@ TapOvanam, Hiremath, Tumkur
ಜಿ. ಎಸ್. ಎಸ್. ಮೂರ್ತಿಯವರ ನಿಧನಕ್ಕೆ
ಹಿರೇಮಠಶ್ರೀಗಳ ನುಡಿ-ಶ್ರದ್ಧಾಂಜಲಿ
ಹಿರಿಯ ಜೀವ ಶ್ರೀ ಜಿ. ಎಸ್. ಎಸ್. ಮೂರ್ತಿಯವರು
ಶಿವಾಧೀನರಾಗಿದ್ದಾರೆ.
ತೊಂಬತ್ತಾರು ವರುಷದ ತುಂಬು ಜೀವನವನ್ನು
ಬದುಕಿದ ಪುಣ್ಯಾತ್ಮರವರು.
ಮೂರ್ತಿಯವರು ಹಿರೇಮಠಕ್ಕೆ ಪರಮಾಪ್ತರು.
ಹಿರೇಮಠದ ಕಾರ್ಯ, ಚಟುವಟಿಕೆ
ಮತ್ತು ಕಾರ್ಯವಾಹಿನಿ ಯೊಂದಿಗೆ
ಅವರು ತಮ್ಮನ್ನು ತಾವು
ಓತಪ್ರೋತಗೊಳಿಸಿಕೊಂಡಿದ್ದರು.
ಅವರದು ತುಂಬ ಮೃದುಸ್ವಭಾವ.
ಹಾಗೇನೇ ಅವರ ಶರೀರವೂ ಮೃದು
ಮತ್ತು ಶಾರೀರವೂ ಮೃದು.
ಸಂಗೀತವೆಂದರೆ ಅವರಿಗೆ ಪ್ರಾಣ.
ಸ್ವತಃ ಹಾಡುವುದು ಮತ್ತು
ತೊಂಬತ್ತಾರು ವರುಷದ ತುಂಬು ಜೀವನವನ್ನು
ಬದುಕಿದ ಪುಣ್ಯಾತ್ಮರವರು.
ಮೂರ್ತಿಯವರು ಹಿರೇಮಠಕ್ಕೆ ಪರಮಾಪ್ತರು.
ಹಿರೇಮಠದ ಕಾರ್ಯ, ಚಟುವಟಿಕೆ
ಮತ್ತು ಕಾರ್ಯವಾಹಿನಿ ಯೊಂದಿಗೆ
ಅವರು ತಮ್ಮನ್ನು ತಾವು
ಓತಪ್ರೋತಗೊಳಿಸಿಕೊಂಡಿದ್ದರು.
ಅವರದು ತುಂಬ ಮೃದುಸ್ವಭಾವ.
ಹಾಗೇನೇ ಅವರ ಶರೀರವೂ ಮೃದು
ಮತ್ತು ಶಾರೀರವೂ ಮೃದು.
ಸಂಗೀತವೆಂದರೆ ಅವರಿಗೆ ಪ್ರಾಣ.
ಸ್ವತಃ ಹಾಡುವುದು ಮತ್ತು
ಇನ್ನೊಬ್ಬರು ಹಾಡುವುದನ್ನು ಕೇಳಿಸಿಕೊಳ್ಳುವುದು
ಎಂದರೆ ಅವರಿಗೆ
ಸುಗ್ರಾಸ ಭೋಜನವಿದ್ದಂತೆ.
ನಮ್ಮ ಹಿರೇಮಠದ ಅಮಾವಾಸ್ಯಾ
ಕಾರ್ಯಕ್ರಮದಲ್ಲಿ ಅವರು ಖಾಯಂ ಗಾಯಕರು.
ಅಮಾವಾಸ್ಯೆಯ ದಿನ ಹಿರೇಮಠದ
ಮಲ್ಲಿಕಾರ್ಜುನಸ್ವಾಮಿಗೆ ಅಪ್ಪಿತಪ್ಪಿ
ಒಂದಷ್ಟು ಹೂಮಾಲೆ, ಹೂವಿನಲಂಕಾರ
ಕಡಿಮೆಯಾದರೂ ನಡೆಯುತ್ತಿತ್ತೇನೋ
ಆದರೆ ಜಿ. ಎಸ್. ಎಸ್. ಮೂರ್ತಿಯವರ
ಗಾನಮಾಲೆಯ ಅಲಂಕಾರ ಮಾತ್ರ
ಕಡಿಮೆಯಾಗುವಂತಿರಲಿಲ್ಲ.
ಇಳಿವಯದಲ್ಲೂ ಅವರ ಕಂಠಸಿರಿ
ಎಲ್ಲರನ್ನೂ ಆಕರ್ಷಿಸುತ್ತಿತ್ತು.
“ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ.
ಹಾಡುವುದು ಅನಿವಾರ್ಯ ಕರ್ಮ ನನಗೆ”
ಎಂದು ಜಿ. ಎಸ್. ಶಿವರುದ್ರಪ್ಪನವರ ಕೋಗಿಲೆ ಹೇಳುವ ಹಾಗೆ
ಜಿ. ಎಸ್. ಎಸ್. ಮೂರ್ತಿಯವರು
ಜನರ ಸಂತೋಷಕ್ಕಾಗಿ ಹಾಡುವುದಕ್ಕಿಂತ
ತಮ್ಮ ಆತ್ಮಸಂತೋಷಕ್ಕಾಗಿ ಹಾಡುತ್ತಿದ್ದರು.
ಹಾಡುವುದನ್ನು ಅವರು
ಅನಿವಾರ್ಯವಾಗಿಸಿಕೊಂಡಿದ್ದರು.
ಅವರು ಹಾಡುಗಾರಿಕೆಯನ್ನು
ಸುಗ್ರಾಸ ಭೋಜನವಿದ್ದಂತೆ.
ನಮ್ಮ ಹಿರೇಮಠದ ಅಮಾವಾಸ್ಯಾ
ಕಾರ್ಯಕ್ರಮದಲ್ಲಿ ಅವರು ಖಾಯಂ ಗಾಯಕರು.
ಅಮಾವಾಸ್ಯೆಯ ದಿನ ಹಿರೇಮಠದ
ಮಲ್ಲಿಕಾರ್ಜುನಸ್ವಾಮಿಗೆ ಅಪ್ಪಿತಪ್ಪಿ
ಒಂದಷ್ಟು ಹೂಮಾಲೆ, ಹೂವಿನಲಂಕಾರ
ಕಡಿಮೆಯಾದರೂ ನಡೆಯುತ್ತಿತ್ತೇನೋ
ಆದರೆ ಜಿ. ಎಸ್. ಎಸ್. ಮೂರ್ತಿಯವರ
ಗಾನಮಾಲೆಯ ಅಲಂಕಾರ ಮಾತ್ರ
ಕಡಿಮೆಯಾಗುವಂತಿರಲಿಲ್ಲ.
ಇಳಿವಯದಲ್ಲೂ ಅವರ ಕಂಠಸಿರಿ
ಎಲ್ಲರನ್ನೂ ಆಕರ್ಷಿಸುತ್ತಿತ್ತು.
“ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ.
ಹಾಡುವುದು ಅನಿವಾರ್ಯ ಕರ್ಮ ನನಗೆ”
ಎಂದು ಜಿ. ಎಸ್. ಶಿವರುದ್ರಪ್ಪನವರ ಕೋಗಿಲೆ ಹೇಳುವ ಹಾಗೆ
ಜಿ. ಎಸ್. ಎಸ್. ಮೂರ್ತಿಯವರು
ಜನರ ಸಂತೋಷಕ್ಕಾಗಿ ಹಾಡುವುದಕ್ಕಿಂತ
ತಮ್ಮ ಆತ್ಮಸಂತೋಷಕ್ಕಾಗಿ ಹಾಡುತ್ತಿದ್ದರು.
ಹಾಡುವುದನ್ನು ಅವರು
ಅನಿವಾರ್ಯವಾಗಿಸಿಕೊಂಡಿದ್ದರು.
ಅವರು ಹಾಡುಗಾರಿಕೆಯನ್ನು
ತಮ್ಮ ಬದುಕಿನ ಅವಿನಾಭಾವಗೊಳಿಸಿಕೊಂಡಿದ್ದರು.
ಒಂದು ಮಾತು ಮಾತ್ರ ಸತ್ಯ.
ಹಾಡುವುದರಿಂದ ಅವರ ಆಯುಷ್ಯ ಜಾಸ್ತಿಯಾಯಿತು.
ಮೂರ್ತಿಯವರು ಎಲ್. ಐ. ಸಿ. ಸಂಸ್ಥೆಯ
ಮುಖವಾಗಿ ಮತ್ತು ಮುಖವಾಣಿಯಾಗಿ
ಗುರುತಿಸಿಕೊಂಡವರು.
ಸಮಾಜಮುಖಿ ಸೇವೆಯಲ್ಲಿ
ಮೂರ್ತಿಯವರು ಯಾವಾಗಲೂ
ಮುಂಚೂಣಿಯಲ್ಲಿರುತ್ತಿದ್ದರು.
ಅವರ ತಮ್ಮ ಬದುಕಿಗೆ ಸೇವಾದೀಕ್ಷೆಯನ್ನು
ಕೊಟ್ಟುಕೊಂಡಿದ್ದರು.
ಹಿರೇಮಠಕ್ಕೆ ಅವರ ಸೇವೆ ಅನನ್ಯವಾದುದು.
ಅವರು ಹಿರೇಮಠದ ಭಕ್ತಾದಿಗಳ
ಮನೆಗೆ ಹೋದರೆ ಭಕ್ತಾದಿಗಳು
ಹಿರೇಮಠವೇ ತಮ್ಮ ಮನೆಗೆ ಬಂದಿದೆ
ಎಂದು ಭಾವಿಸುತ್ತಿದ್ದರು.
ಮೂರ್ತಿಯವರನ್ನು ಜನಗಳು
ಹಿರೇಮಠದವರೆಂದೇ ಸಂಬೋಧಿಸುತ್ತಿದ್ದರು.
ಮೂರ್ತಿಯವರು
ಕೊಡುಗೈ ದಾನಿಗಳು ಕೂಡ ಅಹುದು.
ಅವರು ತುಮಕೂರು ವಿಶ್ವವಿದ್ಯಾಲಯ,
ಕನ್ನಡ ಸಾಹಿತ್ಯ ಪರಿಷತ್ತನ್ನು
ಮೊದಲು ಮಾಡಿಕೊಂಡು ಹಲವಾರು
ಸಂಘ, ಸಂಸ್ಥೆಗಳಿಗೆ ದತ್ತಿ-ದೇಣಿಗೆಗಳನ್ನು
ನೀಡಿದ್ದಾರೆ.
ಅವರು ಯಾವುದೇ ದೇಣಿಗೆ ನೀಡಿದರೂ
ಅದು ಸಾವಿರದ ಲೆಕ್ಕದಲ್ಲಲ್ಲ;
ಅದು ಲಕ್ಷ ಲಕ್ಷಗಳ ಲೆಕ್ಕದಲ್ಲಿ!!
ಬರೀ ಹಿರೇಮಠಕ್ಕಷ್ಟೇ
ನಮ್ಮ ತಪೋವನಕ್ಕೂ ಕೂಡ
ಅವರ ಕಾಣಿಕೆ ಸಂದಾಯವಾಗಿದೆ.
ತಪೋವನದಲ್ಲಿ ಅವರ ಹೆಸರಿನಲ್ಲಿ
ಒಂದು ಕೊಠಡಿ ಕೂಡ ಇದೆ.
ಮೂರ್ತಿಯವರು ಸಾಹಿತ್ಯಮನಸ್ಕರು.
ಅವರಿಗೆ ಸಾಹಿತ್ಯ
ಮತ್ತು ಸಾಹಿತಿಗಳ ಮೇಲೆ ಅಪಾರ ಪ್ರೀತಿ.
ಪ್ರತಿಭಾವಂತ ವಿದ್ಯಾರ್ಥಿಗಳನ್ನು
ಪ್ರೋತ್ಸಾಹಿಸುವುದರಲ್ಲೂ
ಅವರು ಹಿಂದೆ ಮುಂದೆ ನೋಡಿದವರಲ್ಲ.
ಮೂರ್ತಿಯವರು ಸ್ವಭಾವತಃ ತುಂಬ ಧಾರಾಳ.
ತಮ್ಮ ಧರ್ಮಪತ್ನಿ ಲಿಂಗ್ಯೆಕ್ಯ
ಮಲ್ಲಮ್ಮನವರ ಸ್ಮರಣೆಯಲ್ಲಿ
ಅವರು ನಮ್ಮ ಹಿರೇಮಠದಲ್ಲಿ
ಪ್ರತಿ ವರ್ಷವೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ
ಪ್ರೋತ್ಸಾಹಧನವನ್ನಿತ್ತು ಅಭಿನಂದಿಸುತ್ತಿದ್ದರು.
95, 96 ರವರೆಗೂ ಅವರು ತಮ್ಮ ಪುಟ್ಟ
ಹಸಿರು ಕಾರನ್ನು ಓಡಿಸಿಕೊಂಡು
ತುಮಕೂರಿನಲ್ಲಿ ಸಂಚರಿಸುತ್ತಿದ್ದರು
ಎಂದರೆ ಅವರ ಮನೋಬಲ
ಮತ್ತು ದೃಢತೆ ಅದೆಷ್ಟಿತ್ತು ಎಂದು
ನಾವು ಊಹಿಸಿಕೊಳ್ಳಬೇಕಷ್ಟೇ.
ಮೂರ್ತಿಯವರು ನಿತ್ಯೋತ್ಸವವಿದ್ದ
ಹಾಗೆ ಮಾತ್ರ ಅಲ್ಲ,
ಅವರು ನಿತ್ಯೋತ್ಸಾಹವಿದ್ದ ಹಾಗೆ ಕೂಡ ಇದ್ದರು.
ಮೂರ್ತಿಯವರ ಮೂರ್ತಿ ಚಿಕ್ಕದಾದರೂ
ಅವರ ಕೀರ್ತಿ ದೊಡ್ಡದು.
ಮೂರ್ತಿಯವರು ತುಂಬ ತೆಳ್ಳಗಿದ್ದರು.
ಅವರ ಸುತ್ತಮುತ್ತ ಗಾಳಿ ಕೂಡ
ಜೋರಾಗಿ ಬೀಸುವುದಕ್ಕೆ ಹಿಂದೇಟು ಹಾಕುತ್ತಿತ್ತು.
ಮೂರ್ತಿಯವರ ಶರೀರ ಅದೆಷ್ಟೇ ಕೃಶವಾಗಿದ್ದರೂ
ಅವರೊಳಗಿನ ಒಲವು, ನಿಲುವುಗಳು ಮಾತ್ರ
ಬಂಡೆಯಂತಿದ್ದವು. ಅವರಲ್ಲಿ ದೃಢತೆ ಇತ್ತು
ಮತ್ತು ಅವರಲ್ಲಿ ಅಪ್ಪಟ ಆತ್ಮವಿಶ್ವಾಸವಿತ್ತು.
ಜಿ. ಎಸ್. ಎಸ್. ಮೂರ್ತಿಯವರ
ಪರಿವಾರದ ಜನಗಳು ಕೊನೆಯ ಉಸಿರನವರೆಗೆ
ಅವರನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ.
ಅದಕ್ಕೆಂದೇ ಹೆಂಡತಿಯನ್ನು
ಕಳೆದುಕೊಂಡಾದ ಮೇಲೆಯೂ ಇಷ್ಟೊಂದು
ದಿನಗಳವರೆಗೆ ಅವರಿಗೆ ಸುದೀರ್ಘವಾಗಿ
ಬದುಕುವುದಕ್ಕೆ ಸಾಧ್ಯವಾಯಿತು.
96 ಎಂದರೆ ಶತಾಯ ಆದ ಹಾಗೇನೇ!!
ದೇವರು ಅವರನ್ನು ಇರೋವರೆಗೆ ಚೆನ್ನಾಗಿ ಇರಿಸಿ
ಈಗ ತನ್ನ ಬಳಿಗೆ ಕರೆಯಿಸಿಕೊಂಡಿದ್ದಾನೆ.
ಅವರು ಇನ್ನಷ್ಟು, ಮತ್ತಷ್ಟು ವರುಷ ಇರಬೇಕಿತ್ತು
ಎಂದು ಹಾಗೇ ಸುಮ್ಮನೇ ಸಾಂಪ್ರದಾಯಿಕವಾಗಿ
ಹೇಳುವುದಕ್ಕಿಂತ ನಾವೆಲ್ಲ ಸೇರಿ
ಅವರನ್ನು ಸಂತೋಷದಿಂದ
ಶಿವನ ಸನ್ನಿಧಾನಕ್ಕೆ ಬೀಳ್ಕೊಡುವಾ.
ಅವರ ಇದುವರೆಗಿನ ನಿಷ್ಕಲಂಕ ಬದುಕಿಗೆ
ನಾವೆಲ್ಲ ಒಂದು ಬಹುದೊಡ್ಡ
ಕೃತಜ್ಞತೆಯನ್ನು ಸಲ್ಲಿಸೋಣ.
ಮೂರ್ತಿಯವರು
“ಪುನರಪಿ ಜನನಂ, ಪುನರಪಿ ಮರಣಂ” ಎಂಬ
ಕ್ರಿಯೆ-ಪ್ರಕ್ರಿಯೆಗೆ ಒಳಗಾಗುವುದು ಬೇಡ.
ಅವರು ಮುಕ್ತ-ಮುಕ್ತವಾಗಲಿ.
ಅವರು ಮುಕ್ತರಾಗಲಿ.
ದೇವರು, ಆ ನಮ್ಮ ಶಿವ,
ಅವರನ್ನು ತನ್ನೊಳಗು ಮಾಡಿಕೊಳ್ಳಲಿ
ಎಂದು ನಾವು ದೇವರಲ್ಲಿ ಪ್ರಾರ್ಥಿಸುತ್ತೇವೆ.
ಇದೇ ಸಂದರ್ಭದಲ್ಲಿ
ಮೂರ್ತಿಯವರ ಅಗಲಿಕೆಯಿಂದ
ನೊಂದ ಅವರ ಪರಿವಾರ
ಮತ್ತು ಕುಟುಂಬಸದಸ್ಯರಿಗೆ
ಸಾಂತ್ವನವನ್ನು ಹೇಳುತ್ತ
ಅವರ ಮನೋತಳಮಳವು
ಆದಷ್ಟು ಬೇಗ ಶಾಂತವಾಗಲಿ
ಎಂದು ಹದುಳ ಹಾರೈಸುತ್ತೇವೆ.
ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿಯುವರು
ಹಿರೇಮಠ, ತಪೋವನ, ತುಮಕೂರು
ಒಂದು ಮಾತು ಮಾತ್ರ ಸತ್ಯ.
ಹಾಡುವುದರಿಂದ ಅವರ ಆಯುಷ್ಯ ಜಾಸ್ತಿಯಾಯಿತು.
ಮೂರ್ತಿಯವರು ಎಲ್. ಐ. ಸಿ. ಸಂಸ್ಥೆಯ
ಮುಖವಾಗಿ ಮತ್ತು ಮುಖವಾಣಿಯಾಗಿ
ಗುರುತಿಸಿಕೊಂಡವರು.
ಸಮಾಜಮುಖಿ ಸೇವೆಯಲ್ಲಿ
ಮೂರ್ತಿಯವರು ಯಾವಾಗಲೂ
ಮುಂಚೂಣಿಯಲ್ಲಿರುತ್ತಿದ್ದರು.
ಅವರ ತಮ್ಮ ಬದುಕಿಗೆ ಸೇವಾದೀಕ್ಷೆಯನ್ನು
ಕೊಟ್ಟುಕೊಂಡಿದ್ದರು.
ಹಿರೇಮಠಕ್ಕೆ ಅವರ ಸೇವೆ ಅನನ್ಯವಾದುದು.
ಅವರು ಹಿರೇಮಠದ ಭಕ್ತಾದಿಗಳ
ಮನೆಗೆ ಹೋದರೆ ಭಕ್ತಾದಿಗಳು
ಹಿರೇಮಠವೇ ತಮ್ಮ ಮನೆಗೆ ಬಂದಿದೆ
ಎಂದು ಭಾವಿಸುತ್ತಿದ್ದರು.
ಮೂರ್ತಿಯವರನ್ನು ಜನಗಳು
ಹಿರೇಮಠದವರೆಂದೇ ಸಂಬೋಧಿಸುತ್ತಿದ್ದರು.
ಮೂರ್ತಿಯವರು
ಕೊಡುಗೈ ದಾನಿಗಳು ಕೂಡ ಅಹುದು.
ಅವರು ತುಮಕೂರು ವಿಶ್ವವಿದ್ಯಾಲಯ,
ಕನ್ನಡ ಸಾಹಿತ್ಯ ಪರಿಷತ್ತನ್ನು
ಮೊದಲು ಮಾಡಿಕೊಂಡು ಹಲವಾರು
ಸಂಘ, ಸಂಸ್ಥೆಗಳಿಗೆ ದತ್ತಿ-ದೇಣಿಗೆಗಳನ್ನು
ನೀಡಿದ್ದಾರೆ.
ಅವರು ಯಾವುದೇ ದೇಣಿಗೆ ನೀಡಿದರೂ
ಅದು ಸಾವಿರದ ಲೆಕ್ಕದಲ್ಲಲ್ಲ;
ಅದು ಲಕ್ಷ ಲಕ್ಷಗಳ ಲೆಕ್ಕದಲ್ಲಿ!!
ಬರೀ ಹಿರೇಮಠಕ್ಕಷ್ಟೇ
ನಮ್ಮ ತಪೋವನಕ್ಕೂ ಕೂಡ
ಅವರ ಕಾಣಿಕೆ ಸಂದಾಯವಾಗಿದೆ.
ತಪೋವನದಲ್ಲಿ ಅವರ ಹೆಸರಿನಲ್ಲಿ
ಒಂದು ಕೊಠಡಿ ಕೂಡ ಇದೆ.
ಮೂರ್ತಿಯವರು ಸಾಹಿತ್ಯಮನಸ್ಕರು.
ಅವರಿಗೆ ಸಾಹಿತ್ಯ
ಮತ್ತು ಸಾಹಿತಿಗಳ ಮೇಲೆ ಅಪಾರ ಪ್ರೀತಿ.
ಪ್ರತಿಭಾವಂತ ವಿದ್ಯಾರ್ಥಿಗಳನ್ನು
ಪ್ರೋತ್ಸಾಹಿಸುವುದರಲ್ಲೂ
ಅವರು ಹಿಂದೆ ಮುಂದೆ ನೋಡಿದವರಲ್ಲ.
ಮೂರ್ತಿಯವರು ಸ್ವಭಾವತಃ ತುಂಬ ಧಾರಾಳ.
ತಮ್ಮ ಧರ್ಮಪತ್ನಿ ಲಿಂಗ್ಯೆಕ್ಯ
ಮಲ್ಲಮ್ಮನವರ ಸ್ಮರಣೆಯಲ್ಲಿ
ಅವರು ನಮ್ಮ ಹಿರೇಮಠದಲ್ಲಿ
ಪ್ರತಿ ವರ್ಷವೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ
ಪ್ರೋತ್ಸಾಹಧನವನ್ನಿತ್ತು ಅಭಿನಂದಿಸುತ್ತಿದ್ದರು.
95, 96 ರವರೆಗೂ ಅವರು ತಮ್ಮ ಪುಟ್ಟ
ಹಸಿರು ಕಾರನ್ನು ಓಡಿಸಿಕೊಂಡು
ತುಮಕೂರಿನಲ್ಲಿ ಸಂಚರಿಸುತ್ತಿದ್ದರು
ಎಂದರೆ ಅವರ ಮನೋಬಲ
ಮತ್ತು ದೃಢತೆ ಅದೆಷ್ಟಿತ್ತು ಎಂದು
ನಾವು ಊಹಿಸಿಕೊಳ್ಳಬೇಕಷ್ಟೇ.
ಮೂರ್ತಿಯವರು ನಿತ್ಯೋತ್ಸವವಿದ್ದ
ಹಾಗೆ ಮಾತ್ರ ಅಲ್ಲ,
ಅವರು ನಿತ್ಯೋತ್ಸಾಹವಿದ್ದ ಹಾಗೆ ಕೂಡ ಇದ್ದರು.
ಮೂರ್ತಿಯವರ ಮೂರ್ತಿ ಚಿಕ್ಕದಾದರೂ
ಅವರ ಕೀರ್ತಿ ದೊಡ್ಡದು.
ಮೂರ್ತಿಯವರು ತುಂಬ ತೆಳ್ಳಗಿದ್ದರು.
ಅವರ ಸುತ್ತಮುತ್ತ ಗಾಳಿ ಕೂಡ
ಜೋರಾಗಿ ಬೀಸುವುದಕ್ಕೆ ಹಿಂದೇಟು ಹಾಕುತ್ತಿತ್ತು.
ಮೂರ್ತಿಯವರ ಶರೀರ ಅದೆಷ್ಟೇ ಕೃಶವಾಗಿದ್ದರೂ
ಅವರೊಳಗಿನ ಒಲವು, ನಿಲುವುಗಳು ಮಾತ್ರ
ಬಂಡೆಯಂತಿದ್ದವು. ಅವರಲ್ಲಿ ದೃಢತೆ ಇತ್ತು
ಮತ್ತು ಅವರಲ್ಲಿ ಅಪ್ಪಟ ಆತ್ಮವಿಶ್ವಾಸವಿತ್ತು.
ಜಿ. ಎಸ್. ಎಸ್. ಮೂರ್ತಿಯವರ
ಪರಿವಾರದ ಜನಗಳು ಕೊನೆಯ ಉಸಿರನವರೆಗೆ
ಅವರನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ.
ಅದಕ್ಕೆಂದೇ ಹೆಂಡತಿಯನ್ನು
ಕಳೆದುಕೊಂಡಾದ ಮೇಲೆಯೂ ಇಷ್ಟೊಂದು
ದಿನಗಳವರೆಗೆ ಅವರಿಗೆ ಸುದೀರ್ಘವಾಗಿ
ಬದುಕುವುದಕ್ಕೆ ಸಾಧ್ಯವಾಯಿತು.
96 ಎಂದರೆ ಶತಾಯ ಆದ ಹಾಗೇನೇ!!
ದೇವರು ಅವರನ್ನು ಇರೋವರೆಗೆ ಚೆನ್ನಾಗಿ ಇರಿಸಿ
ಈಗ ತನ್ನ ಬಳಿಗೆ ಕರೆಯಿಸಿಕೊಂಡಿದ್ದಾನೆ.
ಅವರು ಇನ್ನಷ್ಟು, ಮತ್ತಷ್ಟು ವರುಷ ಇರಬೇಕಿತ್ತು
ಎಂದು ಹಾಗೇ ಸುಮ್ಮನೇ ಸಾಂಪ್ರದಾಯಿಕವಾಗಿ
ಹೇಳುವುದಕ್ಕಿಂತ ನಾವೆಲ್ಲ ಸೇರಿ
ಅವರನ್ನು ಸಂತೋಷದಿಂದ
ಶಿವನ ಸನ್ನಿಧಾನಕ್ಕೆ ಬೀಳ್ಕೊಡುವಾ.
ಅವರ ಇದುವರೆಗಿನ ನಿಷ್ಕಲಂಕ ಬದುಕಿಗೆ
ನಾವೆಲ್ಲ ಒಂದು ಬಹುದೊಡ್ಡ
ಕೃತಜ್ಞತೆಯನ್ನು ಸಲ್ಲಿಸೋಣ.
ಮೂರ್ತಿಯವರು
“ಪುನರಪಿ ಜನನಂ, ಪುನರಪಿ ಮರಣಂ” ಎಂಬ
ಕ್ರಿಯೆ-ಪ್ರಕ್ರಿಯೆಗೆ ಒಳಗಾಗುವುದು ಬೇಡ.
ಅವರು ಮುಕ್ತ-ಮುಕ್ತವಾಗಲಿ.
ಅವರು ಮುಕ್ತರಾಗಲಿ.
ದೇವರು, ಆ ನಮ್ಮ ಶಿವ,
ಅವರನ್ನು ತನ್ನೊಳಗು ಮಾಡಿಕೊಳ್ಳಲಿ
ಎಂದು ನಾವು ದೇವರಲ್ಲಿ ಪ್ರಾರ್ಥಿಸುತ್ತೇವೆ.
ಇದೇ ಸಂದರ್ಭದಲ್ಲಿ
ಮೂರ್ತಿಯವರ ಅಗಲಿಕೆಯಿಂದ
ನೊಂದ ಅವರ ಪರಿವಾರ
ಮತ್ತು ಕುಟುಂಬಸದಸ್ಯರಿಗೆ
ಸಾಂತ್ವನವನ್ನು ಹೇಳುತ್ತ
ಅವರ ಮನೋತಳಮಳವು
ಆದಷ್ಟು ಬೇಗ ಶಾಂತವಾಗಲಿ
ಎಂದು ಹದುಳ ಹಾರೈಸುತ್ತೇವೆ.
ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿಯುವರು
ಹಿರೇಮಠ, ತಪೋವನ, ತುಮಕೂರು

.jpeg)
Comments
Post a Comment