Good Morning, Happy Wednesday
18th January 2023
@ TapOvanam, Hiremath, Tumkur
“ಅರಿದೊಡೆ ಶರಣ, ಮರೆದೊಡೆ ಮಾನವ”
ಪಾತಕನು, ಹೊಲೆಯನು ನಾನೇತಕ್ಕೆ ಬಾತೆ?
(ನಾನೇತಕ್ಕೆ ಬಾತೆ? = ನಾನೇತಕ್ಕೆ ಪ್ರಯೋಜನ?)
ಹೊತ್ತಿಗೊಂದೊಂದು ಪರಿಯ ಗೋಸುಂಬೆಯಂತೆ
ಈಶನ ಶರಣರ ಕಂಡುದಾಸೀನವ ಮಾಡುವ
ದಾಸೋಹವರಿಯದ ದೂಷಕನು ನಾನಯ್ಯ,
ಏಸು ಬುದ್ಧಿಯ ಹೇಳಿ ಬೇಸತ್ತೆನೀ ಮನಕೆ
ಈಶ ನೀ ಸಲಹಯ್ಯ, ಉರಿಲಿಂಗ ತಂದೆ” -
ಇದು ಶರಣ ಉರಿಲಿಂಗದೇವರ ವಚನ
“ಅರಿದೊಡೆ ಶರಣ, ಮರೆದೊಡೆ ಮಾನವ”
ಇದು ಶರಣ ಉಕ್ತಿ, ಇದು ಶರಣ ವಚನ.
“ಅರಿದೊಡೆ ಶರಣ, ಮರೆದೊಡೆ ಮಾನವ”
ಇದೇನೋ ಓಕೆ. ಇದಕ್ಕೆ “ಜೈ” ಎನ್ನೋಣ.
ಅರಿತಂತೆ ನಾಟಕವಾಡಿದೊಡೆ?
ಅದು ನಮಗೆ ನಾವೇ ಅಪ್ರಾಮಾಣಿಕರಾದಂತೆ;
ನಮಗೆ ನಾವೇ ಮೋಸಮಾಡಿಕೊಂಡಂತೆ.
ಮರೆತಂತೆ ನಾಟಕವಾಡಿದೊಡೆ?
ಅದು ನಾವು ಯಾರಿಂದಲೋ
ಸಾಲ ತೆಗೆದುಕೊಂಡಿದ್ದೇವೆ ಎಂದರ್ಥ.
ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತಪೋವನ, ತುಮಕೂರು
Comments
Post a Comment