Good Evening, Happy Thursday
@ TapOvnam, Hiremath, Tumkur
12th January 2023
ನಾಳೆ, 13. 01. 2023,
ಲಿಂಗೈಕ್ಯ ಹಾನಗಲ್ ಕುಮಾರ ಸ್ವಾಮಿಗಳವರ
ಚರಿತ್ರೆಯು ವಿರಾಟಪುರದ ವಿರಾಗಿಯ ರೂಪದಲ್ಲಿ
ಚಿತ್ರಕಥೆಯಾಗಿ, ದೃಶ್ಯಕಾವ್ಯವಾಗಿ
ನಿಮ್ಮ ನಿಮ್ಮ ಊರುಗಳ ಚಿತ್ರಮಂದಿರಗಳ
ತೆರೆಯ ಮೇಲೆ ಬರಲಿದೆ.
ಈ ಚಿತ್ರ,
ಮೌನತಪಸ್ವಿ ಶ್ರೀ ಜಡೆಯ ಶಾಂತಲಿಂಗೇಶ್ವರ
ಮಹಾಸ್ವಾಮಿಗಳವರ ಕನಸು.
ಅವರ ಕನಸು ಈಡೇರಿದೆ.
ಅವರ ಕನಸು ವಿರಾಟಪುರದ
ವಿರಾಗಿಯಾಗಿ ನಮ್ಮಗಳ ಮುಂದಿದೆ.
ಇದೊಂದು ದೃಶ್ಯಕಾವ್ಯ.
ಆಬಾಲವೃದ್ಧರಾದಿಯಾಗಿ
ಎಲ್ಲರಿಗೂ ಹಾನಗಲ್ ಕುಮಾರಸ್ವಾಮಿಗಳನ್ನು
ಪರಿಚಯಿಸುವ ಒಂದು ಸುಷ್ಟು ಪ್ರಯತ್ನ.
ಈ ಚಿತ್ರದ ನಿರ್ಮಾಣದ ಕನಸನ್ನು ಹೊತ್ತ
ಸಮಾಧಾನದ ಅಜ್ಜನವರು
82ರ ಇಳಿವಯದಲ್ಲೂ 18ರ ಯುವಕರ ಹಾಗೆ ಓಡಾಡಿದ್ದಾರೆ.
ಉತ್ತರದ ಆ ತುದಿಯಿಂದ ಈ ತುದಿ ದಕ್ಷಿಣಕ್ಕೆ!
ದಕ್ಷಿಣದ ಈ ತುದಿಯಿಂದ ಆ ತುದಿ ಉತ್ತರಕ್ಕೆ!!
ಪರಮಪೂಜ್ಯರ ಶ್ರಮವದು ಅಭಿನಂದನೀಯ.
ಗಳಿಕೆ ಈ ಚಿತ್ರದ ಉದ್ದೇಶವಲ್ಲ.
ಹಾನಗಲ್ ಕುಮಾರಸ್ವಾಮಿಗಳವರನ್ನು
ಹೆಚ್ಚು ಹೆಚ್ಚು ಬೆಳಕಿಗೆ ತರುವುದು
ಮತ್ತು
ಹಾನಗಲ್ ಕುಮಾರ ಶಿವಯೋಗಿಗಳನ್ನು
ಮನೆಮನೆಗೂ, ಮನಮನಕ್ಕೂ ತಲುಪಿಸುವುದು
ಈ ಚಿತ್ರದ ಉದ್ದೇಶ.
ಅಜ್ಜವರ ಜೊತೆಯಲ್ಲಿ
ಇಡೀ ಚಿತ್ರತಂಡ ಹೆಚ್ಚು ಶ್ರಮಹಾಕಿದೆ.
ಚಿತ್ರದ ನಿರ್ದೇಶಕ ಬಿ. ಎಸ್. ಲಿಂಗದೇವರು
ವಿರಾಗಿಯನ್ನು ತುಂಬ ಸೊಗಸಾಗಿ ಚಿತ್ರಿಸಿದ್ದಾರೆ.
ಸುಚೀಂದ್ರಪ್ರಸಾದ್‌ರವರು
ಪ್ರಬುದ್ಧ ಅಭಿನಯವನ್ನು ನೀಡಿದ್ದಾರೆ.
ಸಂಗೀತ, ಸಂಭಾಷಣೆ, ಸಂವಾದ
ಎಲ್ಲವೂ ಚೆನ್ನಾಗಿದೆ.
ಇದೊಂದು ಸಾತ್ತ್ವಿಕ ಚಿತ್ರ
ಮತ್ತು ಇದೊಂದು ಸಾತ್ತ್ವಿಕ ಪ್ರಯತ್ನ.
ಈ ಚಿತ್ರವನ್ನು ಬರೀ ಒಂದು ಬಾರಿಯಲ್ಲ,
ಮತ್ತೆ ಮತ್ತೆ ನೋಡುವ ಮೂಲಕ
ಈ ಚಿತ್ರವನ್ನು ಗೆಲ್ಲಿಸುವಾ.
ಇಂಥ ಚಿತ್ರಗಳು ಗೆದ್ದರೆ ಮತ್ತೆ ಮತ್ತೆ
ಇಂಥ ಚಿತ್ರಗಳು ಹೊರಬರುವುದಕ್ಕೆ
ಒಂದು ಸಶಕ್ತ ವೇದಿಕೆ ಸಿದ್ಧವಾಗುತ್ತದೆ.
ಜನಮನದಲ್ಲಿ ಸದಭಿರುಚಿಯ
ಒಂದು ಹೊಸ ಪರ್ವ ಶುರುವಾಗುತ್ತದೆ.
ಇಂಥ ಚಿತ್ರಗಳು ನಿಜಕ್ಕೂ ಗೆಲ್ಲಬೇಕು.
ವಿರಾಟಪುರದ ವಿರಾಗಿಯನ್ನು
ಬರೀ ಭಕ್ತಿಯಿಂದ ಮಾತ್ರವಲ್ಲ,
ಅದ್ದೂರಿಯಾಗಿ ಸ್ವಾಗತಿಸಿ;
ಸಂಭ್ರಮ, ಸಡಗರದಿಂದ ಸ್ವಾಗತಿಸಿ.
ಹಿಂದೊಮ್ಮೆ ದೂರದರ್ಶನದಲ್ಲಿ (ಟಿ. ವ್ಹಿ.)
ರಾಮಾಯಣ, ಮಹಾಭಾರತಗಳು
ಧಾರಾವಾಹಿಯಾಗಿ ಬರುತ್ತಿದ್ದ
ಆ ಕಾಲದಲ್ಲಿ ಜನಗಳು
ತಮ್ಮ ಮನೆಯಲ್ಲಿರುವ
ಟಿ. ವ್ಹಿ.ಗಳನ್ನು ಪೂಜಿಸಿ
ರಾಮಾಯಣ, ಮಹಾಭಾರತಗಳನ್ನು
ನೋಡುತ್ತಿದ್ದರಂತೆ.
ಹಾಗೆಯೇ
ಹಾನಗಲ್ ಕುಮಾರಸ್ವಾಮಿಗಳವರ
ಚಲನಚಿತ್ರ ಪ್ರದರ್ಶನದಿಂದ
ಚಲನಚಿತ್ರ ಮಂದಿರಗಳ ಗೌರವ
ಮತ್ತು ಘನತೆ ಹೆಚ್ಚಬೇಕು.
ಹಾಗೆಂದು ನಾವೆಲ್ಲ ಆಶಿಸೋಣ.
ವಿರಾಟಪುರದ ವಿರಾಗಿ ದೃಶ್ಯಕಾವ್ಯವಾಗಿ
ನಮ್ಮ, ನಿಮ್ಮಗಳೆಲ್ಲರ
ಮನೆ, ಮನಗಳನ್ನು ತುಂಬಲಿ ಎಂದು
ನಾವು ಹದುಳ ಹಾರೈಸುತ್ತೇವೆ.
ಡಾ. ಶಿವಾನಂದ ಶಿವಾಚಾರ್ಯ ಸ್ವಾಮಿಗಳು,
ಹಿರೇಮಠ, ತಪೋವನ, ತುಮಕೂರು
Comments
Post a Comment