Good Morning, Happy Tuesday
7th March 2023
@ TapOvanam, Hiremath, Tumkur
ಲೈಫು ಎಂದರೆ ಹಾಗೇನೇ
ಮತ್ತು ಲೈಫು ಎಂದರೆ ಅಷ್ಟೇನೇ.
ಎಲ್ಲವೂ ನನ್ನದೆನ್ನುತ್ತ ಶುರುವಾಗುತ್ತದೆ.
ಯಾವುದೂ ನನ್ನದಲ್ಲ ಎನ್ನುತ್ತ
ಮುಗಿದುಹೋಗುತ್ತದೆ.
ಜೀವನ ಭ್ರಮೆಯಲ್ಲಿ
ಶುರುವಾಗಿ ವಾಸ್ತವದಲ್ಲಿ ಮುಗಿಯುತ್ತದೆ.
ಎಲ್ಲವೂ ನನ್ನದು ಎನ್ನುವುದು ಭ್ರಮೆ.
ಯಾವುದೂ ನನ್ನದಲ್ಲ ಎನ್ನುವುದು ವಾಸ್ತವ.
ಈ ಜಗತ್ತಿನಲ್ಲಿ “ನಾನು “ಖಾಯಮ್ಮು”, ‘
“ನಾನು ಖಾತ್ರಿ”, “ಇದು ನನ್ನ ಖಾಸಗಿ”
ಎನ್ನುವುದೆಲ್ಲ ಭ್ರಮೆ.
ಈ ಖಾಯಮ್ಮು, ಖಾಸಗಿ, ಖಾತ್ರಿ...,
ಇವೆಲ್ಲ ನಾವು ದುರ್ಬಲರಾಗುತ್ತಲೇ
ಇನ್ನೊಬ್ಬರನ್ನು ಸೇರಿಕೊಳ್ಳುತ್ತವೆ.
ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತಪೋವನ, ತುಮಕೂರು
Comments
Post a Comment