19. 01. 2023


 Good Evening, Happy Friday

20th January 2023

@ Hiremath, TapOvanam, Tumkur 


>>>>>>>>>>>>>>>>>>>>>>>>>>


ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಮಹಾಸ್ವಾಮಿಗಳು

ದಾಸೋಹಸ್ವರೂಪರು


>>>>>>>>>>>>>>>>>>>>>>>>>>


ಕಳೆದ ವಾರ ನಮಗೆಲ್ಲ ಸಂಕ್ರಾಂತಿ ಹಬ್ಬ. 

ನಾಳೆ ನಮಗೆಲ್ಲ ದಾಸೋಹ ಹಬ್ಬ. 


ನಾಳೆ ದಾಸೋಹ ದಿನ.


ಲಿಂಗೈಕ್ಯ ಪರಮಪೂಜ್ಯ 

ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ 

ನೆನಹಿನಲ್ಲಿ ಎಲ್ಲರೂ ದಾಸೋಹ ದಿನವನ್ನು 

ಭಕ್ತಿ, ಶ್ರದ್ಧೆಯಿಂದ ಆಚರಿಸುವಾ. 


ಅವತ್ತು 12ನೇ ಶತಮಾನದಲ್ಲಿ ಅಣ್ಣ ಬಸವಣ್ಣನವರಿಂದ 

ಅರಿವು, ಆಚಾರ, ಅನುಭವಗಳ ತ್ರಿವಿಧ ದಾಸೋಹ. 


21ನೇ ಶತಮಾನದಲ್ಲಿ ಲಿಂಗೈಕ್ಯ 

ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರಿಂದ 

ಸಹಸ್ರ ಸಹಸ್ರ ಮಕ್ಕಳಿಗೆ 

ಅನ್ನ, ವಸತಿ, ಶಿಕ್ಷಣಗಳ ತ್ರಿವಿಧ ದಾಸೋಹ. 


ಅವತ್ತು, ಆ ಶತಮಾನದಲ್ಲಿ 

ಅಣ್ಣ ಬಸವಣ್ಣನವರದು ಅಹೋಸಾಧನೆ. 


ಈ ಶತಮಾನದಲ್ಲಿ ಪರಮಪೂಜ್ಯ 

ಡಾ. ಶಿವಕುಮಾರ ಮಹಾಸ್ವಾಮಿಗಳ 

ಮಹಾಸಾಧನೆ, ಮಹತ್ ಸಾಧನೆ. 


ಅಣ್ಣ ಬಸವಣ್ಣ ಭಕ್ತಿಭಂಡಾರಿ. 

ನಮ್ಮ ಶಿವಕುಮಾರ ಮಹಾಸ್ವಾಮಿಗಳು 

ದಾಸೋಹಭಂಡಾರ. 


ಅವರು ದಾಸೋಹವೂ ಅಹುದು; 

ಅವರು ಭಂಡಾರವೂ ಅಹುದು. 


ಉತ್ತರ ಭಾರತದಲ್ಲಿ “ಭಂಡಾರ, ಭಂಡಾರಾ” ಎಂದರೆ 

“ಸಾಧುಭೋಜ, ಸಾಧುಭೋಜನ” ಎಂದರ್ಥ. 


ಸಾಧು, ಸತ್ಪುರುಷ, ಸಂತರಿಗೆ 

ಸೇವಾರ್ಥ ನೀಡುವ ಭೋಜನಕ್ಕೆ 

“ಭಂಡಾರಾ” ಎಂದು ಕರೆಯುತ್ತಾರೆ. 


ಸಿದ್ಧಗಂಗಾ ಮಠದಲ್ಲಿ 

ಬರೀ ಸಹಸ್ರಾರು ವಿದ್ಯಾರ್ಥಿಗಳು ಮಾತ್ರವಲ್ಲ, 


ದಿನನಿತ್ಯದಲ್ಲೂ ನೂರಾರು ಜನ 

ಸಾಧು, ಸಂತರು ಮತ್ತು ಸಾವಿರಾರು ಜನ 

ಭಕ್ತರು ಪ್ರಸಾದವನ್ನು ಸ್ವೀಕರಿಸುತ್ತಾರೆ.  


ಯಾರಾದರೂ 

“ಇದೀಗ ತಾನೆ ಸಿದ್ಧಗಂಗಾ ಮಠಕ್ಕೆ 

ಹೋಗಿಬಂದಿದ್ದೇವೆ” ಎಂದು ಹೇಳಿದಾಗ,

 

“ಊಟ ಆಯ್ತಾ, ಪ್ರಸಾದ ಆಯ್ತಾ?” ಎಂದು ಕೇಳಿದರೆ 

ಅವರಿಗೆ ಸಿದ್ಧಗಂಗಾ ಮಠದ ಪರಿಚಯವಿಲ್ಲ;


ಅವರಿಗೆ ಸಿದ್ಧಗಂಗಾ ಮಠದ ಕುರಿತು 

``ಅ ಬ ಕ...''ಗಳು ಗೊತ್ತಿಲ್ಲವೆಂದರ್ಥ. 


ಸಿದ್ಧಗಂಗಾ ಮಠವೆಂದರೆ ಪ್ರಸಾದ. 

ಸಿದ್ಧಗಂಗಾ ಮಠವೆಂದರೆ ದಾಸೋಹ. 


ಯಾವ ರೀತಿ ಕಾಶಿ ಎಂದರೆ 

ಗಂಗಾಸ್ನಾನ ಮತ್ತು ವಿಶ್ವನಾಥ ದರ್ಶನವೋ,


ಹಾಗೆ ಸಿದ್ಧಗಂಗಾ ಮಠವೆಂದರೆ 

ಪ್ರಸಾದ, ದಾಸೋಹ ಮತ್ತು ವಿದ್ಯಾರ್ಥಿಗಳು. 


ನಾವುಗಳು ನಮ್ಮ ಮಧ್ಯದಲ್ಲಿ 

ಮಹಾನ್ ನಿರಂಜನ ಪ್ರಣವಸ್ವರೂಪಿ (ಮ. ನಿ. ಪ್ರ.) 

ಸ್ವಾಮಿಗಳನ್ನು ನೋಡಿರುತ್ತೇವೆ. 

ನಮ್ಮ ಡಾ. ಶಿವಕುಮಾರ ಮಹಾಸ್ವಾಮಿಗಳು 

ಮಹಾನ್ ನಿರಂಜನ ಪ್ರಣವಸ್ವರೂಪಿಗಳು 

(ಮ ನಿ ಪ್ರ) ಮಾತ್ರವಲ್ಲ;  

ಅವರು ದಾಸೋಹಪ್ರಿಯ ಸ್ವಾಮಿಗಳು ಕೂಡ ಅಹುದು.

ಅವರು ಮಹಾನ್ ತ್ರಿವಿಧದಾಸೋಹಸ್ವರೂಪರು ಕೂಡ ಅಹುದು. 


ಶಿವ, ಪಾರ್ವತಿಯರು “ವಾಗರ್ಥಾವಿವ”. 

ಡಾ. ಶಿವಕುಮಾರ ಮಹಾಸ್ವಾಮಿಗಳು 

``ಧರ್ಮ-ದಾಸೋಹವಿವ''


ಪರಮಪೂಜ್ಯರು 

ಧರ್ಮ ಮತ್ತು ದಾಸೋಹದ ಮೂರ್ತರೂಪ.


ಪೂಜ್ಯರ ದೃಷ್ಟಿಯಲ್ಲಿ, 


ಧರ್ಮವೆಂದರೆ ದಾಸೋಹ; 

ದಾಸೋಹವೆಂದರೆ ಧರ್ಮ.


ಅವರಲ್ಲಿ ಧರ್ಮ ಹಾಗೂ ದಾಸೋಹಗಳು 

ಅನನ್ಯಗೊಂಡಿದ್ದವು.


ದಾಸೋಹ ದಿನದಂದು ಪರಮಪೂಜ್ಯ 

ಡಾ. ಶಿವಕುಮಾರ ಮಹಾಸ್ವಾಮಿಗಳವರ 

ವ್ಯೋಮಕಾಯಕ್ಕೆ 

ಮತ್ತು ಅವರ ಅನಿಕೇತನ-ಚೇತನಕ್ಕೆ 

ಭಕ್ತಿ ಮತ್ತು ಶ್ರದ್ಧೆಯಿಂದ ನಮಸ್ಕರಿಸುವಾ. 


ಅವರ ಪುಣ್ಯಸ್ಮರಣೆಯಿಂದ ಧನ್ಯತೆಯ ಅನುಭವಕ್ಕೆ 

ನಮ್ಮನ್ನು ನಾವು ವೇದಿಕೆಯಾಗಿಸಿಕೊಳ್ಳುವಾ.


ಡಾ. ಶಿವಾನಂದ ಶಿವಾಚಾರ್ಯರು

ಹಿರೇಮಠ, ತಪೋವನ, ತುಮಕೂರು

Comments

Popular posts from this blog