Good Morning, Happy Wednesday
14th September 2022
@ TapOvanam, Hiremath, Tumkur
ಮಹಾಭಾರತದಲ್ಲಿ ಹದಿನೆಂಟು ಪರ್ವಗಳಿವೆ.
ವ್ಯಾಸ ವಿರಚಿತ ಮಹಾಭಾರತದಲ್ಲಿ
ಹದಿನೆಂಟು ಪರ್ವಗಳಿವೆ
ನಮ್ಮ, ನಿಮ್ಮಗಳ ಜೀವನದಲ್ಲಿ
ನಾಲ್ಕು ಪರ್ವಗಳಿವೆ.
1. ಬೇಕು ಪರ್ವ 2. ಬೇಕೇ ಬೇಕು ಪರ್ವ
3. ಸಾಕು ಪರ್ವ 4. ಸಾಕಪ್ಪಾ ಸಾಕು ಪರ್ವ.
ಬಾಲ್ಯದಲ್ಲಿ ಬೇಕು ಪರ್ವ.
ಯೌವನದಲ್ಲಿ ಬೇಕೇ ಬೇಕು ಪರ್ವ.
ಐವತ್ತು, ಅರವತ್ತರ ನಂತರ ಸಾಕು ಪರ್ವ.
ಎಪ್ಪತ್ತು, ಎಂಬತ್ತರ ನಂತರ
ಸಾಕಪ್ಪಾ ಸಾಕು ಪರ್ವ.
ರಾಮಾಯಣದಲ್ಲಿ ಏಳು ಕಾಂಡಗಳಿವೆ.
ವಾಲ್ಮೀಕಿ ಬರೆದ ರಾಮಾಯಣದಲ್ಲಿ
ಏಳು ಕಾಂಡಗಳಿವೆ.
ನಮ್ಮ, ನಿಮ್ಮಗಳ ಜೀವನದಲ್ಲಿ
ಏಳೆಂಟು ಕಾಂಡಗಳು ಮಾತ್ರವಲ್ಲ;
ನಮ್ಮ, ನಿಮ್ಮಗಳ ಜೀವನದಲ್ಲಿ
ಕಾಂಡಗಳೋ ಕಾಂಡಗಳು!!
ಅಸಂಖ್ಯಾತ ಕಾಂಡಗಳು....!!
ಕೆಲವು ಪರಿಹಾರಯೋಗ್ಯವಾದ
ಕಾಂಡಗಳಾದರೆ
ಇನ್ನು ಕೆಲವು ಪರಿಹಾರದ
ಯೋಗವೇ ಇಲ್ಲದ ಕಾಂಡಗಳು!!


ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತುಮಕೂರು

Comments

Popular posts from this blog

21st September 2023