Hiremath, Tumkur
ಈ ಮೊದಲು ಸುದ್ದಿಮಾಧ್ಯಮಗಳು ಮಾಹಿತಿಯ ಸರಕುಗಳಾಗಿದ್ದವು.
ಈಗ ಬಹುತೇಕ ಮಾಧ್ಯಮಗಳು ಮನರಂಜನೆಯ ಸರಕುಗಳಾಗಿಬಿಟ್ಟಿವೆ.
ಇತ್ತೀಚಿನ ದಿನಗಳಲ್ಲಿ ಬಹುತೇಕ ಮಾಧ್ಯಮಗಳಲ್ಲಿ
“ಜನಗಳು ಸುದ್ದಿಯನ್ನು ಕೇಳಲಿ”, “ಮಾಹಿತಿಯನ್ನು ಪಡೆದುಕೊಳ್ಳಲಿ” -
ಎಂಬ ಕಾಳಜಿ, ಕಳಕಳಿಗಿಂತ ಜನಗಳು ಸುದ್ದಿಯನ್ನು “ಎಂಜಾಯ್” ಮಾಡಲಿ,
ಜನಗಳು ಸುದ್ದಿಯನ್ನು “ರೆಲಿಶ್” ಮಾಡಲಿ ಎಂಬ ತವಕ ಹೆಚ್ಚಾಗುತ್ತಲಿದೆ.
ಸುದ್ದಿಗಳು “ಲ್ಯಾವಿಶ್” ಆಗಿರಬೇಕು; ಸುದ್ದಿಗಳು “ಕಮರ್‌ತೋಡ್” ಆಗಿರಬೇಕು;
ಸುದ್ದಿ ಸ್ಫೋಟಕವಾಗಿರಬೇಕು, ಅದು ``ಬ್ರೆಕಿಂಗ್'' ಇರಬೇಕು” ಅಷ್ಟೇ.
ಅದರಿಂದ ಸಮಾಜದ ಮೇಲೆ ಮತ್ತು ಸಾಮಾಜಿಕದ ಮೇಲೆ,
ಚಿಕ್ಕಪುಟ್ಟ ಮಕ್ಕಳ ಮೇಲೆ, ಮಕ್ಕಳ ಮನಸ್ಸಿನ ಮೇಲೆ
ಅದೇನು ಪರಿಣಾಮವಾಗುತ್ತದೆ? ಅದೆಂಥ ಪರಿಣಾಮವಾಗುತ್ತದೆ?” -
ಎಂಬ ಸಾಮಾನ್ಯ ಜ್ಞಾನ, ಕನಿಷ್ಠ ಜ್ಞಾನ ಕೂಡ
ಬಹುಪಾಲು ಮತ್ತು ಬಹುತರ ಮಾಧ್ಯಮಗಳಲ್ಲಿ ಇಲ್ಲವಾಗಿದೆ.
ಒಟ್ಟಿನಲ್ಲಿ, “ತಾವೇ ಮೊದಲು, ತಮ್ಮಲ್ಲಿಯೇ ಮೊದಲು” ಎಂಬ ಭರಾಟೆಯಲ್ಲಿ
ಹಿಂದೆ ಮುಂದೆ ನೋಡದೆ, ಪೂರ್ವಾಪರ ಯೋಚನೆ ಇಲ್ಲದೆ
ಹಸಿಬಿಸಿ ಸುದ್ದಿಗಳನ್ನು ಮಾಧ್ಯಮಗಳು ಹೂಬೇಹೂಬಾಗಿ ಪ್ರಸಾರಮಾಡುತ್ತಿವೆ.
“ಈ ದಾರಿ ಸರಿಯಲ್ಲ; ಈ “ಟ್ರೇಂಡ್ ಸರಿಯಲ್ಲ”.
ಚಾರಿತ್ರ್ಯನಿರ್ಮಾಣ ಮತ್ತು ಸಂಸ್ಕೃತಿಜಾಗರಣದಂಥ
ಮಹತ್ತರ ಕಾರ್ಯಗಳಲ್ಲಿ ಮಾಧ್ಯಮಗಳು ತಮ್ಮನ್ನು ತಾವು ತೊಡಗಿಸಿಕೊಂಡರೆ
ಭವಿಷ್ಯದ ಜನಾಂಗ ಮಾಧ್ಯಮಗಳಿಗೆ ಸದಾಋಣಿಯಾಗಿರುತ್ತದೆ.
ಡಾ. ಶಿವಾನಂದ ಶಿವಾಚಾರ್ಯರುಹಿರೇಮಠ, ತುಮಕೂರು
Comments
Post a Comment