Posts

Image
  ಇವತ್ತು 28. 02. 2025 ಹಿರೇಮಠದಲ್ಲಿ ಶಿವರಾತ್ರಿ ಅಮಾವಾಸ್ಯಾ ಪೂಜೆ ಇದೆ. ಬೆಳಿಗ್ಗೆ 07. 00ಕ್ಕೆ ಶುರು 10.30ಕ್ಕೆ ಧರ್ಮಸಭೆ 
Image
  Good Morning, Happy Monday 2nd October 2023 @ TapOvanam, Hiremath, Tumkur ಮಹಾತ್ಮರ ಬದುಕು, ಬಾಳುವೆಯೇ ಹಾಗೆ. ಅವರು ಅದೆಷ್ಟೋ ಜನಗಳ ಬದುಕಿಗೆ ಅನ್ನ, ನೀರು ಗಂಜಿ. ಅವರು ಬದುಕಿರುವಾಗಲೇನೋ ಸರಿಯೇ ಸರಿ. ಆದರೆ ಅವರು ಇಲ್ಲ-ಇನ್ನಿಲ್ಲವಾದ ಮೇಲೆಯೂ ಅದೆಷ್ಟೋ ಜನರಿಗೆ ಅವರು ಅನ್ನ, ನೀರು, ಗಂಜಿಯಾಗಿ ಬದುಕು ಕೊಟ್ಟುಕೊಂಡಿರುತ್ತಾರೆ. ಗಾಂಧೀಜಿ ಕೂಡ ಈ ಮಾತಿಗೆ ಹೊರತಲ್ಲ!! ಡಾ. ಶಿವಾನಂದ ಶಿವಾಚಾರ್ಯರು ಹಿರೇಮಠ, ತಪೋವನ, ತುಮಕೂರು
Image
  Good Morning, Happy Monday 2nd October 2023 @ TapOvanam, Hiremath, Tumkur ಸೆಪ್ಟೆಂಬರ್ ಮಾಹೆಯಲ್ಲಿ ಗೌರೀ ಗಣೇಶಜಿ. ಅಕ್ಟೋಬರ್ ಮಾಹೆಯಲ್ಲಿ ಗಾಂಧೀಜಿ, ಶಾಸ್ತ್ರೀಜಿ. ಈ ವರುಷದ ಸೆಪ್ಟೆಂಬರ್ ತಿಂಗಳಿನಲ್ಲಿ ಗೌರೀ ಗಣೇಶ ಹಬ್ಬ ಅಕ್ಟೋಬರ್ ತಿಂಗಳಿನಲ್ಲಿ ಗಾಂಧೀಜಿ, ಶಾಸ್ತ್ರೀಜಿ ಜಯಂತಿ, ಹುಟ್ಟುಹಬ್ಬ. ಗೌರೀ, ಗಣೇಶ ಹಬ್ಬ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ. ಗಾಂಧೀಜಿ, ಶಾಸ್ತ್ರೀಜಿ ಜಯಂತಿ ಸಾರ್ವಜನಿಕ ಹಾಗೂ ದೇಶಭಕ್ತಿ ಪ್ರೇರಕ. ಗಣೇಶ ವಿನಾಯಕ, ಗಣನಾಯಕ, ಗಾಂಧೀಜಿ, ಶಾಸ್ತ್ರೀಜಿ ನಾಯಕರು, ರಾಷ್ಟ್ರನಾಯಕರು. ಗಣೇಶ ವಿಘ್ನನಾಶಕ, ವಿಘ್ನವಿನಾಶಕ ಮತ್ತು ಮುಕ್ತಿದಾಯಕ. ಗಾಂಧೀಜಿ, ಶಾಸ್ತ್ರೀಜಿ ದಾಸ್ಯನಾಶಕರು ಮತ್ತು ಸ್ವಾತಂತ್ರ್ಯದಾಯಕರು. ಗೌರೀ, ಗಣೇಶರ ಆಗಮನದಿಂದ ಲೋಕೋದ್ಧಾರ. ಗಾಂಧೀಜಿ, ಶಾಸ್ತ್ರೀಜಿಯವರ ಆಗಮನದಿಂದ ದೇಶೋದ್ಧಾರ. ಗೌರೀ ಗಣೇಶರು ಕೈಲಾಸದಿಂದ ಭೂಮಿಗೆ ಬಂದವರು. ಗಾಂಧೀಜಿ, ಶಾಸ್ತ್ರೀಜಿಗಳು ತ್ಯಾಗ, ಬಲಿದಾನಗಳಿಂದ ಭೂಮಿಯಿಂದ ಕೈಲಾಸದೆತ್ತರಕ್ಕೆ ಬೆಳೆದವರು. ಗೌರೀ ಗಣೇಶ ಭಕ್ತವತ್ಸಲರು. ಗಾಂಧೀಜಿ, ಶಾಸ್ತ್ರೀಜಿ ದೇಶವತ್ಸಲರು. ಗೌರೀ ಗಣೇಶರದು ಅಮ್ಮ, ಮಗನ ಸಂಬಂಧ. ಗಾಂಧೀಜಿ, ಶಾಸ್ತ್ರೀಜಿಗಳದು ತತ್ತ್ವ, ಸಿದ್ಧಾಂತದ ಸಂಬಂಧ. ಗೌರೀ ಗಣೇಶರು ಜನಗಳಿಗೆ ಭಕ್ತಿಯ ಪಾಠಮಾಡುತ್ತಾರೆ. ಗಾಂಧೀಜಿ, ಶಾಸ್ತ್ರೀಜಿ ಜನಗಳಿಗೆ ದೇಶಭಕ್ತಿಯ ಪಾಠಮಾಡುತ್ತಾರೆ. ಗೌರೀ, ಗಣೇಶರ ಹಬ್ಬದಿಂದ ಜನಗಳ ಮೈ, ಮನಸ್ಸುಗಳಲ್ಲಿ ಪುಳಕ ಗಾ...

21st September 2023

Image
 On 21st September 2023 @ TapOvanam, Hiremath, Tumkur  >>>>>>>>>>>>>>>>>>>>>>>>>> ಶ್ರೀ ಶಿವಾನಂದ ಮರಿಗುದ್ದಿಯವರ ನಿಧನಕ್ಕೆ ತುಮಕೂರು ಹಿರೇಮಠದ ಶ್ರೀ ಶ್ರೀಗಳವರ  ಭಾವಪೂರ್ಣ ಶ್ರದ್ಧಾಂಜಲಿ >>>>>>>>>>>>>>>>>>>>>>>>>>   “ದೇವರಾಗಿದ್ದರೆ ನಾವು ಎಲ್ಲವನ್ನೂ  ಸರಿ ಮಾಡುತ್ತೇವೆ” ಎಂದು ನಾವುಗಳು  ಅಂದುಕೊಳ್ಳುತ್ತೇವೆ.   ಆದರೆ ಆ ದೇವರಾದವನು ಕೂಡ  ಎಲ್ಲವನ್ನೂ ಸರಿಮಾಡುವುದಿಲ್ಲ  ಮತ್ತು ಆತ ಮಾಡುವುದೆಲ್ಲವೂ  ಸರಿ ಇರುವುದಿಲ್ಲ ಎಂಬ ವಿಚಾರವಿದು  ಎಲ್ಲರಿಗೂ ಗೊತ್ತಿರುವ ವಿಷಯ.  ದೇವರು ಒಮ್ಮೊಮ್ಮೆ ತುಂಬ  ನಿರ್ದಯವಾಗಿ ನಡೆದುಕೊಳ್ಳುತ್ತಾನೆ.  ಆತ ತುಂಬ ಅನ್ಯಾಯ ಮಾಡುತ್ತಾನೆ.  ಆತ ತನಗಿರುವ ಕರ್ತುಂ, ಅಕರ್ತುಂ  ಮತ್ತು ಅನ್ಯಥಾ ಕರ್ತುಂ ಶಕ್ತಿ, ಸಾಮರ್ಥ್ಯದ ದುರುಪಯೋಗಮಾಡಿಕೊಳ್ಳುತ್ತಾನೆ.  ದೇವರಾದ ಮಾತ್ರಕ್ಕೆ ಏನೆಲ್ಲ ಮಾಡಿದರೂ  ನಡೆಯುತ್ತದೆ ಎಂದು ತಿಳಿದುಕೊಂಡಿದ್ದರೆ  ಅದು ಖಂಡಿತ ತಪ್ಪು.  ದೇವರು ತನಗೆ ತಿಳಿದ ಹಾಗೆಲ್ಲ  ಮಾಡುವುದಕ್ಕೆ ದೇವರಾಗಿಲ್ಲವೆಂದು  ತಿಳಿದುಕೊಂಡರೆ ಸರಿ...

18th September 2023

Image
 Good Evening, Happy Monday 18th Septemeber 2023 @ Hiremath, TapOvanam, Tumkur     ತುಮಕೂರು ಮಹಾನಗರದ  ಶ್ರೀ ಸಿದ್ಧಿವಿನಾಯಕ ಸೇವಾ ಸಮಿತಿಯ 47ನೇ ವರುಷದ ಶ್ರೀ ಸಿದ್ಧಿವಿನಾಯಕ ದೃಶ್ಯಾವಳಿ  ಮತ್ತು ಸಾಂಸ್ಕೃತಿಕ ಉತ್ಸವದ  ಉದ್ಘಾಟನಾ ಸಮಾರಂಭದಲ್ಲಿ ಹೇಳಿದ್ದು - >>>>>>>>>>>>>>>>>>>>>>    ಅಧಿಕಾರವಿದ್ದಾಗ  ಯಾರೂ ಸಹ ನಮ್ಮ ವಕ್ರಗಳ ಬಗ್ಗೆ  ಮತ್ತು ನಖರಾಗಳ ಬಗ್ಗೆ ಮಾತನಾಡುವುದಿಲ್ಲ. ನಮ್ಮಲ್ಲಿ ಅಧಿಕಾರವಿದ್ದರೆ  ಎಲ್ಲರೂ ಬಾಯಿ ಮುಚ್ಚಿಕೊಂಡು  ತೆಪ್ಪಗಿರುತ್ತಾರೆ.   ಅಧಿಕಾರವಿದ್ದರೆ ನಮ್ಮಲ್ಲಿ ಏನೇ ವಕ್ರಗಳಿರಲಿ,  ಒರಟುತನಗಳಿರಲಿ  ಎಲ್ಲರೂ ನಮ್ಮನ್ನು ಸಹಿಸಿಕೊಳ್ಳುತ್ತಾರೆ.    ಅದೇ ಅಧಿಕಾರವಿಲ್ಲದೆ ಹೋದರೆ  ಕಡ್ಡಿಯನ್ನು ಕೂಡ ಗುಡ್ಡ ಮಾಡುತ್ತಾರೆ.   ಅಧಿಕಾರವಿಲ್ಲದೆ ಹೋದರೆ  “ಆಳಿಗೊಂದು ಕಲ್ಲು” ಎನ್ನುವ ಹಾಗೆ  ಎಲ್ಲರೂ ಕಲ್ಲು ಹಿಡಿದುಕೊಂಡು  ಮೈ ಮೇಲೆ ಏರಿ ಬರುತ್ತಾರೆ.    ಅದಕ್ಕಾಗಿಯೇ ತಾಯಿ ಪಾರ್ವತಿ  ತನ್ನ ಮಗ ಗಣೇಶನ ವಕ್ರಗಳ ಬಗ್ಗೆ  ಜನ ಆಡಿಕೊಳ್ಳಬಹುದು,  ಅಂದುಕೊಳ್ಳಬಹುದು ಎಂದು  ಪಟ್ಟು ಹಿಡಿದು ಆಕೆ ಮಗನ ಪರವಾಗಿ  ವಕಾಲತ್ತು ಮ...

18th September 2023

Image
 Good Morning, Happy Monday 18th September 2023 @ TapOvanam, Hiremath, Tumkur  Happy Gauri Ganesha Festival All the best to All.  ಗಣಪತಿಯ ಶ್ರೀ ಸನ್ನಿಧಾನಕ್ಕೆ  ನಮೋ ನಮಃ, ನಮಸ್ಕಾರ.  ಕೈಲಾಸದಿಂದ ಅಮ್ಮನ ಜೊತೆಗೆ  ಭೂಮಿಗೆ ಆಗಮಿಸಿದ ಗಣೇಶನಿಗೆ “ಆಲ್ ಈಜ್ ವೆಲ್” All is Well  ಅಂತಾ ಹೇಳ್ತಾ “ವೆಲ್‌ಕಮ್” Welcome ಮಾಡೋಣ.  ಗಣಪತಿ ಅಮ್ಮನ ಮಗ. ಗಣಪತಿ ಗೌರೀಸುತ. ಗಣಪತಿ ಶಿವನ ಕುಮಾರ - ಗಣಪತಿ ಶಿವಕುಮಾರ. ಗಣಪತಿ ಧೀಮಂತ. ಗಣಪತಿ ಬುದ್ಧಿವಂತ.     ಗಣಪತಿಗೆ ನಾವು ಏನನ್ನು ಕೇಳಿಕೊಳ್ಳಬೇಕು? ಗಣಪತಿಗೆ ನಾವು, ನೀವುಗಳು  “ಧಿಯೋ ನಃ ಪ್ರಚೋದಯಾತ್” -  ಎಂದು ಕೇಳಿಕೊಳ್ಳಬೇಕು.  ಗಣಪತಿಯಿಂದ ನಾವು  ಏನನ್ನು ಕಲಿತುಕೊಳ್ಳಬೇಕು? ಗಣಪತಿಯ ಹಾಗೆ ನಾವು, ನೀವುಗಳು  ನಮ್ಮ, ನಿಮ್ಮಗಳ  ಅಪ್ಪ, ಅಮ್ಮನ “ಡಾರ್ಲಿಂಗ್ ಸನ್”  Darling Son ಆಗಬೇಕು. ಗಣಪತಿಯು ನಾವು ತಂದೆ, ತಾಯಿಯನ್ನು  ಏನೆಂದು ಭಾವಿಸಬೇಕು ಎಂದು ನಮಗೆಲ್ಲ  ಪಾಠಮಾಡಿದ್ದಾನೆ? ತಂದೆ, ತಾಯಿ ಬರೀ  “ಸ್ವರ್ಗಾದಪಿ ಗರೀಯಸೀ” ಅಲ್ಲ; ಅವರು ಸರ್ವಸ್ವಾದಪಿ ಗರಿಷ್ಠರು!!!   ಅವರು ಎಲ್ಲಕ್ಕಿಂತಲೂ, ಎಲ್ಲರಿಗಿಂತಲೂ  ಮತ್ತು ಎಲ್ಲವುಗಳಿಗಿಂತಲೂ  ವರಿಷ್ಠರು ಮತ್ತು ಗರಿಷ್ಠರು. ಅವರು ಸದಾ ಆರಾಧ್ಯರು,  ಸದಾ...
Image
  Good Morning, Happy Sunday 17th September 2023 @ TapOvanam, Hiremath, Tumkur ಈ ಗೌರೀ ಗಣೇಶ ಹಬ್ಬದ ಸಂದರ್ಭದಲ್ಲಿ ನಾವು ನಿಮಗೆ ಹೇಳಲೇಬೇಕೆಂದಿರುವ ಕೆಲವು ಮಾತುಗಳಿವೆ ಅವುಗಳನ್ನು ನಾವು ನಿಮಗೆ ಹೇಳಲೇಬೇಕು. ಈ ಎಲ್ಲ ಮಾತುಗಳು ನಮ್ಮ, ನಿಮ್ಮಗಳ ದೈನಂದಿನ ಜೀವನಕ್ಕೆ ನೇರವಾಗಿ ಸಂಬಂಧಿಸಿವೆ. ನಾವು ಹೇಳುವ ಈ ಮಾತುಗಳು ನೇರವಾಗಿವೆ. ಆದ್ದರಿಂದ ಇವುಗಳಲ್ಲಿ ಒಂದಷ್ಟು “ಕಾರ” ಮತ್ತು “ಖಾರ” ಇವೆರಡರ ಪ್ರಮಾಣ ಹೆಚ್ಚು. ಸಾಮಾನ್ಯವಾಗಿ ನೇರವಾದ ಮಾತುಗಳು ಮತ್ತು ವಿಷಯಗಳು ಕಾರವಾಗಿರುತ್ತವೆ ಮತ್ತು ಖಾರವಾಗಿರುತ್ತವೆ. “ಕಾರ” ಎಂದರೆ ಸ್ವಲ್ಪ ಕಾರ; “ಖಾರ” ಎಂದರೆ ಹೆಚ್ಚು ಕಾರ - ಎಂದರ್ಥ. ಈ ಮಾತುಗಳು ಖಾರವಾಗಿದ್ದರೂ, ಕರ್ಣಮಧುರವಾಗಿಲ್ಲದೆ ಇದ್ದರೂ ನಿಮಗೆ ಹೇಳಲೇಬೇಕಾಗಿದೆ. ಮಾತುಗಳಿವು, ಅಧರಕ್ಕೆ ಕಹಿಯಾದರೂ ಉದರಕ್ಕೆ ಸಿಹಿ. ಈ ಮಾತುಗಳು ಕೇಳುವುದಕ್ಕೆ ಕರ್ಕಶ. ಪರಿಣಾಮದಲ್ಲಿ ಮಾತ್ರ ಒಳಿತಿನ ಸ್ಪರ್ಶವಿದೆ. ಈಗ ಮಾತುಗಳನ್ನು ಕೇಳಿಸಿಕೊಳ್ಳುವುದಕ್ಕೆ ಸಿದ್ಧರಾಗುವ ಮುನ್ನ ಇನ್ನೊಂದು ಮಾತು. ಇವತ್ತು ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನ ಮೊದಲು ಅವರಿಗೊಂದು ಶುಭಾಶಯ ಹೇಳುವಾ. ಇಂಥ ಪ್ರಧಾನಿಗಳ ಸಂತತಿ ಸಾವಿರವಾಗಲಿ ಎಂದು ಮನದುಂಬಿ ಹರಸುವಾ. ನಮ್ಮ ದೇಶಕ್ಕೆ ಫಕೀರ ಪ್ರಧಾನಿಗಳ ಅವಶ್ಯಕತೆ ಇದೆ. ಗಾಂಧೀಜಿ, ಲಾಲ್ ಬಹದ್ದೂರ್ ಶಾಸ್ತ್ರೀಜಿಗಳಂಥ ಮಹಾನುಭಾವರ ಒಂದೈವತ್ತು, ಅರವತ್ತು ವರುಷಗಳ ಆ ಹಿಂದಿನ ಕಾಲಘಟ್ಟದ...