9th March 2023
@ TapOvanam, Hiremath, Tumkur
ಅಧ್ಯಾತ್ಮ ಅಥವಾ ಆಧ್ಯಾತ್ಮ ತುಂಬ ಸೂಕ್ಷ್ಮ.
ಅಧ್ಯಾತ್ಮದ ತನು, ಮನ ಎರಡೂ ಸೂಕ್ಷ್ಮ.
ಧರ್ಮ ಹಾಗಲ್ಲ. ಧರ್ಮ ಧಾಡಸೀ.
ಧರ್ಮ ನುಗ್ಗಿಕೊಂಡು ಹೋಗುತ್ತದೆ.
ಧಾರ್ಮಿಕರಾಗುವುದು ತುಂಬ ಸುಲಭ.
ಆಧ್ಯಾತ್ಮಿಕಗೊಂಡಿರುವುದು ತುಂಬ ಕಠಿಣ.
ನುಗ್ಗಿಕೊಂಡು ಹೋಗುವ ಸ್ವಭಾವವಿದ್ದರೆ
ಸುಲಭವಾಗಿ ಧಾರ್ಮಿಕರಾಗಬಹುದು.
ಆಧ್ಯಾತ್ಮಿಕರನ್ನು ಕೈಹಿಡಿದುಕೊಂಡು
ಮುಂದೆ ಕರೆತರಬೇಕು.
ಇದು ಕಾರಣ, ಈ ದೇಶದಲ್ಲಿ
ಆಧ್ಯಾತ್ಮಿಕರಿಗಿಂತ ಧಾರ್ಮಿಕರು
ಹೆಚ್ಚು ಸುದ್ದಿ ಮಾಡಿಕೊಂಡಿದ್ದಾರೆ.
ಡಾ. ಶಿವಾನಂದ ಶಿವಾಚಾರ್ಯರು,
ಹಿರೇಮಠ, ತಪೋವನ, ತುಮಕೂರು
Comments
Post a Comment