Suprabhaata



Good Morning, Happy Saturday

9th September 2023

@ Hanagal, Haveri Dist 


ಒಮ್ಮೆ ಹುಟ್ಟಿದ ಮೇಲೆ ಎಲ್ಲಿಯವರೆಗೆ ದೇವರು 

“ಗ್ರೀನ್ ಸಿಗ್ನಲ್” (Green Signal) 

ತೋರಿಸಿಕೊಂಡಿರುತ್ತಾನೋ 

ಅಲ್ಲಿಯವರೆಗೆ ಓಡಿಕೊಂಡಿರೋದು.

 

ಯಾವಾಗ ದೇವರು 

“ರೆಡ್ ಸಿಗ್ನಲ್” (Red Signal)

ತೋರಿಸುತ್ತಾನೋ ಆಗ ಟೋಟಲ್ಲಾಗಿ 

ನಿಂತು ಬಿಡಬೇಕು.


ಮಧ್ಯ ಮಧ್ಯದಲ್ಲಿ ಅಲ್ಲಲ್ಲಿ 

ಹಂಪ್ಸ್, ಸ್ಪೀಡ್ ಬ್ರೆಕರ‍್ಸ್, ಬಂದಾಗ,  

ರಸ್ತೆಮಧ್ಯದಲ್ಲಿ ಮನುಷ್ಯರೋ, ಪ್ರಾಣಿಗಳೋ 

ಯಾರೋ ಥಟ್ಟನೇ ಅಡ್ಡಬಂದಾಗ 

``ಬ್ರೆಕ್ '' (Break) ಹಾಕಿಬಿಟ್ಟು 

ವೇಗವನ್ನು ಕಡಿಮೆ ಮಾಡಬೇಕಾಗುತ್ತದೆ.


ಕಾಯಿಲೆ, ಕಸಾಲೆಗಳು, ರೋಗರುಜಿನಗಳು, 

ಆಲಸ್ಯ, ಆಯಾಸಗಳು ಹಂಪ್ಸ್, ಸ್ಪೀಡ್ ಬ್ರೆಕರ‍್ಸ್ 

ಹಾಗೂ ಬ್ರೆಕ್ ಗಳಿದ್ದ ಹಾಗೆ. 


ಇವು ನಮ್ಮನ್ನು ನಮ್ಮ ವೇಗದ ಮಧ್ಯದಲ್ಲಿ

 ನಮ್ಮನ್ನು ನಿಲ್ಲಿಸುತ್ತವೆ. 

ಆದರೆ ಶಾಶ್ವತವಾಗಿ ನಿಲ್ಲಿಸುವುದಿಲ್ಲ.


ಅಲ್ಟಿಮೇಟ್ಲಿ, Ultimately ದೇವರು “ರೆಡ್ ಸಿಗ್ನಲ್” 

ತೋರಿಸಿದಾಗಲೇ ಶಾಶ್ವತವಾಗಿ ನಿಲ್ಲೋದು!!


ನಮ್ಮ ಧಾವಂತಕ್ಕೆ 

ಮತ್ತು ನಮ್ಮ ಧಾವಂತದ ಬದುಕಿಗೆ 

ನಮ್ಮಿಚ್ಛೆಗಿಂತ ದೇವರ ಇಚ್ಛೆಯೇ ಮುಖ್ಯ.

 

ಆದ್ದರಿಂದಲೇ ದೊಡ್ಡವರು

 “ಭಗವದಿಚ್ಛಾ ಗರೀಯಸೀ” ಎಂದು ಹೇಳಿರೋದು.


ಡಾ. ಶಿವಾನಂದ ಶಿವಾಚಾರ್ಯರು 

ಹಿರೇಮಠ, ತಪೋವನ, ತುಮಕೂರು

Comments

Popular posts from this blog

21st September 2023