Posts

Showing posts from January, 2023
Image
 
Image
Have a Great Day 31st January 2023 @ TapOvanam, Hiremath, Tumkur ಬೇಂದ್ರೆ ಎಂದರೆ ಬರೀ ಕವಿಯಲ್ಲ; ಬೇಂದ್ರೆ ಎಂದರೆ ಕವನ, ಅವರು ನಾಕುತಂತಿಗಳ ತನನನಾS... ಕವಿಯ ಜನ್ಮದಿನದಂದು ಅವರ ನಾಕುತಂತಿಗಳ ನಾದಮಾಧುರ್ಯಕ್ಕೆ ಕಿವಿಯಾಗುತ್ತ.... ನಾಕು ತಂತಿ ಒಂದು (1) ೧) ಆವು ಈವಿನ ನಾವು ನೀವಿಗೆ ಆನು ತಾನದ ತನನನಾS (೨) ನಾನು ನೀನಿನ ಈ ನಿನಾನಿಗೆ ಬೇನೆ ಏನೋ? ಜಾಣಿ ನಾS (೩) ಚಾರು ತಂತ್ರಿಯ ಚರಣ ಚರಣದ ಘನಘನಿತ ಚತು- -ರಸ್ವನಾ (೪) ಹತವೊ ಹಿತವೋ ಆ ಅನಾಹತಾ ಮಿತಿಮಿತಿಗೆ ಇತಿ ನನನನಾ (೫) ಬೆನ್ನಿನಾನಿಕೆ ಜನನ ಜಾನಿಕೆ ಮನನವೇ ಸಹಿ- ತಸ್ತನಾ. ಎರಡು (2) (೧) ಗೋವಿನ ಕೊಡುಗೆಯ ಹಡಗದ ಹುಡುಗಿ ಬೆಡಗಿಲೆ ಬಂದಳು ನಡುನಡುಗಿ; (೨) ಸಲಿಗೆಯ ಸುಲಿಗೆಯ ಬಯಕೆಯ ಒಲುಮೆ ಬಯಲಿನ ನೆಯ್ಗೆಯ ಸಿರಿಯುಡುಗಿ; (೩) ನಾಡಿಯ ನಡಿಗೆಯ ನಲುವಿನ ನಾಲಿಗೆ ನೆನೆದಿರೆ ಸೋಲುವ ಸೊಲ್ಲಿನಲಿ; (೪) ಮುಟ್ಟದ ಮಾಟದ ಹುಟ್ಟದ ಹುಟ್ಟಿಗೆ ಜೇನಿನ ಥಳಿಮಳಿ ಸನಿಹ ಹನಿ; (೫) ಬೆಚ್ಚಿದ ವೆಚ್ಚವು ಬಸರಿನ ಮೊಳಕೆ ಬಚ್ಚಿದ್ದಾವುದೋ ನಾ ತಿಳಿಯೆ. (೬) ಭೂತದ ಭಾವ ಉದ್ಭವ ಜಾವ ಮೊಲೆ ಊಡಿಸುವಳು ಪ್ರತಿಭೆ ನವ. ಮೂರು (3) (೧) ’`ಚಿತ್ತೀಮಳಿ, ತತ್ತೀ ಹಾಕತಿತ್ತು ಸ್ವಾತಿ ಮುತ್ತಿನೊಳಗ ಸತ್ತಿSಯೊ ಮಗನS ಅಂತ ಕೂಗಿದರು ಸಾವೀ ಮಗಳು, ಭಾವೀ ಮಗಳು ಕೂಡಿ’' (೨) ’`ಈ ಜಗ, ಅಪ್ಪಾ, ಅಮ್ಮನ ಮಗ ಅಮ್ಮನೊಳಗ ಅಪ್ಪನ ಮೊಗ ಅಪ್ಪನ ಕತ್ತಿಗೆ ಅಮ್ಮನ ನೊಗ ನಾ ಅವರ ಕಂದ ಶ್ರೀ ಗುರುದತ್ತ ಅಂದ.’...
Image
  Have a Great Day 31st January 2023 @ TapOvanam, Hiremath, Tumkur ಜೀವನ ಎಂದರೆ ಮತ್ತೇನಲ್ಲ; “ತಥಾSಸ್ತು ಮತ್ತು ತಥಾ ಮಾSಸ್ತು”ಗಳ ಸಂಗ್ರಾಮಭೂಮಿ. “ತಥಾ ಅಸ್ತು” & “ತಥಾ ಮಾ ಅಸ್ತು” - (ತಥಾ ಅಸ್ತು = ಹಾಗಿರಲಿ, ಹಾಗೆಯೇ ಆಗಲಿ; ತಥಾ ಮಾ ಅಸ್ತು = ಹಾಗಿರುವುದು ಬೇಡ) ಈ ಉಭಯಗಳ ಯುದ್ಧಭೂಮಿ, ರಣರಂಗ ಈ ಜೀವನ. ಕೆಲವರು ಯಾವಾಗಲೂ ``ತಥಾSಸ್ತು'' ಎಂದುಕೊಂಡಿರುತ್ತಾರೆ. ಕೆಲವರು ಯಾವಾಗಲೂ “ತಥಾ ಮಾ ಅಸ್ತು” ಎಂದುಕೊಂಡಿರುತ್ತಾರೆ. ಈ ತಥಾSಸ್ತು, ತಥಾ ಮಾSಸ್ತುಗಳ ಅನುಭವ ಬಹುತೇಕ ಎಲ್ಲರಿಗೂ ಆಗಿರುತ್ತದೆ. ಡಾ. ಶಿವಾನಂದ ಶಿವಾಚಾರ್ಯರು ಹಿರೇಮಠ, ತಪೋವನ, ತುಮಕೂರು
Image
  Good Morning, Happy Tuesday 31st January 2023 @ TapOvanam, Hiremath, Tumkur ಗಾಂಧೀಜಿಗಿಂತ ನಾವು, ನೀವುಗಳು ಮಿಗಿಲು. ಗಾಂಧೀಜಿ ಬರೀ ರಾಮರಾಜ್ಯದ ಕನಸು ಕಂಡರು. ನಾವು, ನೀವುಗಳು ಆರಾಮ್ ರಾಜ್ಯದ ಕನಸು ಕಾಣುತ್ತಲಿದ್ದೇವೆ. ನಮ್ಮ ಸಮಕಾಲೀನ ರಾಜಕಾರಣಿಗಳು ಗಾಂಧೀಜಿಗಿಂತ ನಾಲ್ಕು ಹೆಜ್ಜೆ ಮುಂದೆ ಹೋಗಿ ನಮ್ಮಗಳಲ್ಲೆಲ್ಲ ಆರಾಮ್ ರಾಜ್ಯ ಹಾಗೂ ಆಮಿಷ ರಾಜ್ಯದ ಕನಸು ಕಟ್ಟುತ್ತಿದ್ದಾರೆ. ಊಟ ಫ್ರೀ, ಉಡುಗೆ ಫ್ರೀ, ವಸತಿ ಫ್ರೀ, ದುಡ್ಡು ಫ್ರೀ, ದುಡಿಮೆ ಝೀರೋ, ಏನೂ ಕೆಲಸ ಮಾಡದಿದ್ದರೂ ನಮ್ಮಗಳ ಬ್ಯಾಂಕ್ ಅಕೌಂಟ್‌ಗೆ “ಅಷ್ಟು ದುಡ್ಡು ಹಾಕುತ್ತೇವೆ, ಇಷ್ಟು ದುಡ್ಡು ಹಾಕುತ್ತೇವೆ” ಎಂಬ ಖಚಿತ ಭರವಸೆಗಳು, ಆಸೆ, ಆಮಿಷಗಳ ವಿಧಾನಸೌಧ, ವಿಕಾಸಸೌಧಗಳು....ಇತ್ಯಾದಿ ಇಷ್ಟೆಲ್ಲ ಮತ್ತು ಇವೆಲ್ಲ ಗಾಂಧೀಜಿ ಕಂಡ ರಾಮರಾಜ್ಯದ ಕನಸಲ್ಲಿ ಇದೆಯಾ? ಪಾಪ, ಗಾಂಧೀಜಿ ಇಂಥ ಆರಾಮ್ ರಾಜ್ಯದ ಕನಸು ಕಾಣಲೇ ಇಲ್ಲ. ಅವರು ವಚನಭ್ರಷ್ಟವಾಗದ ರಾಮರಾಜ್ಯದ ಕನಸು ಕಂಡರು. ಅವರು “ಕರೋ ಯಾ ಮರೋ” ಎಂದು ಹೇಳಿದರು. ಅವರು “ಡು ಆರ್ ಡೈ” ಎಂದು ಹೇಳಿದರು. ಅವರು “ದುಡಿ ಇಲ್ಲವೆ ಮಡಿ” ಎಂದು ಹೇಳಿದರು. ಜನಗಳಲ್ಲಿ ಆಮಿಷಸಹಿತ ಆರಾಮ್‌ರಾಜ್ಯದ ಕನಸು ಕಟ್ಟುತ್ತಿರುವ ನಮ್ಮ ರಾಜಕಾರಣಿಗಳನ್ನು ಕಂಡು ಗಾಂಧೀಜಿಯ ಆ ಆತ್ಮ ಅದೆಷ್ಟು ನೊಂದುಕೊಳ್ಳುತ್ತಿದೆಯೋ ಏನೋ?!! ಅಯ್ಯೋ ಪಾಪ...!! “ಕಾಯಕವೇ ಕೈಲಾಸ” ಎಂದು ಹೇಳಿದ 12ನೇ ಶತಮಾನದ ಆ ನಮ್ಮ ಶಿವಶರಣರಂತೂ ಹಣೆ ಚಚ್ಚಿಕೊ...