18th September 2023







 Good Evening, Happy Monday
18th Septemeber 2023
@ Hiremath, TapOvanam, Tumkur  

 
ತುಮಕೂರು ಮಹಾನಗರದ 
ಶ್ರೀ ಸಿದ್ಧಿವಿನಾಯಕ ಸೇವಾ ಸಮಿತಿಯ
47ನೇ ವರುಷದ ಶ್ರೀ ಸಿದ್ಧಿವಿನಾಯಕ ದೃಶ್ಯಾವಳಿ 
ಮತ್ತು ಸಾಂಸ್ಕೃತಿಕ ಉತ್ಸವದ 
ಉದ್ಘಾಟನಾ ಸಮಾರಂಭದಲ್ಲಿ ಹೇಳಿದ್ದು -
>>>>>>>>>>>>>>>>>>>>>> 
 
ಅಧಿಕಾರವಿದ್ದಾಗ 
ಯಾರೂ ಸಹ ನಮ್ಮ ವಕ್ರಗಳ ಬಗ್ಗೆ 
ಮತ್ತು ನಖರಾಗಳ ಬಗ್ಗೆ ಮಾತನಾಡುವುದಿಲ್ಲ.

ನಮ್ಮಲ್ಲಿ ಅಧಿಕಾರವಿದ್ದರೆ 
ಎಲ್ಲರೂ ಬಾಯಿ ಮುಚ್ಚಿಕೊಂಡು 
ತೆಪ್ಪಗಿರುತ್ತಾರೆ.
 
ಅಧಿಕಾರವಿದ್ದರೆ ನಮ್ಮಲ್ಲಿ ಏನೇ ವಕ್ರಗಳಿರಲಿ, 
ಒರಟುತನಗಳಿರಲಿ 
ಎಲ್ಲರೂ ನಮ್ಮನ್ನು ಸಹಿಸಿಕೊಳ್ಳುತ್ತಾರೆ. 
 
ಅದೇ ಅಧಿಕಾರವಿಲ್ಲದೆ ಹೋದರೆ 
ಕಡ್ಡಿಯನ್ನು ಕೂಡ ಗುಡ್ಡ ಮಾಡುತ್ತಾರೆ.
 
ಅಧಿಕಾರವಿಲ್ಲದೆ ಹೋದರೆ 
“ಆಳಿಗೊಂದು ಕಲ್ಲು” ಎನ್ನುವ ಹಾಗೆ 
ಎಲ್ಲರೂ ಕಲ್ಲು ಹಿಡಿದುಕೊಂಡು 
ಮೈ ಮೇಲೆ ಏರಿ ಬರುತ್ತಾರೆ. 
 
ಅದಕ್ಕಾಗಿಯೇ ತಾಯಿ ಪಾರ್ವತಿ 
ತನ್ನ ಮಗ ಗಣೇಶನ ವಕ್ರಗಳ ಬಗ್ಗೆ 
ಜನ ಆಡಿಕೊಳ್ಳಬಹುದು, 
ಅಂದುಕೊಳ್ಳಬಹುದು ಎಂದು 
ಪಟ್ಟು ಹಿಡಿದು ಆಕೆ ಮಗನ ಪರವಾಗಿ 
ವಕಾಲತ್ತು ಮಾಡಿ 
ಪರಮೇಶ್ವರನಿಂದ ಗಣೇಶನಿಗೆ
 
“ಗಣಾನಾಂ ಪತಿ” - ಗಣಪತಿಯ ಪದವಿ 
ಮತ್ತು ಅಧಿಕಾರವನ್ನು ಕೊಡಿಸುತ್ತಾಳೆ.
 
ಗಣಪತಿಯು ಗಣಗಳಿಗೆಲ್ಲ ಪತಿಯಾಗಿ,
 ನಾಯಕನಾಗಿ ಇರುವುದರಿಂದ 
ಯಾರೂ ಸಹ ಆತನ ವಿಷಯದಲ್ಲಿ 
“ಕಿಮಕ್” ಎನ್ನುವುದಿಲ್ಲ; 
ಆತನಿಗೆ “ಕಿರಿಕ್” ಮಾಡುವುದಿಲ್ಲ. 
 
ಪಾರ್ವತಿಗೆ “ಪೋಸ್ಟ್ & ಪೊಜಿಶನ್” 
ಏನು ಮಾಡುತ್ತದೆ ಎಂಬುವುದು ಚೆನ್ನಾಗಿ ಗೊತ್ತು.
 
ನೋಡಿ, ನಮ್ಮಗಳ ಮಧ್ಯದಲ್ಲೂ ಸಹ 
ಹಾಲಿಗಳಿಗಿರುವ ಗೌರವ, ಮರ್ಯಾದೆ 
ಮಾಜಿಗಳಿಗೆ ಇರುವುದಿಲ್ಲ.
 
ಹಾಲಿಗೆ ಎಲ್ಲರೂ “ಜೀ, ಜೀ” 
ಎಂದುಕೊಂಡಿರುತ್ತಾರೆ.
 
ಮಾಜಿಗೆ ಜೀಯೂ ಇಲ್ಲ, 
ಜೀ ಜೀಯೂ ಅಲ್ಲ. 
 
“ತನ್ನ ಮಗ ಯಾವಾಗಲೂ 
ಹಾಲಿಯಾಗೇ ಇರಬೇಕು. 
ಆತ ಎಂದೂ ಮಾಜಿಯಾಗಬಾರದು” -

ಎಂದೇ ಪಾರ್ವತಿ ಹಟಹಿಡಿದು 
ಗಜಮುಖ ಗಣೇಶನನ್ನು 
ಗಣಪತಿಯನ್ನಾಗಿ ಮಾಡುವಂತೆ 
ಪರಮೇಶ್ವರನಲ್ಲಿ ಕೇಳಿಕೊಳ್ಳುತ್ತಾಳೆ.

ಪರಮೇಶ್ವರ “ಅಸ್ತು” ಎನ್ನುತ್ತಾನೆ. 

ಗಜಮುಖ, ಗಜಾನನ 
ತಾಯಿ ಗೌರಮ್ಮನಿಂದಾಗಿ 
ಗಣಪತಿಯಾಗುತ್ತಾನೆ.

ಇದನ್ನೇ ಮಾತೃಕೃಪೆ, 
ಪಿತೃಕೃಪೆ ಅನ್ನೋದು!!
 
ಡಾ. ಶಿವಾನಂದ ಶಿವಾಚಾರ್ಯರು
 
ಹಿರೇಮಠ, ತಪೋವನ, ತುಮಕೂರು

Comments

Popular posts from this blog

21st September 2023