Good Evening, Happy Wednesday6th September 2023
@ TapOvanam, Hiremath, Tumkur
ಕೃಷ್ಣ ಟ್ರಬಲ್‌ಶೂಟರ್. (Troubleshooter)
ಕೃಷ್ಣ ಸ್ವತಃ ತನ್ನನ್ನು ತಾನು
``ಟ್ರಬಲ್‌ಶೂಟರ್'' ಎಂದು ಪರಿಚಯಿಸಿಕೊಂಡಿದ್ದಾನೆ.
ಯದಾ ಯದಾ ಹಿ ಧರ್ಮಸ್ಯ
ಗ್ಲಾನಿರ್ಭವತಿ ಭಾರತ |
ಅಭ್ಯುತ್ಥಾನಂ ಅಧರ್ಮಸ್ಯ
ತದಾತ್ಮಾನಂ ಸೃಜಾಮ್ಯಹಮ್ ||
(ಭಗವದ್ಗೀತೆ)
“ಯದಾ ಧರ್ಮಸ್ಯ ಗ್ಲಾನಿಃ ಭವತಿ,
ಯದಾ ಅಧರ್ಮಸ್ಯ ಅಭ್ಯುತ್ಥಾನಂ ಭವತಿ -
ತದಾ ಅಹಂ ಆತ್ಮಾನಂ ಸೃಜಾಮಿ'' ಎಂದು.
ಕೃಷ್ಣನ ಸಹಾಯ ಮತ್ತು ಸಾರಥ್ಯ
ಇಲ್ಲದೆ ಹೋಗಿದ್ದರೆ ಪಾಂಡವರ ಗತಿ?
ಪಾಂಡವರು ಮತ್ತೆ ಎದ್ದೇಳುವುದು
ಆಗುತ್ತಲೇ ಇರಲಿಲ್ಲ.
ಕೃಷ್ಣ ಹುಟ್ಟಿದರೆ ಅದು ಅಷ್ಟಮಿ,
ಕೃಷ್ಣಜನ್ಮಾಷ್ಟಮಿ.
ರಾಮ ಹುಟ್ಟಿದರೆ ಅದು ನವಮಿ,
ರಾಮನವಮಿ.
ಮಾ ದುರ್ಗಾ, ರಾಕ್ಷಸರನ್ನು ಹುಟ್ಟಲಿಲ್ಲ ಅನಿಸಿದರೆ
ಅದು ದಶಮಿ, ವಿಜಯದಶಮಿ.
ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತಪೋವನ, ತುಮಕೂರು


Comments
Post a Comment