10th September 2023
Good Morning, Happy Sunday
10th September 2023
@ Hiremath, TapOvanam, Tumkur
ರೈತ ನೇಗಿಲಯೋಗಿಯಾದರೆ
ನೀವು ಶಿಕ್ಷಕರು ಶಿಕ್ಷಣಯೋಗಿಗಳು.
ರೈತ ಕೈಯಲ್ಲಿ ನೇಗಿಲವನ್ನು ಹಿಡಿದಿದ್ದಾನೆ.
ಆತ ಹೊಲವನ್ನು ಉಳುತ್ತಾನೆ.
ಆತ ಹೊಲದಲ್ಲಿ ಉಳುಮೆ ಮಾಡುತ್ತಾನೆ.
ರೈತ ಕೈಯಲ್ಲಿ ನೇಗಿಲವನ್ನು ಹಿಡಿದರೆ
ನೀವು ಕೈಯಲ್ಲಿ ಪಠ್ಯಪುಸ್ತಕಗಳನ್ನು
ಹಿಡಿದುಕೊಂಡಿರುತ್ತೀರಿ.
ರೈತ ಹೊಲದಲ್ಲಿ ಉಳುಮೆ ಮಾಡಿದರೆ
ನೀವು ವಿದ್ಯಾರ್ಥಿಗಳ ಮನಸ್ಸು ಮತ್ತು ಬುದ್ಧಿಯಲ್ಲಿ
ಉಳುಮೆ ಮಾಡುತ್ತೀರಿ.
ರೈತ ಅನ್ನದಾತನಾದರೆ
ನೀವು ಜ್ಞಾನದಾತಾ ಮತ್ತು ಶಿಕ್ಷಣದಾತರು.
ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತಪೋವನ, ತುಮಕೂರು
Comments
Post a Comment