- Get link
- X
- Other Apps
Good Evening, Happy Thursday
8th September 2022
@ TapOvanam, Hiremath, Tumkur
ಜನಗಳೇ ಹಾಗೆ ಮತ್ತು ಜನಗಳ ಮನಸ್ಸು, ಮನಸ್ಥಿತಿಯೇ ಹಾಗೆ....!!
ಅನುಕೂಲವಾಗಿದ್ದರೆ ಮತ್ತು ಅನುಕೂಲವಾಗಿ ಇರುವವರೆಗೆ “ಇವ ನಮ್ಮವ, ಇವ ನಮ್ಮವ”..!!
ಪ್ರತಿಕೂಲವಾದರೆ, ಒಂದಷ್ಟು ಅನಾನುಕೂಲವಾದರೆ ತಕ್ಷಣ “ಇವನಾರವ? ಇವನಾರವ?”....
ನಿನ್ನೆ, ಮೊನ್ನೆಯವರೆಗೆ ಎಲ್ಲರಿಗೂ “ಡಾರ್ಲಿಂಗ್ ಸಿಟಿ”, ಗಾರ್ಡನ್ ಸಿಟಿಯಾಗಿದ್ದ ಬೆಂಗಳೂರು
ಒಂದಷ್ಟು ಜೋರಾದ ಮತ್ತು ಅಸಹಜದ ಮಳೆಗೆ ತತ್ತರಿಸಿದ ತಕ್ಷಣ ಯಾರಿಗೂ ಬೇಡವಾಗಿದೆ.
ಅವರಿವರೆನ್ನದೆ ಎಲ್ಲರೂ ಬೆಂಗಳೂರನ್ನು ಹಿಗ್ಗಾಮುಗ್ಗಾ ಬಯ್ಯೋದಕ್ಕೆ ಶುರುಹಚ್ಚಿಕೊಂಡಿದ್ದಾರೆ.
ಬೆಂಗಳೂರಿಗೆ ಎಲ್ಲೆಲ್ಲಿಂದಲೋ ``ವಲಸೆ'' ಬಂದು
ಬದುಕನ್ನು ಕಟ್ಟಿಕೊಂಡವರು ಕೂಡ ಬೆಂಗಳೂರನ್ನು ಬಯ್ಯುತ್ತಿದ್ದಾರೆ.
ಬೆಂಗಳೂರನ್ನು ಈಗ ಕರ್ನಾಟಕದ ರಾಜಧಾನಿ ಎಂದು ಹೇಳುವುದಕ್ಕಿಂತ
ಅದನ್ನು ಈಗ ``ವಲಸಿಗರ ರಾಜಧಾನಿ''
ಎಂದು ಹೇಳಬೇಕಾಗಿ ಬಂದಿದೆ. ವಿಪರೀತದ ಮಳೆ ಬಂದರೆ,
ಬೆಂಗಳೂರು ತಾನು ಕನಸಲ್ಲೂ ಕಾಣದಷ್ಟು ಮಳೆ ದಿಢೀರನೇ ಸುರಿದರೆ
ಪಾಪ, ಬೆಂಗಳೂರೇನು ಮಾಡಬೇಕು? ಅದು ಮಳೆಯ ಹತ್ತಿರ ಹೋಗಿಬಿಟ್ಟು,
“ಹೇ ನಾನು, ಬೆಂಗಳೂರು. ನನ್ನ ಮೇಲೆ ಜೋರಾಗಿ ಸುರಿಯಬೇಡ” ಎಂದು ಹೇಳುವುದಕ್ಕೆ ಆಗುತ್ತದೆಯಾ?
ಅದೊಂದು ವೇಳೆ ಹೇಳಿತು ಎಂದು ಇಟ್ಟುಕೊಳ್ಳಿ. ಮಳೆ ಏನು ಕೇಳುತ್ತದೆಯಾ?
ಈ ಪರಿಯಾದ ಹುಯ್ಯೋ ಹುಯ್ಯೋ ಮಳೆಗೆ, ಅಯ್ಯೋ ಅಯ್ಯೋ ಮಳೆಗೆ
ಬೆಂಗಳೂರಾದರೇನು? ಮಂಗಳೂರಾದರೇನು?
ಹುಬ್ಬಳ್ಳಿಯಾದರೇನು? ಹಾವೇರಿಯಾದರೇನು?
ಬಾಗಲಕೋಟೆಯಾದರೇನು? ಚಿತ್ರದುರ್ಗವಾದರೇನು?
ಅದೇ ದೊಡ್ಡವರು ಹೇಳುತ್ತಾರಲ್ಲ, ಅದು ನಿಜ ನೋಡಿ.
“ನಗುವಾಗ ಎಲ್ಲ ನೆಂಟರು; ಅಳುವಾಗ ಯಾರೂ ಇಲ್ಲ”
ಜನ, ಜೀವನ, ಜಗತ್ತು ಎಂದರೆ ಹೀಗೇನೇ!!
ನಾವು ಚೆನ್ನಾಗಿದ್ದರೆ ಎಲ್ಲರೂ ನನ್ನವರೆನ್ನುತ್ತಾರೆ.
ನಾವು ಯಾಮಾರಿದರೆ, ಎಡವಿದರೆ “ವಿ ಡೋಂಟ್ ನೋ” - We don't know ಎನ್ನುತ್ತಾರೆ.
ಆದ್ದರಿಂದಲೇ ಜ್ಞಾನಿಗಳು, ಅನುಭವಿಗಳು
“ಬ್ರಹ್ಮ ಮಾತ್ರ ಸತ್ಯ. ಜಗತ್ತು ಇದು ಯಾವಾಗಲೂ ಮಿಥ್ಯ” ಎಂದು ಹೇಳಿದ್ದಾರೆ.
ಡಾ. ಶಿವಾನಂದ ಶಿವಾಚಾರ್ಯರುಹಿರೇಮಠ, ತುಮಕೂರು
Like
Comment
Share
- Get link
- X
- Other Apps
Comments
Post a Comment