Good Morning, Happy Thursday 31st August 2023 @ TapOvanam, Hiremath, Tumkur ನಮಗೆ ಸಂಸ್ಕೃತ ದಿವ್ಯಭಾಷೆ ಎಂಬ ಹೆಮ್ಮೆ ಇದೆ, ಆ ಗೌರವ ಇದೆ. ಆದರೆ ಅದು ಜನಸಾಮಾನ್ಯರ ಭಾಷೆ, ಆಮ್‌ಆದ್ಮೀ, ಕಾಮನ್ ಮ್ಯಾನ್ ಭಾಷೆ, ಆಗಬೇಕೆಂಬ ಕಾಳಜಿ ಇದೆ, ಕಳಕಳಿ ಇದೆ. ಸಂಸ್ಕೃತ ಮತ್ತು ಸಂಸ್ಕೃತಿ ಇವೆರಡೂ ಭಾರತೀಯರ ಅವಳಿ, ಜವಳಿ ಸಂತಾನವಿದ್ದ ಹಾಗೆ. ಸಂಸ್ಕೃತ ಮತ್ತು ಸಂಸ್ಕೃತಿ - ಇವೆರಡೂ ಸ್ವರ್ಗಾದಪಿ ಗರೀಯಸೀ. ಸಂಸ್ಕೃತ ಮತ್ತು ಸಂಸ್ಕೃತಿ ಇವೆರಡನ್ನೂ ನಾವುಗಳು ಆಪ್ತವಾಗಿಸಿಕೊಂಡಿದ್ದರೆ ಸ್ವರ್ಗದ ಕುರಿತು ನಾವು ಅಷ್ಟೊಂದು ಕಾಳಜಿ ವಹಿಸಬೇಕಿಲ್ಲ. ಏಕೆಂದರೆ ಇವೆರಡರ ಜೊತೆಯಲ್ಲಿ ಇರೋದು ಮತ್ತು ಗುರುತಿಸಿಕೊಳ್ಳೋದು ಎಂದರೆ ಅದು ಸ್ವರ್ಗದಲ್ಲಿ ಇದ್ದಂತೆ ಮತ್ತು ಅದು ಸ್ವರ್ಗದಲ್ಲಿ ಇರೋದಕ್ಕಿಂತಲೂ ಹೆಚ್ಚು. ನಮ್ಮ ದೇಶದ ರಾಷ್ಟ್ರಘೋಷ - ``ಸತ್ಯಮೇವ ಜಯತೇ'' “ಸಂಸ್ಕೃತ ಏವ ಜಯತೇ” ಇದು ಸಂಸ್ಕೃತಮನಸ್ಕರ ಘೋಷವಾಕ್ಯ. “ಭಾಷಾಸು ಮುಖ್ಯಾ ಮಧುರಾ ದಿವ್ಯಾ ಗೀರ್ವಾಣಭಾರತೀ” “ಜಗತ್ತಿನ ಎಲ್ಲ ಭಾಷೆಗಳಲ್ಲಿ ಅತ್ಯಂತ ಮುಖ್ಯವಾದುದು, ಮಧುರವಾದುದು ಮತ್ತು ದಿವ್ಯವಾದುದು ಸಂಸ್ಕೃತಭಾಷೆ” - ಎಂದು ಜಗತ್ತಿನ ಬಹುತೇಕ ಭಾಷಾತಜ್ಞರು ಒಪ್ಪಿಕೊಂಡಿದ್ದಾರೆ. ಸಂಸ್ಕೃತ ಭಾಷೆ ಎಲ್ಲ ಭಾಷೆಗಳಿಗೆ ತಾಯಿ ಇದ್ದ ಹಾಗೆ. ಸಂಸ್ಕೃತಭಾಷೆ ಎಲ್ಲ ಭಾಷೆಗಳ ತವರುಮನೆ. ಸಂಸ್ಕೃತಭಾಷೆ ಎಲ್ಲ ಭಾಷೆಗಳ ನೃತ್ಯ, ನಟನೆಗಳ ರಂಗಭೂಮಿ ಮತ್ತು ರಂಗವೇದಿಕೆ ಇದ್ದ ಹಾಗೆ. “ಭಾ...