Good Morning, Happy Friday
9th September 2022
@ TapOvanam, Hiremath, Tumkur
ಆಹಾರನಿದ್ರಾಭಯಮೈಥುನಂ ಚ ಸಾಮಾನ್ಯಮೇತತ್ಪಶುಭಿರ್ನರಾಣಾಮ್ |
ಜ್ಞಾನಂ ಹಿ ತೇಷಾಮಧಿಕೋ ವಿಶೇಷೋ ಜ್ಞಾನೇನ ಹೀನಾಃ ಪಶುಭಿಃ ಸಮಾನಾಃ ||
ಆಹಾರ, ನಿದ್ರಾ, ಭಯ, ಮೈಥುನಾದಿಗಳು ಪಶುಗಳಲ್ಲಿ ಮತ್ತು ಮನುಷ್ಯರಲ್ಲಿ ಸಮಸಮಾನ.
ಜ್ಞಾನವೊಂದಕ್ಕೆ ಮಾತ್ರ ಪಶುಗಳನ್ನು ಮತ್ತು ಮನುಷ್ಯರನ್ನು ವಿಭಜಿಸುವ ಶಕ್ತಿ ಇದೆ.
ಜ್ಞಾನಕಾರಣದಿಂದಾಗಿ ಮನುಷ್ಯ ಮನುಷ್ಯನೆನಿಸುತ್ತಾನೆ.
ಜ್ಞಾನವಿಲ್ಲದ ಕಾರಣದಿಂದಾಗಿ ಪಶು ಪಶುವೆನಿಸುತ್ತದೆ.
ಪಶುಗಳನ್ನು ಮತ್ತು ಮನುಷ್ಯರನ್ನು ಬೇರ್ಪಡಿಸುವ ಶಕ್ತಿ ಜ್ಞಾನಕ್ಕಿದೆ.
ಜ್ಞಾನವಿಲ್ಲದೆ ಹೋದರೆ ಮನುಷ್ಯ ಮತ್ತು ಪಶುಗಳಲ್ಲಿ ಏನು ವ್ಯತ್ಯಾಸವಿದೆ?
ಆಹಾರನಿದ್ರಾಭಯಮೈಥುನಂ - ಇವೆಲ್ಲ ಪಶುಗಳಲ್ಲಿ ಮತ್ತು ಮನುಷ್ಯರಲ್ಲಿ ಕಾಮನ್.
ಹೊಟ್ಟೆ ಹಸಿದಾಗ ಪಶುಗಳು ಕೂಡ ಆಹಾರವನ್ನು ಅರಸಿಕೊಂಡು ಹೋಗುತ್ತವೆ.
ಮನುಷ್ಯ ಕೂಡ ಹಾಗೇನೇ.
ನಿದ್ರೆ ಬಂದಾಗ ಪಶುಗಳು ಎಲ್ಲೆಂದರೆಲ್ಲಿ ಮಲಗಿಬಿಡುತ್ತವೆ.
ಮನುಷ್ಯ ಕೂಡ ಹಾಗೇನೇ.
ಪಶುಗಳಿಗೂ ಭಯವಿದೆ. ಪಶುಗಳು ತಮ್ಮಕ್ಕಿಂತಲೂ
ಬಲಿಷ್ಠ ಪಶುಗಳನ್ನು ಕಂಡಾಗ ಓಡಿಹೋಗುತ್ತವೆ.
ಮನುಷ್ಯ ಕೂಡ ಹಾಗೇನೇ.
ತನ್ನಕ್ಕಿಂತಲೂ ಬಲಿಷ್ಠರು ಕಂಡಾಗ “ಜೀ ಹುಜೂರ್” ಎನ್ನುತ್ತಾನೆ,
ತಲೆ ಬಾಗುತ್ತಾನೆ. ಕೈ ಮುಗಿಯುತ್ತಾನೆ.
ಪಶುಗಳು ಕೂಡ ಮೈಥುನ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುತ್ತವೆ.
ಮನುಷ್ಯ ಕೂಡ ಹಾಗೇನೇ.
ಇವೆಲ್ಲವೂ ಪಶುಗಳಲ್ಲಿ ಮತ್ತು ಮನುಷ್ಯರಲ್ಲಿ ಕಾಮನ್ & ಕಾಮನ್.
Common & Common
ಹಾಗಾದರೆ ಮನುಷ್ಯ ತಾನು ಪಶುವಲ್ಲ,
ತಾನು ಮನುಷ್ಯ “ಪ್ರೂವ್” ಮಾಡುವುದು ಹೇಗೆ?
ಜ್ಞಾನದಿಂದಾಗಿ ಮತ್ತು ಜ್ಞಾನಕಾರಣದಿಂದಾಗಿ.
ಜ್ಞಾನವೇ ಮನುಷ್ಯ ಮತ್ತು ಪಶುಗಳನ್ನು ಬೇರ್ಪಡಿಸುವ ``ಡಿವೈಡರ್''.
Jnyana is Divider
ಮನುಷ್ಯ ಜ್ಞಾನಿಯಾಗಬೇಕು,
ಮನುಷ್ಯ ಆಹಾರಾಕಾಂಕ್ಷಿಯಾಗದೆ ಜ್ಞಾನಾಕಾಂಕ್ಷಿಯಾಗಬೇಕು.
ಮನುಷ್ಯ ನಿದ್ರೇಚ್ಛುವಾಗದೆ ಜ್ಞಾನೇಚ್ಛುವಾಗಬೇಕು.
ಮನುಷ್ಯ ನಿದ್ರಾಬೆಂಬಲಿಗನಾಗದೆ ಜ್ಞಾನದ ಹಂಬಲವುಳ್ಳವನಾಗಬೇಕು.
ಮನುಷ್ಯ ಭಯಾನ್ವಿತನಾಗದೆ ಜ್ಞಾನಾನ್ವಿತನಾಗಬೇಕು.
ಮನುಷ್ಯ ಮೈಥುನಾತುರನಾಗದೆ ಅಂದರೆ ಕಾಮಾತುರನಾಗದೆ ಜ್ಞಾನಾತುರನಾಗಬೇಕು.
ಏನು ಮಾಡಬೇಕು? ಏನು ಮಾಡಬಾರದು?
ಎಲ್ಲಿ ಮಾಡಬೇಕು? ಎಲ್ಲಿ ಮಾಡಬಾರದು?
ಹೇಗೆ ಮಾಡಬೇಕು? ಹೇಗೆ ಮಾಡಬಾರದು?
ಏಕೆ ಮಾಡಬೇಕು? ಏಕೆ ಮಾಡಬಾರದು?
ಯಾವಾಗ ಮಾಡಬೇಕು? ಯಾವಾಗ ಮಾಡಬಾರದು?
ಎಂಬ ವಿವೇಚನೆ, ಅರಿವು, ಜ್ಞಾನ, ಮನುಷ್ಯನ ತಲೆಯಲ್ಲಿರಬೇಕು.
ಈ ಹತ್ತು ಪ್ರಶ್ನೆಗಳೇ ಮನುಷ್ಯನನ್ನು ಮನುಷ್ಯನನ್ನಾಗಿಸುವುದು!!
ಈ ಹತ್ತು ಪ್ರಶ್ನೆಗಳು ಇಲ್ಲದೆ ಹೋದರೆ
ಆತ ಮನುಷ್ಯರೂಪದಲ್ಲಿದ್ದರೂ ಪಶುಸಮಾನ.
ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತುಮಕೂರು
Comments
Post a Comment