Good Day, Happy Tuesday
7th March 2023
@ TapOvanam, Hiremath, Tumkur
ಆ ಮದನಾರಿ, ಕಾಮಾರಿ ಶಿವ
ನಮಗೆ ತನ್ನ ಹಾಗೆ
ಕಾಮನನ್ನು ಸುಟ್ಟುಹಾಕಿ,
ಕಾಮನೆಗಳನ್ನು ಸುಟ್ಟುಹಾಕಿ ಎಂದು ಹೇಳಿದ.
ನಾವು ಮನುಷ್ಯರು ಬುದ್ಧಿವಂತರು.
ನಾವು ಕುರುಳು (ಕುಳ್ಳು), ಬೆರಣಿ,
ಕಟ್ಟಿಗೆಗಳನ್ನು ಸುಟ್ಟುಬಿಟ್ಟು
“ಹೋ” ಎನ್ನುತ್ತೇವೆ, ಹೋಳಿಹಬ್ಬ ಎನ್ನುತ್ತೇವೆ,
“ಹೋಳಿ ಹೈ” ಎನ್ನುತ್ತೇವೆ.
ನಾವು “ಸೋನ್ಯಾ ಚಿ ಟೋಪಿ” ಎಂದು ಹೇಳಿ
ದೇವರಿಗೇನೇ “ಕನ್‌ಫ್ಯೂಜ್”
ಮಾಡುವಷ್ಟು ಬುದ್ಧಿವಂತರು.
ಆದ್ದರಿಂದಲೇ ಮನುಷ್ಯಬುದ್ಧಿಯನ್ನು
“ಪ್ರಳಯಾಂತಕ” ಎಂದು ಹೇಳುತ್ತಾರೆ.
ಡಾ. ಶಿವಾನಂದ ಶಿವಾಚಾರ್ಯರು,
ಹಿರೇಮಠ, ತಪೋವನ, ತುಮಕೂರು
Comments
Post a Comment