Good Morning, Happy Friday
3rd February 2023
@ TapOvanam, Hiremath, Tumkur


ದೇವರು ಎಲ್ಲರ ಹಣೆಬರಹವನ್ನು ಬರೆಯುತ್ತಾನೆ.
ಆದರೆ ಆತ ಆಲಸಿ, ಸೋಮಾರಿ,
``ಸೋ ಕಾಲ್ಡ್'' ಸೋಂಬೇರಿಗಳ ಹಣೆಬರಹವನ್ನು
ಬರೆಯುವ “ರಿಸ್ಕ್” ಮಾತ್ರ ತೆಗೆದುಕೊಳ್ಳುವುದಿಲ್ಲ.
ಯಾವುದೇ ಕಾರಣಕ್ಕೂ
ಅಂಥೊಂದು ಅಪಾಯಕಾರಿ ಹೆಜ್ಜೆಯನ್ನು ಮಾತ್ರ
ದೇವರು ಇಡುವುದಿಲ್ಲ.
ಆಲಸಿಗಳ ಹಣೆಬರಹವನ್ನು ಬರೆಯುವ
“ರಿಸ್ಕ್”ನ್ನು ದೇವರೇಕೆ ತೆಗೆದುಕೊಂಡಾನು?
ದೇವರೇನು ದಡ್ಡನೆ?!!
ಆಲಸಿಗಳು ಮತ್ತು ಸೋಮಾರಿ,
ಸೋಂಬೇರಿಗಳು ತಮ್ಮ ಹಣೆಬರಹವನ್ನು
ತಾವೇ ಖುದ್ದಾಗಿ ಬರೆದುಕೊಳ್ಳುತ್ತಾರೆ.
ಅವರ ಹಣೆಬರಹದ ವಿಷಯದಲ್ಲಿ
ದೇವರು “ಹಸ್ತಕ್ಷೇಪ” ಮಾಡುವುದಿಲ್ಲ.
ಗುರು, ಸದ್ಗುರುಗಳು ಮತ್ತು ಅದೆಂಥವರೇ
ಶಿಫಾರಸು ಮಾಡಿದರೂ ಕೂಡ
ಆಲಸಿಗಳ ಹಣೆಬರಹವನ್ನು ತಿದ್ದುವ, ತೀಡುವ
ಉಸಾಬರಿಗೆ ದೇವರು ಬರುವುದೇ ಇಲ್ಲ.
ತಮ್ಮ ಹಣೆಬರಹವನ್ನು
ಬರೆದುಕೊಳ್ಳುವ ವಿಷಯದಲ್ಲಿ
ಆಲಸಿಗಳು ಸರ್ವತಂತ್ರ, ಸ್ವತಂತ್ರರು!!


ಡಾ. ಶಿವಾನಂದ ಶಿವಾಚಾರ್ಯರು

ಹಿರೇಮಠ, ತಪೋವನ, ತುಮಕೂರು

Comments

Popular posts from this blog

21st September 2023