ಗುಂಡಿಗೆ ಬಲಿಯಾದರೆ ಮಹಾತ್ಮಾ ಗಾಂಧಿಯಂತಾಗಬೇಕು.
ಗುಂಡಿಗೆ ಬಲಿಯಾದರೆ ದೇಶ ಕಾಯುವ ವೀರ, ಶೂರ ಸೈನಿಕರಂತೆ ಹುತಾತ್ಮರಾಗಬೇಕು.
ಎದೆ ಸೇರುವ ಗುಂಡನ್ನು ಹೊರತುಪಡಿಸಿ
ಹೊಟ್ಟೆ ಸೇರಿ ಅಧ್ವಾನಮಾಡುವ ಇನ್ನೊಂದು ತೆರನಾದ ಗುಂಡಿದೆಯಲ್ಲ,
ಆ ಗುಂಡಿಗೆ ಬಲಿಯಾಗಿ ಗುಂಡಿಗೆ ಬೀಳಬಾರದು.
ಇದುವೇ ಇವತ್ತಿನ ದಿನ ಅಂದರೆ ಗಾಂಧೀಜಿಯವರ ಪುಣ್ಯತಿಥಿಯ ದಿನ
(ಜನೇವರಿ ೩೦, ೧೯೪೮)
ಗುಂಡಿಗೆ ಬಲಿಯಾಗಿ ಗುಂಡಿಗೆ ಬೀಳುವ ಜನಗಳು ಕಲಿಯಬೇಕಾದ ಪಾಠ.
ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತಪೋವನ, ತುಮಕೂರು
Comments
Post a Comment