Good Morning, Happy Tuesday
10th January 2023
@ TapOvanam, Hiremath, Tumkur


ನಾವು, ನೀವುಗಳೆಲ್ಲ ದೇವರಾಗಬೇಕೆನ್ನುತ್ತೇವೆ.
ಆದರೆ ಆ ದೇವರು ನಮ್ಮನ್ನು
ದೇವರಾಗುವುದಕ್ಕೆ ಬಿಡುವುದಿಲ್ಲ.

ಅದೇನು ಕಾರಣ ಎಂದರೆ,

ನಾವು ಅಂದುಕೊಂಡ ಹಾಗೆಯೇ
ಎಲ್ಲವೂ ಆಗುತ್ತ ಹೋದರೆ

ನಾವು ಬಯಸಿದ್ದೆಲ್ಲ ಕ್ಷಣಮಾತ್ರದಲ್ಲಿ
ಸಿಕ್ಕುತ್ತ ಹೋದರೆ

ಅಧಿಕಾರ, ಅಷ್ಟೈಶ್ವರ್ಯಗಳು
ನಮ್ಮ ಸುತ್ತಮುತ್ತ ಠಳಾಯಿಸತೊಡಗಿದರೆ

ಅಧಿಕಾರ, ಅಷ್ಟೈಶ್ವರ್ಯಗಳು
“ಬೇಡ ಬೇಡ” ಎಂದರೂ ಅವು
ನಮ್ಮತ್ತ ಬರತೊಡಗಿದರೆ

ಯಾರೂ ಕೂಡ ನಮ್ಮನ್ನು ವಿರೋಧಿಸದೆ,
ಅಸೂಯಿಸದೆ ಹೋದರೆ


ನಾವು, ನೀವುಗಳು 

ಹಿರಣ್ಯಕಶ್ಯಪುಗಳಾಗಿಬಿಡುತ್ತೇವೆ, ರಾವಣರಾಗಿಬಿಡುತ್ತೇವೆ.


ಹಿರಣ್ಯಕಶ್ಯಪುವಿನ ಹಾಗೆ
ನಮ್ಮ ಮಕ್ಕಳಿಗೆ ``ನನ್ನನ್ನೇ ದೇವರೆನ್ನಿ''
ಎಂದು ಹೇಳತೊಡಗುತ್ತೇವೆ.

ರಾವಣನ ಹಾಗೆ
ದೇವರ ಆತ್ಮಲಿಂಗವನ್ನೇ ಕೇಳಿ
ಅವಾಂತರ ಮಾಡಿಬಿಡುತ್ತೇವೆ.

ಉಚಿತಾನುಚಿತಗಳ ಮಧ್ಯದಲ್ಲಿರುವ
ಅಂತರವನ್ನೇ ಗಮನಿಸದ ಹಾಗೆ ಆಗಿಬಿಡುತ್ತೇವೆ.

ಅದಕ್ಕಾಗಿ ದೇವರು ನಮ್ಮ, ನಿಮ್ಮಗಳನ್ನು
ದೇವರಾಗದಂತೆ ನೋಡಿಕೊಳ್ಳುತ್ತಾನೆ.

ಎಲ್ಲವನ್ನೂ ಕೊಟ್ಟರೂ
ಏನೋ ಒಂದು ಕೊರತೆಯನ್ನು ಜೊತೆಯಲ್ಲಿಟ್ಟು
ಜನಗಳು “ಅಯ್ಯೋ, ಅಯ್ಯಯ್ಯೋ” ಎಂದು
ಅಂದುಕೊಂಡಿರುವ ಹಾಗೆ ಮಾಡುತ್ತಾನೆ.

ನಾವು, ನೀವುಗಳು ಬುದ್ಧಿವಂತರಾದರೆ
ದೇವರು ಆತ ಮಹಾಬುದ್ಧಿವಂತ!!



ಡಾ. ಶಿವಾನಂದ ಶಿವಾಚಾರ್ಯರು

ಹಿರೇಮಠ, ತಪೋವನ, ತುಮಕೂರು

Comments

Popular posts from this blog