Good Evening, Happy Thursday
9th March 2023
@ TapOvanam, Hiremath, Tumkur


ಯಾವುದೇ ಒಂದು ವಸ್ತುವನ್ನು,
ಪದ-ಪದಾರ್ಥವನ್ನು ಹ್ಯಾಗೆ ಪ್ಯಾಕ್ ಮಾಡಬೇಕು
How to pack it? & How to wrap it? -
ಎಂಬುವುದನ್ನು ಆ ದೇವರಿಗಿಂತ
ಚೆನ್ನಾಗಿ ತಿಳಿದವರು ಇನ್ನಾರಾದರೂ ಉಂಟೆ?


ವಸ್ತುಗಳನ್ನು “ಪ್ಯಾಕ್” ಮಾಡುವುದರಲ್ಲಿ
ದೇವರಿಗೆ ಪರ್ಯಾಯವೇ ಇಲ್ಲ.


ಈ ನಮ್ಮ ದೇಹವಿದೆಯಲ್ಲ,
ಇದನ್ನು ಆ ದೇವರು
ಅದೆಷ್ಟೊಂದು ಸುಂದರವಾಗಿ
``ಪ್ಯಾಕ್'' ಮಾಡಿದ್ದಾನೆ, ``Wrap'' ಮಾಡಿದ್ದಾನೆ, ಗೊತ್ತಾ?


ಹೊರಗಣ ಈ ಪ್ಯಾಕ್ ನೋಡಿಯೇ ಜನಗಳು
ಮರುಳಾಗುವ ಹಾಗೆ
ಮತ್ತು ಮೋಹಿಸುವ ಹಾಗೆ ಮಾಡಿದ್ದಾನೆ.


ಈ ದೇಹದ ಒಳಗೇನಿದೆ,
ಇದರ ಒಳಗಿರುವ ಬಂಡವಾಳ
ಏನು, ಎತ್ತ, ಅದೆಂತು ಎಂಬುವುದು
ಒಂದು ಚೂರು ಕೂಡ ಗೊತ್ತಾಗುವುದಿಲ್ಲ.


ಯಾರಿಗೂ ಏನೂ ಗೊತ್ತಾಗದಂತೆ
ದೇವರು ನಮ್ಮ ದೇಹದಲ್ಲಿರುವುದನ್ನೆಲ್ಲ
ತುಂಬ ಸುಂದರವಾದ ಚರ್ಮದ ಚೀಲದಲ್ಲಿ
(ತೊಗಲಚೀಲ) ತುಂಬಿಟ್ಟಿದ್ದಾನೆ.


ನಮ್ಮ ದೇಹದ ಒಳಾಂಗಣವೆಲ್ಲ
ಒಂದು ಸುಂದರವಾದ ಲೆದರ್ ಬ್ಯಾಗ್‌ನಲ್ಲಿ
(Leather Bag) ಸುತ್ತಿ ಇಡಲ್ಪಟ್ಟಿದೆ, ಅಷ್ಟೇ.

ಸಂಸ್ಕೃತ ಪ್ರಬೋಧ ಸುಧಾಕರ
ಗ್ರಂಥದಲ್ಲಿ ಒಂದು ಮಾತಿದೆ,


``ರುಧಿರತ್ರಿಧಾತುಮಜ್ಜಾಮೇದೋ
ಮಾಂಸಾಸ್ಥಿಸಂಹತಿರ್ದೇಹಃ |

ಸ ಬಹಿಸ್ತ್ವಚಾ ಪಿನದ್ಧಸ್ತ-
ಸ್ಮಾನ್ನೋ ಭಕ್ಷ್ಯತೇ ಕಾಕೈ: ||'' ಎಂದು.


ದೇಹವಿದು ರಕ್ತ, ವಾತ, ಪಿತ್ತ, ಕಫ (ತ್ರಿಧಾತು),
ಮಜ್ಜೆ, ಮೇದಸ್ಸು, ಮಾಂಸ, ಮೂಳೆ -
ಇವೆಲ್ಲವುಗಳ ಒಂದು ಸಮೂಹ.


ಹೊರಗಡೆ ಚರ್ಮವು
ಇವನ್ನೆಲ್ಲ ಮುಚ್ಚಿಕೊಂಡಿದೆಯಾದ್ದರಿಂದ
ಇದನ್ನು ಕಾಗೆಗಳು ತಿಂದುಹಾಕುತ್ತಿಲ್ಲ, ಅಷ್ಟೇ.


(ಸ ಬಹಿಃ ತ್ವಚಾ ಪಿನದ್ಧಃ
ತಸ್ಮಾತ್ ನ ಭಕ್ಷ್ಯತೇ ಕಾಕೈಃ) ಎಂದು.


ಈ ಚರ್ಮವೆಂಬ ಹೊದಿಕೆ ಇರದೆ ಹೋಗಿದ್ದರೆ,
ಓ ಮೈ ಗಾಡ್, Oh My God,
ಫಜೀತಿಯೋ ಫಜೀತಿ..!!

ಇದು ಕಾರಣ,

ನಮ್ಮ ದೇಹವನ್ನು ಒಂದು ಸುಂದರವಾದ
ಚರ್ಮದ ಚೀಲದಲ್ಲಿ,
ಚರ್ಮದ ಚೀಲವೆಂಬ Wrapper (ಹೊದಿಕೆ)ನಲ್ಲಿ
ಸುತ್ತಿ ಕಳುಹಿಸಿರುವ
ದೇವರಿಗೆ ನಾವು ಯಾವಾಗಲೂ ಕೃತಜ್ಞರಾಗಿರಬೇಕು
ಮತ್ತು ಆತನಿಗೊಂದು
``ಥ್ಯಾಂಕ್ಸ್ '' (Thanks) ಹೇಳಿಕೊಂಡಿರಬೇಕು.


ಡಾ. ಶಿವಾನಂದ ಶಿವಾಚಾರ್ಯರು,
ಹಿರೇಮಠ, ತಪೋವನ, ತುಮಕೂರು

Comments

Popular posts from this blog