Good Evening, Happy Sunday
8th January 2023
@ TapOvanam, Hiremath, Tumkur
ನಾವು ಮೋಸಹೋಗಬಾರದು.
ನಾವು ಅಮಾಯಕರಾಗಿ ಉಳಿಯಬಾರದು.
ಇನ್ನೊಬ್ಬರ ದುರುಪಯೋಗಕ್ಕೆ
ನಾವು ವಸ್ತು, ವೇದಿಕೆಯಾಗಬಾರದು.
ನಮ್ಮನ್ನು ನಾವು
ಅಹೋಭೂಯಿಷ್ಠರನ್ನಾಗಿಸಿಕೊಳ್ಳಬೇಕು.
ನಮ್ಮನ್ನು ನಾವು
ಮಹೋಭೂಯಿಷ್ಠರನ್ನಾಗಿಸಿಕೊಳ್ಳಬೇಕು.
ನಮ್ಮನ್ನು ನಾವು
ಅಹೋಬಲರನ್ನಾಗಿಸಿಕೊಳ್ಳಬೇಕು.
ನಮ್ಮನ್ನು ನಾವು
ಮಹಾಬಲರನ್ನಾಗಿಸಿಕೊಳ್ಳಬೇಕು.
ನಮ್ಮನ್ನು ನಾವು ಸಬಲೀಕರಣದ
ವೇದಿಕೆಯಾಗಿಸಿಕೊಳ್ಳಬೇಕು.
ಇದು ಶಿಕ್ಷಣದ ಉದ್ದೇಶ.
ಇದು ಶಿಕ್ಷಣದ ಆಶಯ.
ನಮ್ಮನ್ನು ಮತ್ತು ನಮ್ಮ ಒಳ-ಹೊರಗುಗಳನ್ನು
ಸರ್ವಾಂಗಸುಂದರಗೊಳಿಸುವ
ಒಂದು ಉದಾತ್ತ ಮತ್ತು ನಿಯತ್ತಿನ
ಕ್ರಿಯೆ, ಪ್ರಕ್ರಿಯೆಯೇ ಶಿಕ್ಷಣ.
ಶಿಕ್ಷಣ ಗುಲಾಮಗಿರಿಯನ್ನು
ಬಹಿಷ್ಕರಿಸುತ್ತದೆ.
ಶಿಕ್ಷಣ ಗುಲಾಮ ಮನಸ್ಥಿತಿಯಿಂದ
ನಮ್ಮನ್ನು ಬಚಾವು ಮಾಡುತ್ತದೆ.
ಶಿಕ್ಷಣ “ಗುಲಾಮೀ ಹಟಾವೋ” ಎನ್ನುತ್ತದೆ.
ಶಿಕ್ಷಣ “ಗರೀಬಿ ಹಟಾವೋ” ಎನ್ನುತ್ತದೆ.
ಶಿಕ್ಷಣ “ಲಡಕೀ ಪಢಾವೋ” ಎನ್ನುತ್ತದೆ.
ಶಿಕ್ಷಣ “ದೇಶ್ ಬಚಾವೋ” ಎನ್ನುತ್ತದೆ.
ಶಿಕ್ಷಣ ಉದ್ದೇಶರಹಿತರನ್ನು
ಉದ್ದೇಶಸಹಿತಗೊಳಿಸುತ್ತದೆ.
ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತಪೋವನ, ತುಮಕೂರು
ಹಿರೇಮಠ, ತಪೋವನ, ತುಮಕೂರು
Comments
Post a Comment