Good Morning, Happy Thursday
31st August 2023
@ TapOvanam, Hiremath, Tumkur
>>>>>>>>>>>>>>>>>>>>>>>>>>>>>>>>>>
ಸಿರಿಗರ ಹಿಡಿದವರ ನುಡಿಸಲು ಬಾರದಯ್ಯ!!
``ಮೊಬೈಲ್‌ಗರ'' ಹಿಡಿದವರ ನುಡಿಸಲು ಬಾರದಯ್ಯ!!
>>>>>>>>>>>>>>>>>>>>>>>>>>>>>>>>>>>
``ಹಾವು ತಿಂದವರ ನುಡಿಸಬಹುದು
ಗರ ಹಿಡಿದವರ ನುಡಿಬಹುದು
ಸಿರಿಗರ ಹಿಡಿದವರ ನುಡಿಸಲು ಬಾರದು ನೋಡಯ್ಯ
ಬಡತನವೆಂಬ ಮಂತ್ರವಾದಿ ಹೊಗಲು
ಒಡನೆ ನುಡಿವರಯ್ಯ, ಕೂಡಲಸಂಗಮದೇವಾ''
ಪ್ರಸ್ತುತ ಕಾಲಘಟ್ಟದಲ್ಲಿ ಬಸವಣ್ಣನವರ
ಈ ವಚನ ಒಂದಷ್ಟು ರೂಪಾಂತರದೊಂದಿಗೆ.....,
``ಹಾವು ಕಚ್ಚಿದವರ ನುಡಿಸಬಹುದು
ಚೇಳಿನಿಂದ ಕುಕ್ಕಿಸಿಕೊಂಡವರ ನುಡಿಸಬಹುದು
ಗರ ಹಿಡಿದವರ, ಸಾಮಾನ್ಯಗರ ಹಿಡಿದವರ ನುಡಿಸಬಹುದು
ಸಿರಿಗರ, ಅಧಿಕಾರಗರ, ಕೀರ್ತಿಗರ ಹಿಡಿದವರ ನುಡಿಸಬಹುದು
ಮೊಬೈಲ್‌ಗರ ಹಿಡಿದವರ ನುಡಿಸಲು ಬಾರದಯ್ಯ
“ಕರೆನ್ಸಿ” ಎಂಬ “ಡಾಟಾವಾದಿ” ಇಲ್ಲವಾಗಲು
ಒಡನೆ ನುಡಿವರಯ್ಯ,
“ಕರೆನ್ಸಿ” ಇಲ್ಲವೆಂದು, “ಡಾಟಾ” ಖಾಲಿ ಆಯಿತೆಂದು!!
ಬಸವಣ್ಣನವರ ವಚನಗಳು
ಜನಗಳ ಮನಸ್ಥಿತಿಗೆ ಕನ್ನಡಿ ಹಿಡಿದಂತಿವೆ.
ಬಸವಣ್ಣನವರು ಬರೀ ಸಮಾಜವಾದಿ,
ಸಮತಾವಾದಿ ಮಾತ್ರವಲ್ಲ,
ಅವರೊಬ್ಬ ಮನೋವಾದಿ
ಮತ್ತು ಮನಸ್ಥಿತಿವಾದಿ ಕೂಡ ಅಹುದು.
ಬಸವಣ್ಣನವರು ಮನಿವಾದಿಯಲ್ಲ;
ಅವರು ಮಾನವವಾದಿ.
ಬಸವಣ್ಣನವರು ಓರ್ವ ನಿಷ್ಣಾತ,
ಪರಿಣತ ಸೈಕೋಲಾಜಿಸ್ಟ್.
ಅವರು ಮನುಷ್ಯನ ಮನಸ್ಸಿನ
ಎನ್‌ವಿರಾನ್‌ಮೆಂಟ್‌ವಾದಿಗಳು.
ಅವರು ಜನಗಳ ಮನಸ್ಥಿತಿಯನ್ನು
ಚೆನ್ನಾಗಿ ಓದಿಕೊಂಡಿದ್ದರು.
ಇದು ಕಾರಣ,
ಭಗವದ್ಗೀತೆಯ ಭಗವಾನ್ ಉವಾಚಗಳ ಹಾಗೆ
ಬಸವಣ್ಣನವರ ಉವಾಚಗಳು ಕೂಡ
ಜನಮನಕ್ಕೆ ಹತ್ತಿರವಾಗಿವೆ.
ನಮ್ಮ ದೃಷ್ಟಿಯಲ್ಲಿ,
ಭಗವಾನ್ ಉವಾಚಗಳಷ್ಟೇ
ಬಸವ ಉವಾಚ
ಮತ್ತು ಬಸವ ವಚನಗಳು ಕೂಡ ಪವರ್‌ಫುಲ್.
Strrong and Powerful
“ಕರ್ಮಣ್ಯೇವಾಧಿಕಾಸರಸ್ತೇ ಮಾ ಫಲೇಷು ಕದಾಚನ” -
ಇದು ಭಗವಂತನ ಸಂವಿಧಾನ ಉವಾಚ.
“ಕಾಯಕವೇ ಕೈಲಾಸ”
ಇದು ಬಸವ ಸಂವಿಧಾನ ಉವಾಚ.
ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತಪೋವನ, ತುಮಕೂರು
Comments
Post a Comment