Posts

Showing posts from February, 2023
Image
Good Morining, Happy Wednesday, 1st March 2023 @ TapOvanam, Hiremath, Tumkur ಜನೇವರಿ, ಫೆಬ್ರವರಿ ಎರಡನ್ನೂ ಕಳೆದುಕೊಂಡು ಮಾರ್ಚ್ ಮಾಹೆಯಲ್ಲಿ ಹೆಜ್ಜೆ ಇಡುತ್ತಿದ್ದೇವೆ. ಶುಭಮಸ್ತು, ಶಿವಂ ಭೂಯಾತ್... ಬದುಕಿನಲ್ಲಿರುವ ಆ “ವರಿ, ವರ್ರಿ”, ಈ “ವರಿ, ವರ್ರಿ (Worry) ”, ಈ ಎಲ್ಲ ``ವರಿ, ವರ್ರಿ (Worry)ಗಳನ್ನು ಕಳೆದುಕೊಂಡು ನಮ್ಮಗಳ ಬದುಕಿಗೆ ನಾವುಗಳು ಮಾರ್ಚ್ March, ಲೆಟ್ ಅಸ್ ಮಾರ್ಚ್, Let us March, ಲೆಟ್ ಅಸ್ ಮೂವ್ಹ್, Let us Move, ಗೋ ಅಹೆಡ್, Go ahead ಹೇಳಿಕೊಂಡು ಮತ್ತು ಹಾಗಂದುಕೊಂಡು ಮುನ್ನುಗ್ಗುತ್ತ ಇರೋದು ಮತ್ತು ಮುನ್ನುಗ್ಗಿಕೊಂಡಿರೋದು ಜೀವನ; ಮತ್ತದುವೇ ಜೀವನಸಾರ. ನಾವು, ನೀವುಗಳು ತಿಳಿದುಕೊಂಡ ಹಾಗೆ ಜೀವನವೆಂದರೆ ಬರೀ ಅದೊಂದು ರಸಾಯನವಲ್ಲ; ಅದೊಂದು ರಸಯಾನ ಕೂಡ ಅಹುದು. ಜೀವನವೆಂದರೆ ದೇವಾಲಯದಲ್ಲಿ ಕೊಡುವ ತೀರ್ಥ, ಪ್ರಸಾದ, ಚರ್ಪು ಅಲ್ಲ. ಜೀವನವೆಂದರೆ ಅದೊಂದು ತೀರ್ಥ!! ಜೀವನವೆಂದರೆ ಅದೊಂದು ಪ್ರಸಾದ!! ಡಾ. ಶಿವಾನಂದ ಶಿವಾಚಾರ್ಯರು ಹಿರೇಮಠ, ತಪೋವನ, ತುಮಕೂರು
Image
  Good Morning, Happy Wednesday 1st March 2023 @ TapOvanam, Hiremath, Tumkur ಮಂತ್ರದೀಕ್ಷೆಯನ್ನು ಗುರುಗಳು ಕೊಡುತ್ತಾರೆ. ಮಾತ್ರಾದೀಕ್ಷೆಯನ್ನು ಡಾಕ್ಟರು ಕೊಡುತ್ತಾರೆ. ಡಾ. ಶಿವಾನಂದ ಶಿವಾಚಾರ್ಯರು ಹಿರೇಮಠ, ತಪೋವನ, ತುಮಕೂರು
Image
  Good Morning, Happy Tuesday 28th February 2023 @ TapOvanam, Hiremath, Tumkur -: ಬೆಂಗಳೂರು ಟ್ರಾಫಿಕ್ ಕುರಿತು ಹೇಳಿದ್ದು :- ಬೆಂಗಳೂರಿನ ಈ ಒಂದು “ಎಂಡ್”ದಿಂದ ಆ ಇನ್ನೊಂದು “ಎಂಡ್”ಗೆ ಹೋಗುವಷ್ಟರಲ್ಲಿ “ದಿ ಎಂಡ್” ಆಗಿಹೋಗಿರುತ್ತದೆ. ಡಾ. ಶಿವಾನಂದ ಶಿವಾಚಾರ್ಯರು ಹಿರೇಮಠ, ತಪೋವನ, ತುಮಕೂರು
Image
  Good Morning, Happy Tuesday 28th February 2023 @ TapOvanam, Hiremath, Tumkur ಹಾಲನ್ನು ಹುಳಿಯಾಗಿಸೋದು, ಹಾಲಲ್ಲಿ ಹುಳಿ ಹಿಂಡೋದು ದೊಡ್ಡ ಕೆಲಸವಲ್ಲ; ಅದು ಮಹತ್ತರ ಕೆಲಸವಲ್ಲ. ಹುಳಿಯಾದ ಹಾಲನ್ನು ಮತ್ತೆ ಹಾದಿಗೆ ತಂದು ಅದನ್ನು ತುಪ್ಪವಾಗಿಸೋದು ದೊಡ್ಡ ಕೆಲಸ. ಹಾಲನ್ನು ತುಪ್ಪವಾಗಿಸಿ ಅದರ ಆಯುಷ್ಯವನ್ನು ಹೆಚ್ಚಿಸೋದು ದೊಡ್ಡ ಕೆಲಸ; ಅದು ಮಹತ್ತರ ಕೆಲಸ. ಹಾಲು, ಹುಳಿ, ಮೊಸರು, ಮಜ್ಜಿಗೆ, ಬೆಣ್ಣೆ....., ಈ ಎಲ್ಲವೂ ಅಲ್ಪಾಯು!! ಈ ಎಲ್ಲ ಹಂತಗಳನ್ನು ದಾಟಿಬಂದ ಅನುಭವದ ಹಿನ್ನೆಲೆಯನ್ನು ಹೊಂದಿದ ತುಪ್ಪ ದೀರ್ಘಾಯು!!! ಹಾಲಲ್ಲಿ ಹುಳಿಹಿಂಡಿ ಅದನ್ನು ಯಾರಾದರೂ ಸರಿ, ಹಾದಿ ತಪ್ಪಿಸಬಹುದು. ಹಾದಿ ತಪ್ಪಿ ಮುಖವನ್ನು ಸಿಂಡರಿಸಿಕೊಂಡಿರುವ ಹಾಲನ್ನು ಮತ್ತೆ ಹಾದಿಗೆ ತಂದು ಅದನ್ನು ತುಪ್ಪವಾಗಿಸೋದು ಘನಂದಾರಿ ಕೆಲಸ. ಅದನ್ನು ಯಾರಾದರೂ ಮಾಡಲಿಕ್ಕೆ ಆಗುವುದಿಲ್ಲ. ಅದನ್ನು ಯಾರೋ ಒಬ್ಬ ಮಹಾನುಭಾವರು, ಸದ್ಗುರುಗಳು, ಗುರುವರೇಣ್ಯರು, ಯತಿವರೇಣ್ಯರು ಮಾಡಬೇಕಷ್ಟೇ. ಡಾ. ಶಿವಾನಂದ ಶಿವಾಚಾರ್ಯರು ಹಿರೇಮಠ, ತಪೋವನ, ತುಮಕೂರು
Image
  Good Evening, Happy Monday On 26th February 2023 @ Bengaluru ರಾವ್ ಬಹದ್ದೂರ್ ಧರ್ಮಪ್ರವರ್ತ ಗುಬ್ಬಿ ತೋಟದಪ್ಪನವರ ಧರ್ಮಸಂಸ್ಥೆ, ಬೆಂಗಳೂರು & ರಾವ್ ಬಹದ್ದೂರ್ ಧರ್ಮಪ್ರವರ್ತ ಗುಬ್ಬಿ ತೋಟದಪ್ಪ ವಿದ್ಯಾರ್ಥಿ ನಿಲಯದ ಹಿರಿಯ ವಿದ್ಯಾರ್ಥಿಗಳ ಬಳಗ - ಇವರುಗಳ ಸಹಯೋಗದಲ್ಲಿ ಧರ್ಮಸಂಸ್ಥೆಯ ಸಂಸ್ಥಾಪನಾ ದಿನಾಚರಣೆ ಮತ್ತು ಹಿರಿಯ ವಿದ್ಯಾರ್ಥಿಗಳ ಸಮಾವೇಶದಲ್ಲಿ ಹೇಳಿದ ಕೆಲವು ಮಾತುಗಳು: 1. ಗುಬ್ಬಿ ತೋಟದಪ್ಪ ಛತ್ರ ಬೆಂಗಳೂರಿನಷ್ಟೇ ಪ್ರಾಚೀನ ಇತಿಹಾಸವನ್ನು ಹೊಂದಿದೆ. 2. ಗುಬ್ಬಿ ತೋಟದಪ್ಪ ಛತ್ರ ಬೆಂಗಳೂರಿನ ಹೃದಯ ಭಾಗದಲ್ಲಿದೆ. 3. ಗುಬ್ಬಿ ತೋಟದಪ್ಪ ಛತ್ರ ಸಮಾಜಕ್ಕೆ ಒಂದು ಬಹುದೊಡ್ಡ ಕೊಡುಗೆ. 4. ಒಂದು ಶತಮಾನಕ್ಕೂ ಹೆಚ್ಚು ವರುಷಗಳ ಇತಿಹಾಸವನ್ನು ಹೊಂದಿದ ಈ ಛತ್ರ ಮತ್ತು ವಿದ್ಯಾರ್ಥಿ ನಿಲಯ ಸಮಾಜವನ್ನು ಕಟ್ಟುವಲ್ಲಿ ಮತ್ತು ಬೆಳೆಯಿಸುವಲ್ಲಿ ತನ್ನದೇ ಆದ ಹಿರಿಮೆ, ಹೆಗ್ಗಳಿಕೆಯನ್ನು ಹೊಂದಿದೆ. 5. ಗುಬ್ಬಿ ತೋಟದಪ್ಪ ಛತ್ರ ಈ ನಮ್ಮ ನಾಡಿಗೆ ಧಾರ್ಮಿಕ ರಂಗದ ಪರಂಜ್ಯೋತಿಯಾದ ಸಿದ್ಧಗಂಗೆಯ ಲಿಂಗ್ಯೆಕ್ಯ ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳನ್ನು ಕೊಟ್ಟಿದೆ. 6. ಗುಬ್ಬಿ ತೋಟದಪ್ಪ ಛತ್ರ ಮತ್ತು ವಿದ್ಯಾರ್ಥಿ ನಿಲಯ ರಾಜಕೀಯ ರಂಗಕ್ಕೆ ಎಸ್. ನಿಜಲಿಂಗಪ್ಪನವರಂಥ ಮಹಾನುಭಾವರನ್ನು ಕೊಡುಗೆಯಾಗಿ ನೀಡಿದೆ. 7. ಧಾರ್ಮಿಕ ರಂಗದ ಉತ್ತುಂಗವಾದ ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಗುಬ್ಬಿ ತೋಟದಪ್ಪ ಛತ್ರದ ವಿದ್ಯಾ...
Image
 ಜ್ಞಾನ, ವಿಜ್ಞಾನ, ತಂತ್ರಜ್ಞಾನ, ತತ್ತ್ವಜ್ಞಾನಗಳ ಚಾರುಸಂಗಮ ನಮ್ಮ ಡಾ. ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮಿಗಳು...   ಅಂದು ಜನೇವರಿ 13. 01. 2013. ಪರಮಪೂಜ್ಯ ಜಗದ್ಗುರು  ಡಾ. ಶ್ರೀ ಬಾಲಗಂಗಾಧರನಾಥ ಮಹಾಸ್ವಾಮಿಗಳು  ತಮ್ಮ ಐಹಿಕದ ಸೇವಾಯಾತ್ರೆಗೆ  ವಿದಾಯ ಹೇಳಿ ಭಗವಂತನ ಸನ್ನಿಧಾನವನ್ನು ಸೇರಿದ್ದಾರೆ.  ನಾಡಿನಾದ್ಯಂತದಿಂದ ಲಕ್ಷ ಲಕ್ಷ ಸಂಖ್ಯೆಯಲ್ಲಿ  ಜನಗಳು ಆದಿಚುಂಚನಗಿರಿ ಶ್ರೀಕ್ಷೇತ್ರಕ್ಕೆ ಆಗಮಿಸಿ  ಪರಮಪೂಜ್ಯರ ಅಂತಿಮ ದರ್ಶನವನ್ನು  ಪಡೆಯುತ್ತಿದ್ದಾರೆ.  ಎಲ್ಲಿ ನೋಡಿದರೂ ಮೈಲುದ್ದದ ಸಾಲುಗಳು.  ದಿನಪೂರ್ತಿ ಕಾದುನಿಂತು ಜನಗಳು  ಪರಮಪೂಜ್ಯ ಶ್ರೀಗಳವರ ಅಂತಿಮ ದರ್ಶನವನ್ನು ಮಾಡಿ  ಅವರಿಗೆ ತಲೆಬಾಗಿ ತಮ್ಮ ಗೌರವವನ್ನು ಸಲ್ಲಿಸುತ್ತಿದ್ದಾರೆ.  ಎಲ್ಲರ ಮುಖದಲ್ಲೂ ಹತಾಶೆ, ನಿರಾಸೆಗಳು  ಮನೆಮಾಡಿಕೊಂಡಿವೆ.  ಎಲ್ಲರೂ ಮ್ಲಾನವದನರಾಗಿದ್ದಾರೆ.  ಎಲ್ಲರೂ ಕುಸಿದ ಮನಸ್ಸಿನವರಾಗಿದ್ದಾರೆ.  ಶ್ರೀಕ್ಷೇತ್ರದ ತುಂಬೆಲ್ಲ  ಶೂನ್ಯ ಹಾಗೂ ಶೂನ್ಯಭಾವ ಆವರಿಸಿಕೊಂಡಿದೆ.    ಅಂದು ಆದಿಚುಂಚನಗಿರಿ ಕ್ಷೇತ್ರ,   ಕಾಳಿದಾಸನ ಚರಮಗೀತೆಯನ್ನು ಕೇಳಿಸಿಕೊಂಡು  ದೇಹಬಿಟ್ಟ ಭೋಜರಾಜನ ಧಾರಾನಗರಿಯಂತಾಗಿದೆ.  ಭೋಜರಾಜ ಕಾಳಿದಾಸನ ಮೇಲೆ  ಒತ್ತಡ ಹೇರಿ ತನ್ನ ಚರಮಗೀತೆಯನ್ನು  ಹಾಡ...
Image
 
Image
  Good Morning, Happy Friday 3rd February 2023 @ TapOvanam, Hiremath, Tumkur ದೇವರು ಎಲ್ಲರ ಹಣೆಬರಹವನ್ನು ಬರೆಯುತ್ತಾನೆ. ಆದರೆ ಆತ ಆಲಸಿ, ಸೋಮಾರಿ, ``ಸೋ ಕಾಲ್ಡ್'' ಸೋಂಬೇರಿಗಳ ಹಣೆಬರಹವನ್ನು ಬರೆಯುವ “ರಿಸ್ಕ್” ಮಾತ್ರ ತೆಗೆದುಕೊಳ್ಳುವುದಿಲ್ಲ. ಯಾವುದೇ ಕಾರಣಕ್ಕೂ ಅಂಥೊಂದು ಅಪಾಯಕಾರಿ ಹೆಜ್ಜೆಯನ್ನು ಮಾತ್ರ ದೇವರು ಇಡುವುದಿಲ್ಲ. ಆಲಸಿಗಳ ಹಣೆಬರಹವನ್ನು ಬರೆಯುವ “ರಿಸ್ಕ್”ನ್ನು ದೇವರೇಕೆ ತೆಗೆದುಕೊಂಡಾನು? ದೇವರೇನು ದಡ್ಡನೆ?!! ಆಲಸಿಗಳು ಮತ್ತು ಸೋಮಾರಿ, ಸೋಂಬೇರಿಗಳು ತಮ್ಮ ಹಣೆಬರಹವನ್ನು ತಾವೇ ಖುದ್ದಾಗಿ ಬರೆದುಕೊಳ್ಳುತ್ತಾರೆ. ಅವರ ಹಣೆಬರಹದ ವಿಷಯದಲ್ಲಿ ದೇವರು “ಹಸ್ತಕ್ಷೇಪ” ಮಾಡುವುದಿಲ್ಲ. ಗುರು, ಸದ್ಗುರುಗಳು ಮತ್ತು ಅದೆಂಥವರೇ ಶಿಫಾರಸು ಮಾಡಿದರೂ ಕೂಡ ಆಲಸಿಗಳ ಹಣೆಬರಹವನ್ನು ತಿದ್ದುವ, ತೀಡುವ ಉಸಾಬರಿಗೆ ದೇವರು ಬರುವುದೇ ಇಲ್ಲ. ತಮ್ಮ ಹಣೆಬರಹವನ್ನು ಬರೆದುಕೊಳ್ಳುವ ವಿಷಯದಲ್ಲಿ ಆಲಸಿಗಳು ಸರ್ವತಂತ್ರ, ಸ್ವತಂತ್ರರು!! ಡಾ. ಶಿವಾನಂದ ಶಿವಾಚಾರ್ಯರು ಹಿರೇಮಠ, ತಪೋವನ, ತುಮಕೂರು