Good Morning, Happy Tuesday
14th March 2023
@ TapOvanam, Hiremath, Tumkur
ಎಂದು ಹೇಳುವುದನ್ನು ನಾವು ಆಗಾಗ್ಗೆ
ಕೇಳಿಸಿಕೊಳ್ಳುತ್ತಿರುತ್ತೇವೆ.
ನಾವಷ್ಟೇ ಏನು,
ನೀವುಗಳು ಕೂಡ ಈ ಮಾತನ್ನು
ಕೇಳಿಸಿಕೊಳ್ಳುತ್ತಿರುತ್ತೀರಿ.
ಮೇಲ್ನೋಟಕ್ಕೇನೇ ಈ ಮಾತು
ತುಂಬ ಬೇಜವಾಬ್ದಾರಿಯದು
ಎಂದೆನಿಸುತ್ತದೆ, ಅಲ್ವಾ?
ಹುಟ್ಟಿಸಿದ ದೇವರು
ಅದೇಕೆ ಮನುಷ್ಯನಿಗೆ ಹುಲ್ಲು ಮೇಯಿಸುತ್ತಾನೆ.
ಅವನಿಗೇನು ಬೇರೆ “ಕಮಿಟ್‌ಮೆಂಟ್” ಇರೋದಿಲ್ವಾ?
ಆತ ಮನುಷ್ಯನಿಗೂ ಹುಲ್ಲು ಮೇಯಿಸತೊಡಗಿದರೆ
ಪಾಪ, ಆತನನ್ನೇ ನಂಬಿಕೊಂಡಿರುವ
ಆ ಬಡಪಾಯಿ ಮೂಕಪ್ರಾಣಿಗಳು
ಏನು ಮಾಡಬೇಕು? ಏನು ತಿನ್ನಬೇಕು?
ನಾವೇನೋ ಮನುಷ್ಯರು
ಅದು, ಇದು ತಿಂದುಕೊಂಡು ಬದುಕುತ್ತೇವೆ.
ಮನುಷ್ಯ ಶಾಕಾಹಾರಿಯೂ ಅಹುದು,
ಮಾಂಸಾಹಾರಿಯೂ ಅಹುದು.
ಏನೂ ಸಿಕ್ಕದಿದ್ದರೆ ಮನುಷ್ಯ ಕೊನೇ ಪಕ್ಷ
ಲಂಚವನ್ನಾದರೂ ತಿಂದುಬದುಕುತ್ತಾನೆ.
ಪಾಪ ಆ ಮೂಕ ಪಶು, ಪಕ್ಷಿ, ಪ್ರಾಣಿಗಳು ಹಾಗಲ್ಲ.
ಈ ಲಂಚ, ಮೋಸ, ವಂಚನೆ, ಪಾಪ....,
ಅವುಗಳಿಗೇನು ಗೊತ್ತಾ?
ಅದರಲ್ಲೂ,
ಇನ್ನೊಂದು ಗಮನಾರ್ಹ ಅಂಶವೇನೆಂದರೆ,
ವ್ಹೆಜ್ Veg ತಿನ್ನೋ ಪಶು, ಪಕ್ಷಿ, ಪ್ರಾಣಿಗಳು
ನಾನ್‌ವ್ಹೆಜ್ Non Vegತಿನ್ನೋದಿಲ್ಲ.
ನಾನ್‌ವ್ಹೆಜ್ ತಿನ್ನೋ ಪಶು, ಪಕ್ಷಿ, ಪ್ರಾಣಿಗಳು
ಹುಲ್ಲು, ತರಕಾರಿ, ಗಡ್ಡೆ, ಗೆಣಸು ತಿನ್ನೋದಿಲ್ಲ.
ಪಶು, ಪಕ್ಷಿ, ಪ್ರಾಣಿಗಳಿಗೆ ಅವುಗಳಿಗೆ ಆದ
ನಿಗದಿತ ಆಹಾರಪದ್ಧತಿ ಇದೆ.
ಅವು ತಮ್ಮ ಆಹಾರಪದ್ಧತಿಯ
ಗೆರೆ, ರೇಖೆಗಳನ್ನು ಉಲ್ಲಂಘಿಸುವುದಿಲ್ಲ.
ಮನುಷ್ಯ ಹಾಗಲ್ಲ.
ಈತ ಹೇಗೆ ಬರುತ್ತದೋ ಹಾಗೆ ಸೈ.
ಈತ ಉಲ್ಲಂಘನೆ
ಮತ್ತು ಸೀಮೋಲ್ಲಂಘನದಲ್ಲಿ ಎತ್ತಿದ ಕೈ.
ಇದು ಕಾರಣ, ದೇವರು ಮನುಷ್ಯನಿಗೆ
ಹುಲ್ಲು ಮೇಯಿಸುವುದಿಲ್ಲ.
ಮನುಷ್ಯನೀತ ಹುಲ್ಲನ್ನು ಕೂಡ
ತಿನ್ನೋದಕ್ಕೆ ಶುರುಹಚ್ಚಿಕೊಂಡರೆ
ಪಾಪ, ಆ ಬಡಪಾಯಿ ಪಶು, ಪಕ್ಷಿ, ಪ್ರಾಣಿಗಳ ಗತಿ?!!!
ಆದ್ದರಿಂದ, ಆ ದೇವರು ಮನುಷ್ಯನು ಹುಲ್ಲುತಿಂದು
ಬದುಕದ ಹಾಗೆ ಏರ್ಪಾಟುಮಾಡಿದ್ದಾನೆ.
ಆ ದೇವರು, ಬರೀ ನಾವು ಮನುಷ್ಯರಿಗಳಿಗಷ್ಟೇ ದೇವರೆ?
ಆತ ಎಲ್ಲರಿಗೂ ಮತ್ತು ಎಲ್ಲಕ್ಕೂ
ಅಂದರೆ ಆ ಪಶು, ಪಕ್ಷಿ, ಪ್ರಾಣಿಗಳೆಲ್ಲಕ್ಕೂ ದೇವರು, ಅಲ್ಲವೆ?
ಆತನದು ಬರೀ “ಸರ್ವಜನಹಿತ”
ಅಜೆಂಡಾ, Agenda
ಸಿಲೆಬಸ್ Syllabus ಅಲ್ಲ;
ಆತನದು “ಸರ್ವಜೀವಹಿತ”
ಮತ್ತು “ಸಚರಾಚರಹಿತ”
ಅಜೆಂಡಾ ಮತ್ತು ಸಿಲೆಬಸ್...!!!
ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತಪೋವನ, ತುಮಕೂರು
Comments
Post a Comment