
Good Morning, Happy Friday 24th March 2923 @ Hiremath, TapOvanam, Tumkur ಯುಗಾದಿ ಹಬ್ಬ ಹೊಸ ಸಂವತ್ಸರಕ್ಕೆ “ಸುಸ್ವಾಗತ”, “ವೆಲ್‌ಕಮ್”, “ಬಧಾಯೀ ಹೋ” ಹೇಳಿಯಾಗಿದೆ. ಶೋಭಕೃನ್ನಾಮ ಅಥವಾ ಶೋಭಾಕೃತ್ ನಾಮ ಸಂವತ್ಸರ ಆಗಮಿಸಿಯಾಗಿದೆ. ಯುಗಾದಿ ಬರೀ ಯುಗಾದಿ ಮಾತ್ರ ಅಲ್ಲ, ಅದು ಯುಗದ ಹಾದಿ ಕೂಡ ಅಹುದು. “ಯುಗ” ಅಂದರೆ ಇಲ್ಲಿ ಹೊಸ ಸಂವತ್ಸರ, ನೂತನ ವರುಷ, ನಯಾ ಸಾಲ್, ನ್ಯೂ ಇಯರ್ ಎಂದು ಅರ್ಥಮಾಡಿಕೊಳ್ಳಬೇಕು. ಯುಗ ಎಂದರೆ ಆ ಕೃತಯುಗ, ತ್ರೇತಾಯುಗ, ದ್ವಾಪರಯುಗ, ಕಲಿಯುಗ ಎಂದು ಅರ್ಥಮಾಡಿಕೊಳ್ಳಬೇಡಿ ಮತ್ತು ಆ ಯುಗಗಳ ಆದಿ ಎಂದು ಅರ್ಥಮಾಡಿಕೊಳ್ಳಬೇಡಿ. ಯುಗಾದಿ ಎಂದರೆ ಇಲ್ಲಿ ನೂತನ ಸಂವತ್ಸರದ ಆದಿ ಅಥವಾ ಮೊದಲ ದಿನ ಎಂದೇ ಅರ್ಥ. ಕೃತಯುಗ, ತ್ರೇತಾಯುಗ, ದ್ವಾಪರಯುಗ, ಕಲಿಯುಗ ಇವೆಲ್ಲ ಒಂದೊಂದು ಕಾಲಘಟ್ಟಗಳು. ಇವೆಲ್ಲ ಒಂದು ವರುಷದಿಂದ ಇನ್ನೊಂದು ವರುಷಕ್ಕೆ ಬದಲಾಗುವುದಿಲ್ಲ. ಈ ಒಂದೊಂದು ಯುಗವೂ ಸಾವಿರಾರು ವರುಷ ಬದುಕಿಕೊಂಡಿರುತ್ತದೆ ಮತ್ತು ಬಾಳಿಕೊಂಡಿರುತ್ತವೆ. ಅಷ್ಟು ಮಾತ್ರವಲ್ಲ, ಇವೆಲ್ಲ ಯುಗಗಳು ಒಂದೊಂದಾಗಿ ನಮ್ಮ, ನಿಮ್ಮಗಳನ್ನು ಸಾವಿರಾರು ವರುಷಗಳವರೆಗೆ, ಸಹಸ್ರ ಸಹಸ್ರ ವರುಷಗಳವರೆಗೆ ಆಳಿಕೊಂಡಿರುತ್ತವೆ. ಪಂಚಾಂಗದ ಪ್ರಕಾರ ಮತ್ತು ರಾಮಾಯಣ, ಮಹಾಭಾರತ, ಪುರಾಣ, ಪುಣ್ಯಕಥೆಗಳ ಪ್ರಕಾರ, ಕೃತಯುಗ ಅಥವಾ ಸತ್ಯಯುಗ - ಈ ಯುಗವೊಂದಕ್ಕೆ ಸಾವಿರಾರು ವರುಷಗಳ ಆಯುಷ್ಯವಿದೆ. ತ್ರೇತಾಯುಗ ಅಥವಾ ಅರ್ಧಸತ್ಯಯುಗ - ಈ ಯುಗವೊಂದ...