18th September 2023
Good Morning, Happy Monday
18th September 2023
@ TapOvanam, Hiremath, Tumkur
Happy Gauri Ganesha Festival
All the best to All.
ಗಣಪತಿಯ ಶ್ರೀ ಸನ್ನಿಧಾನಕ್ಕೆ
ನಮೋ ನಮಃ, ನಮಸ್ಕಾರ.
ಕೈಲಾಸದಿಂದ ಅಮ್ಮನ ಜೊತೆಗೆ
ಭೂಮಿಗೆ ಆಗಮಿಸಿದ
ಗಣೇಶನಿಗೆ “ಆಲ್ ಈಜ್ ವೆಲ್” All is Well
ಅಂತಾ ಹೇಳ್ತಾ “ವೆಲ್‌ಕಮ್” Welcome ಮಾಡೋಣ.
ಗಣಪತಿ ಅಮ್ಮನ ಮಗ. ಗಣಪತಿ ಗೌರೀಸುತ.
ಗಣಪತಿ ಶಿವನ ಕುಮಾರ - ಗಣಪತಿ ಶಿವಕುಮಾರ.
ಗಣಪತಿ ಧೀಮಂತ. ಗಣಪತಿ ಬುದ್ಧಿವಂತ.
ಗಣಪತಿಗೆ ನಾವು ಏನನ್ನು ಕೇಳಿಕೊಳ್ಳಬೇಕು?
ಗಣಪತಿಗೆ ನಾವು, ನೀವುಗಳು
“ಧಿಯೋ ನಃ ಪ್ರಚೋದಯಾತ್” -
ಎಂದು ಕೇಳಿಕೊಳ್ಳಬೇಕು.
ಗಣಪತಿಯಿಂದ ನಾವು
ಏನನ್ನು ಕಲಿತುಕೊಳ್ಳಬೇಕು?
ಗಣಪತಿಯ ಹಾಗೆ ನಾವು, ನೀವುಗಳು
ನಮ್ಮ, ನಿಮ್ಮಗಳ
ಅಪ್ಪ, ಅಮ್ಮನ “ಡಾರ್ಲಿಂಗ್ ಸನ್”
Darling Son ಆಗಬೇಕು.
ಗಣಪತಿಯು ನಾವು ತಂದೆ, ತಾಯಿಯನ್ನು
ಏನೆಂದು ಭಾವಿಸಬೇಕು ಎಂದು ನಮಗೆಲ್ಲ
ಪಾಠಮಾಡಿದ್ದಾನೆ?
ತಂದೆ, ತಾಯಿ ಬರೀ
“ಸ್ವರ್ಗಾದಪಿ ಗರೀಯಸೀ” ಅಲ್ಲ;
ಅವರು ಸರ್ವಸ್ವಾದಪಿ ಗರಿಷ್ಠರು!!!
ಅವರು ಎಲ್ಲಕ್ಕಿಂತಲೂ, ಎಲ್ಲರಿಗಿಂತಲೂ
ಮತ್ತು ಎಲ್ಲವುಗಳಿಗಿಂತಲೂ
ವರಿಷ್ಠರು ಮತ್ತು ಗರಿಷ್ಠರು.
ಅವರು ಸದಾ ಆರಾಧ್ಯರು,
ಸದಾ ಪೂಜ್ಯರು;
ಅವರು ಸದಾ ವಂದ್ಯರು.
ಈ ಬಾರಿ ಗ್ಯಾರಂಟಿಯ ಚಕ್ರ
ಮತ್ತು ಚಕ್ರವ್ಯೂಹದಲ್ಲಿ ಸಿಕ್ಕು
ಎಲ್ಲ ಪದ, ಪದಾಥ, ದವಸ, ಧಾನ್ಯ,
ತೆಂಗು, ಕಂಗು, ಫಲ, ಪುಷ್ಪ,
ತಾಂಬೂಲಗಳ ಬೆಲೆಯು
ಇಮ್ಮಡಿ, ಮುಮ್ಮಡಿಯಾಗಿಬಿಟ್ಟು
ತುಂಬ ದುಬಾರಿಯಾಗಿರುವುದರಿಂದ
ಜನಗಳಿಗೆ, ಮತ್ತು ತಮ್ಮ ಭಕ್ತರಿಗೆ
ತೊಂದರೆಯಾಗಬಾರದು,
ಭಕ್ತರಿಗೆ ಹೊರೆಯಾಗಬಾರದು
ಎಂಬ ಉದ್ದೇಶದಿಂದ
ಈ ಬಾರಿ ಅಮ್ಮ, ಮಗ ಅಂದರೆ
ಗೌರೀ, ಗಣೇಶ ಒಂದೇ ದಿನ
ಭೂಮಿಗೆ ಬರುತ್ತಲಿದ್ದಾರೆ.
ಅವರನ್ನು ಹಾರ್ದಿಕವಾಗಿ
ಮತ್ತು ಭಕ್ತಿಯಿಂದ ಸ್ವಾಗತಮಾಡೋಣ.
ಈ ಬಾರಿ ಗೌರೀ, ಗಣೇಶರಿಗೆ
ಒಂದೇ ದಿನ ಹಬ್ಬ.
ಗೌರೀ ಗಣೇಶರಿಗೆ ಭಕ್ತರ ಕುರಿತಾಗಿರುವ ಕಾಳಜಿಗೆ
ನಮೋ ನಮಃ. ಮತ್ತು
ಇನ್ನೊಂದು, ಮತ್ತೊಂದು ನಮನ.
ಶಕ್ತಿ, ಯುಕ್ತಿರೂಪರಾದ ಈರ್ವರಿಗೂ
ನಮ್ಮ, ನಿಮ್ಮಗಳ ಆದ್ಯ ನಮನ.
ಇವತ್ತು ಗೌರಿಗೆ ತಾಯಂದಿರಿಂದ ಬಾಗಿನ!!
ಇವತ್ತು ಗಣೇಶನಿಗೆ ಭಕ್ತರಿಂದ ಭೂರಿ ಭೂರಿ ಭೋಜನ.!!
ಬರೀ ಭೋಜನವಲ್ಲ;
ಮೋದಕಭೂಯಿಷ್ಠ ಭೋಜನ.
ಎಲ್ಲರಿಗೂ ಗೌರೀ ಗಣೇಶ ಹಬ್ಬದ ಶುಭಾಶಯಗಳು.
ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತಪೋವನ, ತುಮಕೂರು
Comments
Post a Comment