Good Morning, Happy Tuesday
28th February 2023
@ TapOvanam, Hiremath, Tumkur

ಹಾಲನ್ನು ಹುಳಿಯಾಗಿಸೋದು,
ಹಾಲಲ್ಲಿ ಹುಳಿ ಹಿಂಡೋದು ದೊಡ್ಡ ಕೆಲಸವಲ್ಲ;
ಅದು ಮಹತ್ತರ ಕೆಲಸವಲ್ಲ.
ಹುಳಿಯಾದ ಹಾಲನ್ನು ಮತ್ತೆ ಹಾದಿಗೆ ತಂದು
ಅದನ್ನು ತುಪ್ಪವಾಗಿಸೋದು ದೊಡ್ಡ ಕೆಲಸ.
ಹಾಲನ್ನು ತುಪ್ಪವಾಗಿಸಿ
ಅದರ ಆಯುಷ್ಯವನ್ನು
ಹೆಚ್ಚಿಸೋದು ದೊಡ್ಡ ಕೆಲಸ;
ಅದು ಮಹತ್ತರ ಕೆಲಸ.
ಹಾಲು, ಹುಳಿ, ಮೊಸರು, ಮಜ್ಜಿಗೆ, ಬೆಣ್ಣೆ.....,
ಈ ಎಲ್ಲವೂ ಅಲ್ಪಾಯು!!
ಈ ಎಲ್ಲ ಹಂತಗಳನ್ನು ದಾಟಿಬಂದ
ಅನುಭವದ ಹಿನ್ನೆಲೆಯನ್ನು ಹೊಂದಿದ
ತುಪ್ಪ ದೀರ್ಘಾಯು!!!
ಹಾಲಲ್ಲಿ ಹುಳಿಹಿಂಡಿ ಅದನ್ನು
ಯಾರಾದರೂ ಸರಿ,
ಹಾದಿ ತಪ್ಪಿಸಬಹುದು.
ಹಾದಿ ತಪ್ಪಿ ಮುಖವನ್ನು
ಸಿಂಡರಿಸಿಕೊಂಡಿರುವ ಹಾಲನ್ನು
ಮತ್ತೆ ಹಾದಿಗೆ ತಂದು
ಅದನ್ನು ತುಪ್ಪವಾಗಿಸೋದು
ಘನಂದಾರಿ ಕೆಲಸ.
ಅದನ್ನು ಯಾರಾದರೂ
ಮಾಡಲಿಕ್ಕೆ ಆಗುವುದಿಲ್ಲ.
ಅದನ್ನು ಯಾರೋ ಒಬ್ಬ ಮಹಾನುಭಾವರು,
ಸದ್ಗುರುಗಳು, ಗುರುವರೇಣ್ಯರು,
ಯತಿವರೇಣ್ಯರು ಮಾಡಬೇಕಷ್ಟೇ.

ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತಪೋವನ, ತುಮಕೂರು

Comments

Popular posts from this blog

21st September 2023