Good Evening, Happy Thursday
7th September 2023
@ TapOvanam, Hiremath, Tumkur


ಮೊನ್ನೆ ತಾನೆ ನಮಗೊಬ್ಬರು ಕೇಳಿದರು,
“ಬುದ್ಧೀ, ಇತ್ತೀಚೆಗೆ ಪ್ರತಿಯೊಂದು
ವಿಷಯವೂ ವಾದ, ವಿವಾದಗಳಿಗೆ
ಕಾರಣವಾಗುತ್ತಿದೆಯಲ್ಲ,
ಇದೇಕೆ ಹೀಗೆ?
ಸದ್ಯ “ಸನಾತನ ಧರ್ಮ,
ಇಂಡಿಯಾ, ಭಾರತ,
ಒಂದು ದೇಶ, ಒಂದು ಕಾನೂನು”
ಪ್ರತಿಯೊಂದು ವಿಷಯಕ್ಕೂ,
ಪ್ರತಿಯೊಂದಕ್ಕೂ ವಿವಾದವಾಗುತ್ತಿದೆಯಲ್ಲ;
ಎಲ್ಲರೂ ಬಾಯಿಗೆ ಬಂದಂತೆ
ಮಾತನಾಡುತ್ತಾರೆ.
ಇದೆಲ್ಲ ಏಕೆ ಹೀಗೆ?” ಎಂದು
ನಾವು ಅವರಿಗೆ ಹೇಳಿದ್ದು:
``ಈಗ ಜನರಿಗೆ ಹೊಟ್ಟೆ ತುಂಬಿದೆ.
ಜನರಿಗೆ ಹಸಿವೆ ಇಲ್ಲ.
ಜನರು ಹಸಿವೆಯನ್ನು ಕಳೆದುಕೊಂಡಿದ್ದಾರೆ.
ಈಗ ಹಸಿವೆಯ ಸಮಸ್ಯೆ ಇಲ್ಲ.
ಹೊಟ್ಟೆತುಂಬ ಊಟಮಾಡಿಕೊಂಡು
ಜನಗಳು ಸಮೃದ್ಧವಾಗಿದ್ದಾರೆ.
ಜನರು ಹೀಗೆ ಲೋಕಾಭಿರಾಮವಾಗಿ
ಮಾತನಾಡಿಕೊಂಡಿದ್ದಾರೆ ಎಂದರೆ
ಅವರು ಉಂಡುಟ್ಟುಕೊಂಡು
ಸುಖವಾಗಿದ್ದಾರೆ, ಆರಾಮಾಗಿದ್ದಾರೆ ಎಂದರ್ಥ.
ಜನಗಳ “ಬೇಸಿಕ್ ನೀಡ್ಸ್” Basic Needs
ಎಲ್ಲ “ಫುಲ್‌ಫಿಲ್” ಆಗಿವೆ ಎಂದರ್ಥ.
ಹೊಟ್ಟೆ ತುಂಬಿದ ಮೇಲೆ
ಅವರೇನು ಮಾಡಬೇಕು?
ಅನ್ನ, ನೀರುಗಳಿಗಾಗಿ “ತತ್ರಾಪಿ”
ಕಷ್ಟಪಡುವ ಹಾಗಿದ್ದರೆ
ಹೀಗೆಲ್ಲ ಮೀಡಿಯಾ,
ಸೋಶಿಯಲ್ ಮೀಡಿಯಾಗಳಿಗೆ ಬಂದು
ಮಾತನಾಡುವುದಕ್ಕೆ ಆಗುತ್ತಿರಲಿಲ್ಲ.
ರಾಜಸ್ಥಾನದ ಥಾರ್ ಮರಭೂಮಿಯಲ್ಲಿ
ಇರುವ ಜನಗಳಿಗೆ ಹೀಗೆಲ್ಲ ಮಾತನಾಡಿಕೊಂಡಿರಿ
ಎಂದರೆ ಅವರಿಗೆ ಅದು ಆಗುತ್ತದೆಯಾ?
ಈಗ ಜನಗಳು ಹೀಗೆಲ್ಲ ಮಾತನಾಡಿಕೊಂಡಿದ್ದಾರೆ
ಎಂದರೆ ದೇಶ ಸಮೃದ್ಧವಾಗಿದೆ
ಮತ್ತು ದೇಶದ ಮೇಲೆ ಯಾವುದೇ ತೆರನಾದ
ಭಯದ ನೆರಳಿಲ್ಲ, ಯುದ್ಧಭೀತಿ ಇಲ್ಲ ಎಂದರ್ಥ.
ಎಲ್ಲವೂ ಸ್ವಸ್ಥ, ಸಮೃದ್ಧವಾಗಿ
ಇರುವುದರಿಂದಲೇ ಜನಗಳು
ಇಷ್ಟೊಂದು ನಿಶ್ಚಿಂತರಾಗಿ,
ನಿರ್ಭೀತರಾಗಿ ಮಾತನಾಡಿಕೊಂಡಿದ್ದಾರೆ.
ಜನರು ಲೋಕಾಭಿರಾಮವಾಗಿ
ಮಾತನಾಡಿಕೊಂಡಿರುವುದಕ್ಕೆ
ಊರ ಮುಂದಿನ ಹನುಮಂತನ
ದೇವಸ್ಥಾನದ ಕಟ್ಟೆಗಳು,
ಊರಲ್ಲಿನ ದೊಡ್ಡ ಆಲದಮರಗಳು
ಆಗ ಹರಟೆಕಟ್ಟೆಗಳಾಗಿದ್ದವು.
ಜನಗಳು ಅಲ್ಲಿ ಬಂದು
ಹರಟೆ ಹೊಡಯುತ್ತ ಕುಳಿತುಕೊಳ್ಳುತ್ತಿದ್ದರು.
ನಾವು ಕಾಶಿಯ ಜಂಗಮವಾಡಿ
ಮಠದಲ್ಲಿ ಇದ್ದಾಗ
ವಿದ್ಯಾರ್ಥಿಗಳ ಕೊಠಡಿಗಳ
ಮುಂದೆ ಒಂದು ಕಟ್ಟೆ ಇತ್ತು.
ಈಗಲೂ ಇದೆ.
ಅದನ್ನು ``ಹರಟೆಕಟ್ಟೆ''
ಎಂದು ಕರೆಯುತ್ತಿದ್ದೆವು.
ಓದು ಬೇಸರವಾದಾಗ
ಮತ್ತು ಓದಿ ಬೇಸರವಾದಾಗ ವಿದ್ಯಾರ್ಥಿಗಳು
ಅಲ್ಲಿ ಬಂದು ಕುಳಿತುಕೊಂಡು
ಹರಟೆ ಹೊಡೆಯುತ್ತಿದ್ದರು.
ಹಿಂದಿಯಲ್ಲಿ ಹರಟೆ ಹೊಡೆಯುವುದಕ್ಕೆ
“ಗಪ್ಪಾ ಮಾರನಾ, ಗಪ್ಪೀ ಮಾರನಾ”
ಎಂದು ಹೇಳುತ್ತಾರೆ.
ಹರಟೆಕಟ್ಟೆಗೆ
“ಗಪ್ಪೀ ಚಬೂತರಾ” ಎನ್ನುತ್ತಾರೆ.
ಈಗಿನ ಕಾಲದಲ್ಲಿ ಈ ಹಿಂದಿನ
ನಮ್ಮ ಹಳ್ಳಿಗಳಲ್ಲಿನ
ಹರಟೆಕಟ್ಟೆಗಳ ಕೊರತೆಯನ್ನು
ಇವತ್ತಿನ ಮೀಡಿಯಾ
ಮತ್ತು ಸೋಶಿಯಲ್
ಮೀಡಿಯಾಗಳು ತುಂಬಿಕೊಟ್ಟಿವೆ.
ಮೀಡಿಯಾ, ಸೋಶಿಯಲ್
ಮೀಡಿಯಾಕ್ಕೆ ಬಂದು
ಯಾರು ಬೇಕಾದರೂ,
ಏನು ಬೇಕಾದರೂ ಮಾತನಾಡಬಹುದು
ಎನ್ನುವಂತಾಗಿದೆ.
ಯಾರಿಗೂ ಲಗಾಮು,
ಅಂಕುಶಗಳೇ ಇಲ್ಲ.
ಆ ದೇವರು ಸಹಸ್ರಶೀರ್ಷ,
ಸಹಸ್ರಾಕ್ಷನಾದರೆ ಜನಗಳು,
ಅದರಲ್ಲೂ ನಮ್ಮ ಬುದ್ಧಿವಂತ
ಹಾಗೂ ತಥಾಕಥಿತ ಬುದ್ಧಿವಂತ ಜನಗಳು
“ಸಹಸ್ರಜಿಹ್ವಾ” ಆಗಿದ್ದಾರೆ.
ನಮ್ಮ ದೃಷ್ಟಿಯಲ್ಲಿ ನಮ್ಮ ಜನಗಳು
“ಸಹಸ್ರಜಿಹ್ವಾ” ಆಗೋದು ತಪ್ಪಲ್ಲ;
ಆದರೆ ಅವರ ನಾಲಿಗೆಗಳು
ಇತಿಮಿತಿಗಳನ್ನು ಮೀರಿಹೋಗಬಾರದು
ಮತ್ತು ಇನ್ನೊಬ್ಬರ ಘನತೆ, ಗೌರವಗಳಿಗೆ
ಧಕ್ಕೆ ತರಬಾರದು. ಅದಷ್ಟೇ ನಮ್ಮ ಕಾಳಜಿ.
ಇದು 12ನೇ ಶತಮಾನದಲ್ಲಿನ ಹಾಗೆ
“ನುಡಿದರೆ ಮುತ್ತಿನ ಹಾರದಂತಿರಬೇಕು''
ಎಂದು ಹೇಳುವ ಕಾಲ ಇದಲ್ಲ;
“ನುಡಿದರೆ ಎಫ್. ಆಯ್. ಆರ್. F I R
ಆಗದಂತೆ ಇರಬೇಕು” ಎಂದು ಹೇಳುವ ಕಾಲ ಇದು!!


ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತಪೋವನ, ತುಮಕೂರು



k

Comments

Popular posts from this blog

21st September 2023