Posts

Image
Good Evening, Happy Sunday 11th September 2022 @ TapOvanam, Hiremath, Tumkur ಶಿಕ್ಷಕರು ಪಡೆಯುವುದು ವೇತನವಲ್ಲ; ಅದು ಸಂಬಳವಲ್ಲ ಅದು ಗುರುದಕ್ಷಿಣೆ; ಅದು ಗೌರವಧನ. ಡಾ. ಶಿವಾನಂದ ಶಿವಾಚಾರ್ಯರು ತುಮಕೂರು 11: “ಶಿಕ್ಷಕರು ಅಕ್ಷರಲೋಕದ ಒಡನಾಡಿಗಳು. ಅಕ್ಷರವೇ ಅವರ ಪರಮಾರ್ಥ ಮತ್ತು ಅಕ್ಷರವೇ ಅವರ ಪುರುಷಾರ್ಥ. ಅಕ್ಷರವೇ ಅವರ ಧರ್ಮ, ಅರ್ಥ, ಕಾಮ, ಮೋಕ್ಷ. ಶಿಕ್ಷಕರು ಮಕ್ಕಳ ಬಾಳಲ್ಲಿ ಬೆಳಕನ್ನು ತುಂಬುವ ಬೆಳದಿಂಗಳು. ಶಿಕ್ಷಕರು ಉದ್ಯೋಗಿಗಳಲ್ಲ. ಅವರು ಯೋಗಿಗಳು. ಅವರದು ಅಕ್ಷರಯೋಗ ಮತ್ತು ಅವರದು ಅಕ್ಷರತಪಸ್ಸು. ಶಿಕ್ಷಕರು ಅಕ್ಷರದೇವರು. ಅಷ್ಟು ಮಾತ್ರವಲ್ಲ, ಶಿಕ್ಷಕರಿಗೆ ಅಕ್ಷರವೇ ದೈವ. ಮಕ್ಕಳಿಗೆ ಶಿಕ್ಷಕರು ಸಾಕ್ಷಾತ್ ದೇವರು. ಮಕ್ಕಳಿಗೆ ಶಿಕ್ಷಕರು ಗುರುರ್ಬ್ರಹ್ಮ, ಗುರುರ್ವಿಷ್ಣುಃ, ಗುರುರ್ದೇವೋ ಮಹೇಶ್ವರಃ. ಶಿಕ್ಷಕರು ಪಡೆಯುವುದು ಸಂಬಳವಲ್ಲ. ಅದು ವೇತನವಲ್ಲ. ಅದು ಸ್ಯಾಲರಿಯಲ್ಲ. ಅದು ಪೇಮೆಂಟ್ ಅಲ್ಲ. ಅದು ಗೌರವಧನ. ಅದು ಗೌರವಸಂಭಾವನೆ. ಅದು ಗುರುದಕ್ಷಿಣೆ. ಅನುದಾನಸಹಿತ ಶಾಲೆಗಳಲ್ಲಿ ಸರಕಾರ ಶಿಕ್ಷಕರಿಗೆ ಗುರುದಕ್ಷಿಣೆಯನ್ನು ಕೊಟ್ಟರೆ ಅನುದಾನರಹಿತ ಶಾಲೆಗಳಲ್ಲಿ ಸಂಸ್ಥೆಗಳು ಶಿಕ್ಷಕರಿಗೆ ಗುರುದಕ್ಷಿಣೆಯನ್ನು ಕೊಡುತ್ತವೆ...
Image
  Good Morning, Happy Saturday 10th September 2022 @ TapOvnam, Hiremath, Tumkur ಜನಾಭಿಪ್ರಾಯಕ್ಕೆ ದೊಡ್ಡ ಶಕ್ತಿ ಇದೆ. ಜನಾಭಿಪ್ರಾಯದ ತಾಕತ್ತು ಬಲು ದೊಡ್ಡದು. ಜನಾಭಿಪ್ರಾಯವು ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸಲೂ ಬಲ್ಲುದು. ಮತ್ತದೇ ಜನಾಭಿಪ್ರಾಯವು ವ್ಯಕ್ತಿಯ ವ್ಯಕ್ತಿತ್ವವನ್ನು ಕುರೂಪಿಸಲೂ ಬಲ್ಲುದು. ಜನಾಭಿಪ್ರಾಯ ಅಥವಾ ಪ್ರಜಾಮತ ಓರ್ವ ವ್ಯಕ್ತಿಯನ್ನು ಹಾಲಿಯಾಗಿಸಿ ಚಲಾವಣೆಯಲ್ಲಿ ಇರಿಸಬಲ್ಲುದು. ಅದೇ ಜನಾಭಿಪ್ರಾಯ ಓರ್ವ ವ್ಯಕ್ತಿಯನ್ನು ಮಾಜಿಯಾಗಿಸಿಬಿಟ್ಟು ಮನೆಯಲ್ಲಿ ಕುಳ್ಳಿರಿಸಬಲ್ಲುದು. ಜನಾಭಿಪ್ರಾಯ ಓರ್ವ ವ್ಯಕ್ತಿಯನ್ನು ಶಾಸಕ, ಎಮ್ ಎಲ್. ಎ.  (M L A)  ಸಂಸದ, ಎಮ್. ಪಿ. ( M P)  ರಾಜ್ಯಸಭಾಸದಸ್ಯ, ಎಮ್. ಎಲ್ ಸಿ. (M L C)  ಮತ್ತಿನ್ನೇನೋ ಆಗಿಸಬಲ್ಲುದು. ಅದೇ ಜನಾಭಿಪ್ರಾಯ ಆತನನ್ನು ಮಾಜಿ ಶಾಸಕ, ಮಾಜಿ ಸಂಸದ,  ಮಾಜಿ ರಾಜ್ಯಸಭಾಸದಸ್ಯ, ಮಾಜಿ ಎಮ್. ಎಲ್. ಸಿ.  ಮಾಜಿ ಮಂತ್ರಿ, ಮುಖ್ಯಮಂತ್ರಿ ಆಗಿಸಬಲ್ಲುದು. ಜನಾಭಿಪ್ರಾಯಕ್ಕೆ ಎತ್ತನ್ನು ಕತ್ತೆಯಾಗಿಸುವ  ಮತ್ತು ಕತ್ತೆಯನ್ನು ಎತ್ತಾಗಿಸುವ ಶಕ್ತಿ ಇದೆ.   ಜನಾಭಿಪ್ರಾಯವಿದು ಇದು ತುಂಬ ವಿಚಿತ್ರ.  ಇದೊಂದು ತೆರನಾಗಿ ``ಮರ್ಜಿ ಕಾ ಮಾಲಿಕ್''.   ಅದೊಂದು ವೇಳೆ,  ತುಂಬ ಜನ ಎತ್ತನ್ನು ಕತ್ತೆ ಎನ್ನತೊಡಗಿದರೆ  ಎತ್ತು ಎತ್ತಾಗಿದ್ದರೂ ಮತ್ತುಅದು ನಿಯತ್ತಾಗಿದ್ದರೂ  ...
Image
  Good Morning, Happy Saturday 10th September 2022 @ TapOvanam, Hiremath, Tumkur ಸುಂದೋಪಸುಂದರನ್ನು ಸಾಯಿಸಲು ಬೇರಾರೂ ಬೇಕಿಲ್ಲ. ಸುಂದೋಪಸುಂದರನ್ನು ಸಾಯಿಸಲು ಸುಂದೋಪಸುಂದರೇ ಸಾಕು. ಮನುಷ್ಯನನ್ನು ಸಾಯಿಸಲು, ಮನುಷ್ಯ ಕಟ್ಟಿದ ನಾಡು, ನಗರ, ನಾಗರಿಕತೆಯನ್ನು ಇಲ್ಲ, ಇನ್ನಿಲ್ಲವಾಗಿಸಲು ಬೇರಾರೂ ಬೇಕಿಲ್ಲ. ಮನುಷ್ಯನ ಅಧ್ವಾನ, ಅತಿರೇಕ, ಎಡವಟ್ಟು, ದುರಾಸೆ, ದುರಹಂಕಾರ, ಅತಿರೇಕದ ಆತ್ಮವಿಶ್ವಾಸ ಇವಷ್ಟೇ ಸಾಕು. ಡಾ. ಶಿವಾನಂದ ಶಿವಾಚಾರ್ಯರು ಹಿರೇಮಠ, ತುಮಕೂರು
Image
  Good Morning, Happy Friday 9th September 2022 @ TapOvanam, Hiremath, Tumkur ಆಹಾರನಿದ್ರಾಭಯಮೈಥುನಂ ಚ ಸಾಮಾನ್ಯಮೇತತ್ಪಶುಭಿರ್ನರಾಣಾಮ್ | ಜ್ಞಾನಂ ಹಿ ತೇಷಾಮಧಿಕೋ ವಿಶೇಷೋ ಜ್ಞಾನೇನ ಹೀನಾಃ ಪಶುಭಿಃ ಸಮಾನಾಃ || ಆಹಾರ, ನಿದ್ರಾ, ಭಯ, ಮೈಥುನಾದಿಗಳು ಪಶುಗಳಲ್ಲಿ ಮತ್ತು ಮನುಷ್ಯರಲ್ಲಿ ಸಮಸಮಾನ. ಜ್ಞಾನವೊಂದಕ್ಕೆ ಮಾತ್ರ ಪಶುಗಳನ್ನು ಮತ್ತು ಮನುಷ್ಯರನ್ನು ವಿಭಜಿಸುವ ಶಕ್ತಿ ಇದೆ. ಜ್ಞಾನಕಾರಣದಿಂದಾಗಿ ಮನುಷ್ಯ ಮನುಷ್ಯನೆನಿಸುತ್ತಾನೆ. ಜ್ಞಾನವಿಲ್ಲದ ಕಾರಣದಿಂದಾಗಿ ಪಶು ಪಶುವೆನಿಸುತ್ತದೆ. ಪಶುಗಳನ್ನು ಮತ್ತು ಮನುಷ್ಯರನ್ನು ಬೇರ್ಪಡಿಸುವ ಶಕ್ತಿ ಜ್ಞಾನಕ್ಕಿದೆ. ಜ್ಞಾನವಿಲ್ಲದೆ ಹೋದರೆ ಮನುಷ್ಯ ಮತ್ತು ಪಶುಗಳಲ್ಲಿ ಏನು ವ್ಯತ್ಯಾಸವಿದೆ? ಆಹಾರನಿದ್ರಾಭಯಮೈಥುನಂ - ಇವೆಲ್ಲ ಪಶುಗಳಲ್ಲಿ ಮತ್ತು ಮನುಷ್ಯರಲ್ಲಿ ಕಾಮನ್. ಹೊಟ್ಟೆ ಹಸಿದಾಗ ಪಶುಗಳು ಕೂಡ ಆಹಾರವನ್ನು  ಅರಸಿಕೊಂಡು ಹೋಗುತ್ತವೆ.  ಮನುಷ್ಯ ಕೂಡ ಹಾಗೇನೇ. ನಿದ್ರೆ ಬಂದಾಗ ಪಶುಗಳು ಎಲ್ಲೆಂದರೆಲ್ಲಿ ಮಲಗಿಬಿಡುತ್ತವೆ. ಮನುಷ್ಯ ಕೂಡ ಹಾಗೇನೇ. ಪಶುಗಳಿಗೂ ಭಯವಿದೆ. ಪಶುಗಳು ತಮ್ಮಕ್ಕಿಂತಲೂ  ಬಲಿಷ್ಠ ಪಶುಗಳನ್ನು ಕಂಡಾಗ ಓಡಿಹೋಗುತ್ತವೆ. ಮನುಷ್ಯ ಕೂಡ ಹಾಗೇನೇ. ತನ್ನಕ್ಕಿಂತಲೂ ಬಲಿಷ್ಠರು ಕಂಡಾಗ “ಜೀ ಹುಜೂರ್” ಎನ್ನುತ್ತಾನೆ, ತಲೆ ಬಾಗುತ್ತಾನೆ. ಕೈ ಮುಗಿಯುತ್ತಾನೆ. ಪಶುಗಳು ಕೂಡ ಮೈಥುನ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುತ್ತವೆ. ಮನುಷ್ಯ ಕೂಡ ಹಾಗೇನೇ...
Image
  Good Evening, Happy Thursday 8th September 2022 @ TapOvanam, Hiremath, Tumkur ಜನಗಳೇ ಹಾಗೆ ಮತ್ತು ಜನಗಳ ಮನಸ್ಸು, ಮನಸ್ಥಿತಿಯೇ ಹಾಗೆ....!! ಅನುಕೂಲವಾಗಿದ್ದರೆ ಮತ್ತು ಅನುಕೂಲವಾಗಿ ಇರುವವರೆಗೆ “ಇವ ನಮ್ಮವ, ಇವ ನಮ್ಮವ”..!! ಪ್ರತಿಕೂಲವಾದರೆ, ಒಂದಷ್ಟು ಅನಾನುಕೂಲವಾದರೆ ತಕ್ಷಣ “ಇವನಾರವ? ಇವನಾರವ?”.... ನಿನ್ನೆ, ಮೊನ್ನೆಯವರೆಗೆ ಎಲ್ಲರಿಗೂ “ಡಾರ್ಲಿಂಗ್ ಸಿಟಿ”, ಗಾರ್ಡನ್ ಸಿಟಿಯಾಗಿದ್ದ ಬೆಂಗಳೂರು ಒಂದಷ್ಟು ಜೋರಾದ ಮತ್ತು ಅಸಹಜದ ಮಳೆಗೆ ತತ್ತರಿಸಿದ ತಕ್ಷಣ ಯಾರಿಗೂ ಬೇಡವಾಗಿದೆ. ಅವರಿವರೆನ್ನದೆ ಎಲ್ಲರೂ ಬೆಂಗಳೂರನ್ನು ಹಿಗ್ಗಾಮುಗ್ಗಾ ಬಯ್ಯೋದಕ್ಕೆ ಶುರುಹಚ್ಚಿಕೊಂಡಿದ್ದಾರೆ. ಬೆಂಗಳೂರಿಗೆ ಎಲ್ಲೆಲ್ಲಿಂದಲೋ ``ವಲಸೆ'' ಬಂದು ಬದುಕನ್ನು ಕಟ್ಟಿಕೊಂಡವರು ಕೂಡ ಬೆಂಗಳೂರನ್ನು ಬಯ್ಯುತ್ತಿದ್ದಾರೆ. ಬೆಂಗಳೂರನ್ನು ಈಗ ಕರ್ನಾಟಕದ ರಾಜಧಾನಿ ಎಂದು ಹೇಳುವುದಕ್ಕಿಂತ ಅದನ್ನು ಈಗ ``ವಲಸಿಗರ ರಾಜಧಾನಿ'' ಎಂದು ಹೇಳಬೇಕಾಗಿ ಬಂದಿದೆ. ವಿಪರೀತದ ಮಳೆ ಬಂದರೆ, ಬೆಂಗಳೂರು ತಾನು ಕನಸಲ್ಲೂ ಕಾಣದಷ್ಟು ಮಳೆ ದಿಢೀರನೇ ಸುರಿದರೆ ಪಾಪ, ಬೆಂಗಳೂರೇನು ಮಾಡಬೇಕು? ಅದು ಮಳೆಯ ಹತ್ತಿರ ಹೋಗಿಬಿಟ್ಟು, “ಹೇ ನಾನು, ಬೆಂಗಳೂರು. ನನ್ನ ಮೇಲೆ ಜೋರಾಗಿ ಸುರಿಯಬೇಡ” ಎಂದು ಹೇಳುವುದಕ್ಕೆ ಆಗುತ್ತದೆಯಾ? ಅದೊಂದು ವೇಳೆ ಹೇಳಿತು ಎಂದು ಇಟ್ಟುಕೊಳ್ಳಿ. ಮಳೆ ಏನು ಕೇಳುತ್ತದೆಯಾ? ಈ ಪರಿಯಾದ ಹುಯ್ಯೋ ಹುಯ್ಯೋ ಮಳೆಗೆ, ಅಯ್ಯೋ ಅಯ್ಯ...