Good Morning, Happy Saturday
ನಮ್ಮ ಶಿವ ಮುಕ್ಕಣ್ಣ. ಆತ ತ್ರಿನೇತ್ರ.
ಶಿವನ ಬಲಗಣ್ಣಿನಲ್ಲಿ ಸೂರ್ಯನಿದ್ದಾನೆ.
ಆದ್ದರಿಂದ ಆತ ಸೂರ್ಯನೇತ್ರ, ರವಿನೇತ್ರ.
ಶಿವನ ಎಡಗಣ್ಣಿನಲ್ಲಿ ಚಂದ್ರನಿದ್ದಾನೆ.
ಆದ್ದರಿಂದ ಆತ ಚಂದ್ರನೇತ್ರ, ಶಶಿನೇತ್ರ.
ಶಿವನ ಫಾಲದಲ್ಲಿ ಅಂದರೆ ಹಣೆಯಲ್ಲಿ ಅಗ್ನಿ ಇದೆ.
ಆದ್ದರಿಂದ ಆತ ಅಗ್ನಿನೇತ್ರ, ಉರಿನೇತ್ರ.
ಶಿವನ ಹಾಗೆ ನಾವು ಕನ್ನಡಿಗರು ಕೂಡ ಮುಕ್ಕಣ್ಣರು.
ಶಿವನ ಹಾಗೆ ನಾವು ಕನ್ನಡಿಗರು ಕೂಡ ತ್ರಿನೇತ್ರರು.
ನಾವು ಶರಣನೇತ್ರರು.
ನಾವು ದಾಸನೇತ್ರರು.
ನಾವು ಜನಪದನೇತ್ರರು.
ನಾವು ವಚನನೇತ್ರರು.
ನಾವು ಕೀರ್ತನನೇತ್ರರು.
ನಾವು ಜಾನಪದನೇತ್ರರು.
ಶರಣರ ವಚನಗಳು ಮತ್ತು ದಾಸರ ಕೀರ್ತನಗಳು
ನಮ್ಮ ಎಡಗಣ್ಣು, ಬಲಗಣ್ಣುಗಳಾದರೆ
ನಮ್ಮ ನಾಡಿನ ರೈತರು
ಮತ್ತು ಗ್ರಾಮೀಣ ಭಾಗದ ಜನಗಳು ಕಟ್ಟಿಕೊಟ್ಟ
ಆಡುಮಾತಿನ ನಾಡಸಾಹಿತ್ಯವದು
ನಮ್ಮ ಹಣೆಗಣ್ಣು.
ನಾವು ಕನ್ನಡಿಗರು “ವಚನ ದೇವೋ ಭವ”
ಎಂದು ವಚನಗಳನ್ನು ಓದಿಕೊಂಡು ಬದುಕಿದವರು.
ನಾವು ಕನ್ನಡಿಗರು “ಕೀರ್ತನ ದೇವೋ ಭವ” ಎಂದು
ಕೀರ್ತನಗಳನ್ನು ಹಾಡಿಕೊಂಡು ಬದುಕಿದವರು.
ನಾವು ಕನ್ನಡಿಗರು “ಜಾನಪದ ದೇವೋ ಭವ” ಎಂದು
ಹೋ... ಹೋ... ಎಂದು
ಜಾನಪದ ಗೀತೆಗಳನ್ನು ಹೇಳಿಕೊಂಡು ಬದುಕಿದವರು.
ಒಟ್ಟಾರೆಯಾಗಿ ಮತ್ತು ಒಟ್ಟೈಸಿ ಹೇಳುವುದೇ ಆದರೆ
ಶಿವನ ಹಾಗೆ ನಾವು ಕನ್ನಡಿಗರು ಕೂಡ ತ್ರಿನೇತ್ರರು.
ನಾವು ವಚನನೇತ್ರರು.
ನಾವು ಕೀರ್ತನನೇತ್ರರು.
ನಾವು ಜಾನಪದನೇತ್ರರು.
ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತಪೋವನ, ತುಮಕೂರು
Comments
Post a Comment