Good Morning, Happy Thursday
2nd March 2023
@ TapOvanam, Hiremath, Tumkur
``ನದಿಮಾತೆಯೇ,
ನಿನ್ನ ಗಾತ್ರ, ಪಾತ್ರ ತುಂಬ ಚಿಕ್ಕದು.
ಆದರೂ ನಿನ್ನ ನೀರು ಸಿಹಿ.
ನಿನ್ನ ನೀರು ಸ್ವಾಭಾವಿಕವಾಗಿಯೇ ಮಧುರ.
ನಿನ್ನ ನೀರನ್ನು ಕುಡಿಯಬಹುದು.
ಅದು ಪಾನಯೋಗ್ಯ.
ಆದರೆ ಸಮುದ್ರ ಅಷ್ಟೊಂದು ದೊಡ್ಡದಾಗಿ,
ವಿಶಾಲವಾಗಿ, ಆಳವಾಗಿ ಇದೆಯಲ್ಲ?
ಅದರ ನೀರು ಅಷ್ಟೊಂದು ಉಪ್ಪು, ಉಪ್ಪು ಹೇಗೆ?
ಸಮುದ್ರದ ನೀರನ್ನು
ಅದೆಷ್ಟೇ ಪ್ರಯಾಸಪಟ್ಟರೂ ಕುಡಿಯಲಾಗದು.
ಅದೇಕೆ ಹಾಗೆ?” ಎಂದು.
ನದಿ ಹೇಳುತ್ತದೆ,
“ಅದನ್ನು ನನಗೇಕೆ ಕೇಳುತ್ತಿಯಾ?
ಸಮುದ್ರವನ್ನೇ ಕೇಳು ಹೋಗು” ಎಂದು.
ದಾರಿಹೋಕ ಸಮುದ್ರದ ಬಳಿಗೆ ಹೋಗುತ್ತಾನೆ.
ತನ್ನ ಪ್ರಶ್ನೆಯನ್ನು ಪುನರಾವರ್ತಿಸುತ್ತಾನೆ.
ಸಮುದ್ರ ಹೇಳುತ್ತದೆ,
``ನದಿ ಒಂದು ಕೈಯಿಂದ ತೆಗೆದುಕೊಳ್ಳುತ್ತದೆ.
ಇನ್ನೊಂದು ಕೈಯಿಂದ ಕೊಡುತ್ತದೆ.
ನದಿ ತನ್ನಲ್ಲಿರುವುದನ್ನು
ಕೊಡುವುದಕ್ಕೆಂದು
ಹಗಲು-ರಾತ್ರಿ ಎನ್ನದೆ ಧಾವಿಸಿಕೊಂಡಿರುತ್ತದೆ.
ಒಂದು ಕ್ಷಣ ಕೂಡ ನಿಂತುಕೊಳ್ಳದೆ
ರಭಸದಿಂದ ಹರಿದುಕೊಂಡಿರುತ್ತದೆ.
ಅದು ತನ್ನಲ್ಲಿರುವ ಸಿಹಿನೀರನ್ನು
ಹಂಚುತ್ತ ಹೋಗುತ್ತದೆ.
ಆದ್ದರಿಂದ ನದಿಯ ನೀರು ಸಿಹಿಯಾಗಿರುತ್ತದೆ.
ಅದು ಮಧುರವಾಗಿರುತ್ತದೆ.
ನಾನು ಹಾಗಲ್ಲ.
ನಾನು ಯಾವಾಗಲೂ ತೆಗೆದುಕೊಳ್ಳುತ್ತಲೇ ಇರುತ್ತೇನೆ.
ಯಾರಿಗೂ ಏನನ್ನೂ ಕೊಡುವುದಿಲ್ಲ.
ನನ್ನ ಬಳಿಗೆ ಬಂದಿರೋದನ್ನೆಲ್ಲ
ಸಂಗ್ರಹಮಾಡುತ್ತ ಹೋಗುತ್ತೇನೆ.
ಆದ್ದರಿಂದ ನನ್ನ ನೀರು ಉಪ್ಪುಪ್ಪಾಗಿರುತ್ತದೆ
ಮತ್ತು ಅದು ಕುಡಿಯಲು ಯೋಗ್ಯವಾಗಿರುವುದಿಲ್ಲ.
ಏನಿದ್ದರೇನು, ಎಷ್ಟಿದ್ದರೇನು,
ಕೊಡೋ ಗುಣವಿಲ್ಲದೆ ಹೋದರೆ ಅದು ಹಾಗೇನೇ?
ಸ್ವಂತಕ್ಕೂ ಉಪಯೋಗವಿಲ್ಲ
ಮತ್ತು ಬೇರೊಬ್ಬರ ಉಪಯೋಗಕ್ಕೂ ಬರುವುದಿಲ್ಲ.
ಕೊಡುವುದು, ತೆಗೆದುಕೊಳ್ಳುವುದು -
ಈ ಎರಡೂ ಇದ್ದರೇನೇ ಚೆಂದ.
“ಲೇನಾ ಔರ್ ದೇನಾ” -
“ಗಿವ್ & ಟೇಕ್” Give & Take ಎರಡೂ ಇರಬೇಕು.
ಲೇನಾನೂ ಇರಬೇಕು;
ಅದರ ಜೊತೆ ಜೊತೆಯಲ್ಲಿ ದೇನಾನೂ ಇರಬೇಕು'' ಎಂದು.
ನಮ್ಮ, ನಿಮ್ಮಗಳ ವ್ಯಾವಹಾರಿಕ
ಹಾಗೂ ಸಾಮಾಜಿಕ ಜೀವನದಲ್ಲೂ ಹಾಗೆ ತಾನೆ?
ಬರೀ “ಲೇನಾ” - ಒಂದೇ ಇದ್ದರೆ
ಅದು ಕಹಿಯೇ; ಮತ್ತದು ಹುಳಿಯೇ!!
ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತಪೋವನ, ತುಮಕೂರು
.jpg)
Comments
Post a Comment