Good Morning, Happy Wednesday
8th March 2023
@ TapOvanam, Hiremath, Tumkur

ರಾಮಾಯಣದಲ್ಲಿ
ಸೀತೆಯ ಪಾತ್ರವಿಲ್ಲದೆ ಹೋಗಿದ್ದರೆ
ಕಾಂಡಗಳ ಸಂಖ್ಯೆ ಹೆಚ್ಚುತ್ತಿರಲಿಲ್ಲ.

ಮಹಾಭಾರತದಲ್ಲಿ
ದ್ರೌಪದಿಯ ಪಾತ್ರವಿಲ್ಲದೆ ಹೋಗಿದ್ದರೆ
ಪರ್ವಗಳ ಸಂಖ್ಯೆ ಹೆಚ್ಚುತ್ತಿರಲಿಲ್ಲ.

ರಾಮಾಯಣದಲ್ಲಿ ಏಳು ಕಾಂಡಗಳಿವೆ.

ಬಾಲಕಾಂಡ, ಅಯೋಧ್ಯಾ ಕಾಂಡ, ಅರಣ್ಯಕಾಂಡ,
ಕಿಷ್ಕಿಂಧಾ ಕಾಂಡ, ಸುಂದರ ಕಾಂಡ,
ಯುದ್ಧಕಾಂಡ, ಉತ್ತರಕಾಂಡ.

ರಾಮಾಯಣದಲ್ಲಿ
ಸೀತೆಯ ಪಾತ್ರವಿಲ್ಲದೆ ಹೋಗಿದ್ದರೆ
ರಾಮಾಯಣವು
ಬಾಲಕಾಂಡ, ಅಯೋಧ್ಯಾಕಾಂಡದಲ್ಲಿಯೇ
ಮುಗಿದುಹೋಗುತ್ತಿತ್ತೇನೋ?

ಮಹಾಭಾರತದಲ್ಲಿ ಹದಿನೆಂಟು ಪರ್ವಗಳಿವೆ.

ಮಹಾಭಾರತದಲ್ಲಿ
ದ್ರೌಪದಿಯ ಪಾತ್ರಪ್ರವೇಶ ಇಲ್ಲದೆ ಹೋಗಿದ್ದರೆ
ಮಹಾಭಾರತದ ಪರ್ವಗಳ ಸಂಖ್ಯೆ
ಒಂದಷ್ಟು ಕಡಿಮೆಯಾಗುತ್ತಿತ್ತೇನೋ?

ಇನ್ನೂ ಒಂದು ವಿಶೇಷವೇನೆಂದರೆ,

ಮಹಾಭಾರತದಲ್ಲಿ ಸ್ತ್ರೀಯರಿಗಾಗಿಯೇ
ಒಂದು ಪರ್ವವಿದೆ.
ಅದು ಸ್ತ್ರೀ ಪರ್ವ.

ಅದು ಮಹಾಭಾರತದ
ಹನ್ನೊಂದನೆಯ ಪರ್ವ.

ಮಹಿಳಾ ಮೀಸಲಾತಿಗೆ
ಮಹಾಭಾರತದಲ್ಲಿಯೇ ಅವಕಾಶವಿದೆ
ಎಂದಾದ ಮೇಲೆ
ಈ ನಮ್ಮ ಭವ್ಯ ಭಾರತದಲ್ಲಿ,
ಈ ನಮ್ಮ ಭಾರತ ಮಹಾನ್‌ದಲ್ಲಿ
ನಾವು, ನೀವುಗಳೆಲ್ಲ
ಅಬಲಾ ಸಬಲೀಕರಣ
ಮತ್ತು ಅಬಲಾ ಪ್ರಬಲೀಕರಣಕ್ಕೆ
ಧ್ವನಿಯಾಗಬಾರದೇಕೆ?


ಡಾ. ಶಿವಾನಂದ ಶಿವಾಚಾರ್ಯರು,
ಹಿರೇಮಠ, ತಪೋವನ, ತುಮಕೂರು


Comments

Popular posts from this blog