15th January 2023
Good Morning, Happy Sunday
15th January 2023
@ Hiremath, TapOvanam, Tumkur
Happy Sankraanti to All
ಎಲ್ಲರಿಗೂ ಸುಗ್ಗಿ ಹಬ್ಬ
ಸಂಕ್ರಾಂತಿಯ ಶುಭಾಶಯಗಳು.
ಸೂರ್ಯ ಪಥ ಬದಲಾಯಿಸುತ್ತಿದ್ದಾನೆ.
ಸೂರ್ಯ ದಕ್ಷಿಣಾಯನದಿಂದ
ಉತ್ತರಾಯಣಕ್ಕೆ ಪದಾರ್ಪಣೆ ಮಾಡುತ್ತಿದ್ದಾನೆ.
ಇದು “ಮಾಜಿ” ದೀಕ್ಷೆಯನ್ನು
ಪಡೆಯುತ್ತಿರುವ ದಕ್ಷಿಣಾಯನದ
ಮತ್ತು
“ಹಾಲಿ” ದೀಕ್ಷೆಯನ್ನು
ಪಡೆಯುತ್ತಿರುವ ಉತ್ತರಾಯಣದ ಸಂಧಿಕಾಲ.
``ಕಾಲ ದಕ್ಷಿಣಾಯನವಾದರೇನು,
ಉತ್ತರಾಯಣವಾದರೇನು?
ನಮ್ಮ ರಾಮಾಯಣ ನಮಗೆ ತಪ್ಪಿದ್ದಲ್ಲ'' ಎಂದು
ಹತಾಶೆಯಿಂದ ಮಾತನಾಡುವುದು ಬೇಡ.
ನಮ್ಮ ದೃಷ್ಟಿಯಲ್ಲಿ,
ಆಸೆಯೇ ಜೀವನ; ನಿರಾಸೆಯೇ ಮೃತ್ಯು.
ಹೊಸ ಆಸೆ, ಅಭಿಲಾಷೆ, ಅಭೀಪ್ಸೆಗಳೊಂದಿಗೆ
ಉತ್ತರಾಯಣ ಕಾಲವನ್ನು ಸ್ವಾಗತಿಸೋಣ.
ಹೊಸ ನಿರೀಕ್ಷೆ, ನಿವೇದನೆ, ನಿಯತ್ತಿನಿಂದ
ಉತ್ತರಾಯಣ ಕಾಲವನ್ನು ಸ್ವಾಗತಿಸೋಣ.
ದಕ್ಷಿಣಾಯನ ಕಾಲದಲ್ಲಿ ಹೇಳಿಕೊಂಡಿದ್ದ ಹಾಗೆ
ಉತ್ತರಾಯಣ ಕಾಲದಲ್ಲೂ
“ಅಸತೋ ಮಾ ಸದ್ಗಮಯ,
ತಮಸೋ ಮಾ ಜ್ಯೋತಿರ್ಗಮಯ
ಮೃತ್ಯೋರ್ಮಾಂ ಅಮೃತಂ ಗಮಯ” ಎಂದು
ದೇವರಲ್ಲಿ ಕೇಳಿಕೊಂಡಿರೋಣ.
ದೇವರು “ಅಸ್ತು, ತಥಾಸ್ತು” ಎಂದು ಹೇಳಬಹುದೆಂಬ
ನಿರೀಕ್ಷೆಯನ್ನು ಇಟ್ಟುಕೊಂಡಿರೋಣ.
ನಮ್ಮ ದೃಷ್ಟಿಯಲ್ಲಿ,
ನಿರಾಶೆ ತಪ್ಪು; ನಿರೀಕ್ಷೆ ತಪ್ಪಲ್ಲ.
ನಿರಾಶೆ ಇದು, ನಮ್ಮನ್ನು
ಅಗಮ್ಯಚೇತನರನ್ನಾಗಿಸುತ್ತದೆ.
ಆದ್ದರಿಂದ ಅದು ತಪ್ಪು.
ನಿರೀಕ್ಷೆ ಇದು, ನಮ್ಮನ್ನು
ಗಮ್ಯಚೇತನರನ್ನಾಗಿಸುತ್ತದೆ.
ಆದ್ದರಿಂದ ಅದು ತಪ್ಪಲ್ಲ.
ಆಮಿಷಗಳು ಅಳಿಯಲಿ
ತಾಮಸಗಳು ಅಡಗಲಿ
ಮನಸು, ಮನಸುಗಳು ಕೂಡಲಿ.
ಆಸೆ, ಆಕಾಂಕ್ಷೆಗಳು ಈಡೇರಲಿ.
ಸುಖ, ಸಂತಸ, ನೆಮ್ಮದಿಗಳ ನಿತ್ಯೋತ್ಸವವಾಗಲಿ.
ಶುಭಾಶಯಗಳು
ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತಪೋವನ, ತುಮಕೂರು
ಅಮೃತ ಸಮಾನ ನುಡಿಗಳಿಗಾಗಿ ಭಕ್ತಿಪೂರ್ವಕವಾಗಿ ಪ್ರಣಾಮಗಳು 🙏
ReplyDelete