Good Evening, Happy Wednesday
11th January 2023
@ TapOvanam, Hiremath, Tumkur


ಸಂಸ್ಕೃತದಲ್ಲಿ ಒಂದು ಸುಭಾಷಿತವಿದೆ,

ಉಷ್ಟ್ರಾಣಾಂ ಚ ವಿವಾಹೇಷು
ಗೀತಂ ಗಾಯಂತಿ ಗರ್ದಭಾಃ |

ಪರಸ್ಪರಂ ಪ್ರಶಂಸಂತಿ
ಅಹೋ ರೂಪಮಹೋ ಧ್ವನಿಃ ||'' ಎಂದು..

ಒಂಟೆಗಳ ಮದುವೆಯಲ್ಲಿ
ಕತ್ತೆಗಳು ಸಂಗೀತ ಕಚೇರಿಯನ್ನು
ನಡೆಯಿಸಿಕೊಡುತ್ತಿದ್ದವಂತೆ.

ಅವು ಪರಸ್ಪರ ತಮ್ಮನ್ನು ತಾವು
ಹೊಗಳಿಕೊಳ್ಳುತ್ತಿದ್ದವಂತೆ!!

“ಒಂಟೆಗಳದು ಅದೆಂಥ
ಸುಂದರ ರೂಪ” ಎಂದು ಕತ್ತೆಗಳು
ಮತ್ತು “ಕತ್ತೆಗಳದು ಅದೆಂಥ ಸುಂದರ ಕಂಠ” ಎಂದು
ಒಂಟೆಗಳು ಪರಸ್ಪರ ಹೊಗಳುತ್ತಿದ್ದವಂತೆ.

ಈ ಶ್ಲೋಕವನ್ನು ಓದಿದಾಗ
“ನಮಗೆ ಪ್ರಾಣಿಗಳೇ
ಗುಣದಲಿ ಮೇಲು” ಎಂದೆನಿಸಿತು.

ಇತ್ತೀಚಿನ ದಿನಗಳಲ್ಲಿ
ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ
ಜಾಲತಾಣಗಳಲ್ಲಿ

ಪರಸ್ಪರ ಕಿತ್ತಾಡಿಕೊಳ್ಳುವ,
ಪರಸ್ಪರ ಕೆಟ್ಟ ಕೆಟ್ಟದ್ದಾಗಿ ಅಂದುಕೊಳ್ಳುವ,
ಆಡಿಕೊಳ್ಳುವ ಜನಗಳನ್ನು ಕಂಡಾಗ
ನಮಗೆ ಒಂದು ಪಟ್ಟಿಗೆ ಈ ಜನಗಳು
ಆ ಒಂಟೆ, ಕತ್ತೆಗಳಿಂದ ಕಲಿಯುವುದು 
ಸಾಕಷ್ಟಿದೆ ಎನಿಸುತ್ತದೆ.

“ಪ್ರಾಣಿಗಳೇ ಗುಣದಲಿ ಮೇಲು; ಮಾನವನದಕಿಂತ ಕೀಳು.
ಉಪಕಾರವಾ ಮಾಡಲಾರ; ಬದುಕಿದರೆ ಸೈರಿಸಲಾರ"
ಸತ್ಯಕ್ಕೆ ಗೌರವವಿಲ್ಲ; ವಂಚನೆಗೆ ಪೂಜ್ಯತೆ ಎಲ್ಲ!!
ವಂಚನೆ ಈಗ ಪೂಜ್ಯತೆಯ ಹಕ್ಕುದಾರ.
ಅದೇ ನೀತಿ ಅದೇ ರೀತಿ!! ಇನ್ನೆಲ್ಲಿ ಗುರುಹಿರಿಯರ ಭೀತಿ?"

ಚಿ. ಉದಯಶಂಕರ್‌ರವರು ಬರೆದ ಹಾಡಿದು.
ಡಾ. ರಾಜ್‌ಕುಮಾರ್ ಹಾಡಿದ್ದು.

ಇವತ್ತಿನ ದಿನವೂ ಕೂಡ
ಈ ಹಾಡು ಅಷ್ಟೇ ಪ್ರಸ್ತುತ...!!

ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತಪೋವನ, ತುಮಕೂರು

Comments

Popular posts from this blog