Good Morning, Happy Saturday
14th January 2023,
Happy Makara Sankraanti
@ TapOvanam, Hiremath, Tumkur
ಇಡೀ ಸೌರವ್ಯೂಹದ ಅಧಿಪತಿಯಾದ
ಸೂರ್ಯನಿಗೆ ಎರಡೇ ದಾರಿಗಳು.
ಒಂದು, ಉತ್ತರಾಯಣ ಪಥ.
ಇನ್ನೊಂದು, ದಕ್ಷಿಣಾಯನ ಪಥ.
ಉತ್ತರಾಯಣ ಮತ್ತು ದಕ್ಷಿಣಾಯನ -
ಇವೆರಡೂ ಸೋಲಾರ ವೇ..ಗಳು., Solar Ways
ಸೌರದಾರಿಗಳು.
ಅಲ್ಲಿ ಸ್ಟೇಟ್ ಹೈವೇಜ್, State Highways
ನ್ಯಾಶನಲ್ ಹೈವೇಜ್‌ಗಳ National Highways ಮಾತೇ ಇಲ್ಲ.
ಅಲ್ಲಿ ಬೈಪಾಸ್ By pass
ಮತ್ತು ಪಾಸ್ ಬೈಗಳಂತೂ (Pass by)
ಇಲ್ಲವೇ ಇಲ್ಲ.
ಸೂರ್ಯದೇವ ಎಲ್ಲೂ ಸಹ ನುಗ್ಗಿಕೊಂಡು,
ನುಸುಳಿಕೊಂಡು ಹೋಗುವ ಹಾಗಿಲ್ಲ.
ಅಲ್ಲಿ ನುಗ್ಗುವಿಕೆ, ನುಸುಳುವಿಕೆಗಳಿಗೆ
ಅವಕಾಶವೇ ಇಲ್ಲ.
ಅವನದೇನಿದ್ದರೂ,
ಸ್ಟ್ರೇಟ್‌ಫಾರವರ್ಡ್ Straightforward
ಗಮನ ಮತ್ತು ಆಗಮನ.
ಆದ್ದರಿಂದಲೇ,
ಆತನಿಗೆ “ನಾರಾಯಣ ಗೌರವ” ಸಂದಾಯವಾಗಿದೆ.
ಆತ ಬರೀ ಸೂರ್ಯನಲ್ಲ;
ಆತ ಸೂರ್ಯನಾರಾಯಣ.
“ಓಂ ನಮೋ ಸೂರ್ಯನಾರಾಯಣಾಯ”
“ಓಂ ಭೂರ್ಭುವಃ ಸ್ವಃ ತತ್ಸವಿತುರ್ವರೇಣ್ಯಂ
ಭರ್ಗೋ ದೇವಸ್ಯ ಧೀಮಹಿ
ಧಿಯೋ ಯೋ ನಃ ಪ್ರಚೋದಯಾತ್”
ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತಪೋವನ, ತುಮಕೂರು
Comments
Post a Comment