Good Evening, Happy Monday
4th September 2023
@ TapOvanam, Hiremath, Tumkur
ಧರ್ಮವತ್ಸಲರು,
ಶ್ರೀಮಠದ ಅಭಿಮಾನಿಹಿತೈಷಿಗಳು
ಮತ್ತು ಶ್ರೀಮಠದೊಂದಿಗೆ
ಅವಿನಾಭಾವ ಸಂಬಂಧವನ್ನು ಹೊಂದಿದ
............................................ಇವರಿಗೆ.
ಶ್ರೀ ಶ್ರೀಗಳವರ ಶುಭಾಶೀರ್ವಾದಗಳೊಂದಿಗೆ
ದಿನಾಂಕ 11, ಸೆಪ್ಟೆಂಬರ್, 2023ರಂದು
ಶೋಭಕೃತ್ ನಾಮ ಸಂವತ್ಸರದ
ಕೊನೆಯ ಶ್ರಾವಣ ಸೋಮವಾರ.
ಸೋಮವಾರಕ್ಕೆ ಭಾರತೀಯ ಸಂಸ್ಕೃತಿಯಲ್ಲಿ
ಧಾರ್ಮಿಕವಾಗಿ ವಿಶೇಷ ಮಹತ್ತ್ವವಿದೆ.
ಸೋಮವಾರವನ್ನು ಶಿವನ ವಾರವೆಂದು
ಮತ್ತು ಶಿವಭಕ್ತರ ವಾರವೆಂದು ಭಾವಿಸುತ್ತಾರೆ.
ಅದರಲ್ಲೂ ಶ್ರಾವಣ ಸೋಮವಾರವು
ಶಿವಭಕ್ತರಿಗೆ ತುಂಬ ಪ್ರಿಯವಾದುದು.
ಶಿವಭಕ್ತರ ಭಕ್ತಿಪ್ರದರ್ಶನಕ್ಕೆ
ಶ್ರಾವಣ ಸೋಮವಾರವು
ಒಂದು ವಿಶೇಷ ಹಾಗೂ ಉತ್ತಮ ವೇದಿಕೆ.
ಈ ವರುಷದ ಕೊನೆಯ ಶ್ರಾವಣ ಸೋಮವಾರದಂದು
ಅಂದರೆ 11. 09. 2023,
ತಪೋವನದಲ್ಲಿ
ಪರಮಪೂಜ್ಯ ಡಾ. ಶ್ರೀ ಶ್ರೀ ಶಿವಾನಂದ
ಶಿವಾಚಾರ್ಯ ಸ್ವಾಮೀಜಿಯವರ
ದಿವ್ಯ ಸನ್ನಿಧಾನದಲ್ಲಿ ಸಾಮೂಹಿಕ
ಶಿವಪೂಜಾ ಕಾರ್ಯಕ್ರಮವನ್ನು
ಏರ್ಪಡಿಸಲಾಗಿದೆ.
ಭಕ್ತಾದಿಗಳು ಬೆಳಗಿನ 08.00 ಗಂಟೆಗೆ ತಪೋವನಕ್ಕೆ ಬರಬೇಕು.
08. 30ಕ್ಕೆ ಸಾಮೂಹಿಕ ರುದ್ರಾಭಿಷೇಕ
ಮತ್ತು ಸಾಮೂಹಿಕ ಇಷ್ಟಲಿಂಗಪೂಜೆ
ಪ್ರಾರಂಭವಾಗುತ್ತದೆ.
ಜೊತೆಯಲ್ಲಿ ಗುರುಗಳ ಪಾದಪೂಜೆ
ಮತ್ತು ಆಶೀರ್ವಚನ ಕೂಡ ಇರುತ್ತದೆ.
ಆಗಮಿಸಿದ ಎಲ್ಲ ಭಕ್ತಾದಿಗಳಿಗೂ
ಪ್ರಸಾದದ ವ್ಯವಸ್ಥೆ ಇರುತ್ತದೆ.
ನಿಸರ್ಗದ ಮಡಿಲಲ್ಲಿರುವ
ತಪೋಧಾಮದಲ್ಲಿ ಭಕ್ತರೆಲ್ಲರೂ
ಆನಂದದಿಂದ ಶಿವಪೂಜೆಯನ್ನು
ಮಾಡಿಕೊಂಡು ಶಿವಕೃಪೆಗೆ
ಮತ್ತು ಗುರುಕೃಪೆಗೆ ಪಾತ್ರರಾಗಬೇಕು
ಎಂದು ಭಕ್ತರಲ್ಲಿ ಅರಿಕೆಮಾಡಿಕೊಳ್ಳುತ್ತೇವೆ.
ಸ್ವಾಮೀಜಿಯವರ ಆದೇಶದ ಮೇರೆಗೆ
ಶಿವಪೂಜಾ ಸಮಾರಂಭಕ್ಕೆ ತಮ್ಮನ್ನು
ಹಾಗೂ ತಮ್ಮ ಕುಟುಂಬ ಪರಿವಾರವನ್ನು
ಖುದ್ದಾಗಿ ಆಹ್ವಾನಿಸುತ್ತಿದ್ದೇವೆ.
ತಾವು ಶಿವಪೂಜಾ ಕಾರ್ಯಕ್ರಮದಲ್ಲಿ
ಭಾಗವಹಿಸಿದರೆ ಪೂಜ್ಯ ಗುರುಗಳಿಗೆ
ತುಂಬ ಸಂತೋಷವಾಗುತ್ತದೆ.
ಬನ್ನಿ, ಸಕುಟುಂಬ ಪರಿವಾರ
ಸಮೇತರಾಗಿ ಬನ್ನಿ. ಸುಸ್ವಾಗತ.
ವ್ಯವಸ್ಥಾಪಕರು, ಹಿರೇಮಠ,
ತಪೋವನ, ತುಮಕೂರು
Comments
Post a Comment