Posts

Showing posts from September, 2022
Image
  Good Morning, Happy Tuesday 20th September 2022 @ TapOvanam, Hiremath, Tumkur “ಅರ್ಚಕಸ್ಯ ಪ್ರಭಾವೇಣ ಶಿಲಾ ಭವತಿ ಶಂಕರಃ” ಇದೇನೋ ಸರಿ. ಇದು ಅರ್ಚಕರ ಹೆಗ್ಗಳಿಕೆಯ ಮಾತಾಯಿತು. ಹಾಗಾದರೆ “ಶಿವನಿಂದ, ಶಂಕರನಿಂದ ಏನಾಗುತ್ತದೆ?” - ಎಂಬುವುದನ್ನು ಕೂಡ ತಿಳಿದುಕೊಳ್ಳಬೇಕಲ್ಲವೆ? “ಶಂಕರಸ್ಯ ಪ್ರಭಾವೇಣ ಅರ್ಚಕಸ್ಯ ಜೀವನಂ ಭವತಿ ಸುಂದರಮ್” ಶಂಕರನ ಪ್ರಭಾವದಿಂದ ಅರ್ಚಕನ ಬದುಕು ಸುಂದರವಾಗುತ್ತದೆ. ಬರೀ “ಸುಂದರಮ್” ಅಷ್ಟೇ ಅಲ್ಲ, “ಶಂಕರಸ್ಯ ಪ್ರಭಾವೇಣ ಅರ್ಚಕಸ್ಯ ಭವತಿ ಜೀವನಂ ಗೌರವಾರ್ಹಂ, ಅಭಿನಂದನಾರ್ಹಂ, ಪೂಜಾರ್ಹಂ, ಸಾತ್ತ್ವಿಕಮ್, ಸಂಪದ್ಭರಿತಂ ಮತ್ತು ವಿಪದ್‌ರಹಿತಮ್” ಅರ್ಚಕರು ದೇವರಿಗಾಗಿ ಒಂದಷ್ಟು ಮಾಡಿದರೆ ದೇವರು ಅವರಿಗಾಗಿ ಬಹಳಷ್ಟನ್ನು ಮಾಡುತ್ತಾನೆ. ಅರ್ಚಕರು ಒಂದು ಕೈನಿಂದ ದೇವರ ಪೂಜೆ ಮಾಡಿದರೆ ಆತ ಎರಡು ಕೈಗಳಿಂದ ಅರ್ಚಕರನ್ನು ಅಪ್ಪಿಕೊಳ್ಳುತ್ತಾನೆ. ಅರ್ಚಕರು ಎರಡು ಕೈನಿಂದ ಪೂಜೆ ಮಾಡಿದರೆ ದೇವರು ನಾಲ್ಕು ಕೈಗಳಿಂದ ಅವರ ಬದುಕನ್ನು ಅಚ್ಚುಕಟ್ಟುಗೊಳಿಸುತ್ತಾನೆ. ಅರ್ಚಕರು ಬಹಿರಂಗಶುದ್ಧಿಗೆ ಆದ್ಯತೆಯನ್ನು ಕೊಟ್ಟುಕೊಂಡು ಪೂಜೆಮಾಡಿದರೆ ದೇವರು ಅರ್ಚಕರ ಬಹಿರಂಗವನ್ನು ಬೆಳಗುತ್ತಾನೆ. ಅರ್ಚಕರು ಅಂತರಂಗಶುದ್ಧಿಗೆ ಆದ್ಯತೆಯನ್ನು ಕೊಟ್ಟುಕೊಂಡು ಪೂಜೆಮಾಡಿದರೆ ದೇವರು ಅವರ ಅಂತರಂಗ ಮತ್ತು ಬಹಿರಂಗಗಳೆರಡನ್ನೂ ಬೆಳಗುತ್ತಾನೆ. ಅರ್ಚಕರು ಕಾಟಾಚಾರಕ್ಕೆ ಪೂಜೆಮಾಡಿದರೆ ಅದಕ್ಕೆ ಫಲವಿಲ್ಲ. ಅರ್ಚಕರು ಲೆಕ್ಕಾಚಾರ...
Image
 
Image
  ನಿಖರತೆ, ಪ್ರಖರತೆಗಳ ಕೂಡಲಸಂಗಮ ಪ್ರಧಾನಿ ನರೇಂದ್ರ ಮೋದಿ ನರೇಂದ್ರ ಮೋದಿ, ಬರೀ ಇದೊಂದು ಹೆಸರಲ್ಲ. ಇದು ಬಹುಜನಗಳ ಉಸಿರು.  ನರೇಂದ್ರ ಮೋದಿ ಎಂಬ ಈ ಹೆಸರು ಈಗ ಬಹುಜನಗಳ ಬ್ರಹ್ಮಬಲ, ಅಹೋಬಲ ಮತ್ತು ಮಹಾಬಲ. ನರೇಂದ್ರ ಮೋದಿ ಎಂಬ ಹೆಸರು, ಈಗ ವಿಶ್ವದಾದ್ಯಂತ ಚಿರಪರಿಚಿತ. ನರೇಂದ್ರ ಮೋದಿ ಹೆಸರು ಈಗ ಜಗದಗಲ, ಮುಗಿಲಗಲ, ಮಿಗೆಯಗಲ. ನರೇಂದ್ರ ಮೋದಿಯವರ ಹೆಸರು ಕೇಳುತ್ತಲೇ  ಬರೀ ಜನಗಳ ಕಣ್ಣುಗಳು ಮತ್ತು ಕಿವಿಗಳು ಮಾತ್ರವಲ್ಲ, ಇಡೀ ಜಗತ್ತಿನ ಕಣ್ಣುಗಳು, ಕಿವಿಗಳು ಚುರುಕಾಗುತ್ತವೆ. ನರೇಂದ್ರ ಮೋದಿ ಎಂದರೆ ಅದು ಬರೀ ಹೆಸರಲ್ಲ;  ನರೇಂದ್ರ ಮೋದಿ ಎಂದರೆ ಅದೊಂದು ಸಂಚಲನ;  ಅದೊಂದು ಅದಮ್ಯ ಇಚ್ಛಾಶಕ್ತಿ;  ಅದೊಂದು ಅದ್ಭುತ ದೇಶಪ್ರೇಮ;  ಅದೊಂದು ಅಪರಿಮಿತ ರಾಷ್ಟ್ರಶಕ್ತಿ;  ಅದೊಂದು ಅಸ್ಖಲಿತ ಜೀವನಗಾಥೆ;  ಅದೊಂದು ಧೀಮಂತ ಜೀವನಯಾತ್ರೆ.  ನರೇಂದ್ರ ಮೋದಿ ಎಂದರೆ ಬರೀ ವ್ಯಕ್ತಿಯಲ್ಲ.  ನರೇಂದ್ರ ಮೋದಿ ಎಂದರೆ ಅದು ಕರ್ತವ್ಯನಿಷ್ಠೆ.  ನರೇಂದ್ರ ಮೋದಿ ಎಂದರೆ ಅದು ಬದ್ಧತೆ.  ನರೇಂದ್ರ ಮೋದಿ ಎಂದರೆ ಅದು ಪ್ರಬುದ್ಧತೆ.  ನರೇಂದ್ರ ಮೋದಿ ಎಂದರೆ ಅದು ನಿಖರತೆ.  ನರೇಂದ್ರ ಮೋದಿ ಎಂದರೆ ಪ್ರಖರತೆ.  ಹಾಗೆಂದು ಬರೀ ಹೇಳೋದಕ್ಕಲ್ಲ; ಅದು ಸಾಬೀತಾಗಿದೆ.  ಅವತ್ತು “ನರೇಂದ್ರ” ಎಂಬ ಹೆಸರಿಗೆ ವಿಶಿಷ್ಟ ತಾಕತ್ತಿದೆ  ಮತ್ತು ವಿಲಕ್ಷಣ ತಾಕತ್ತಿದೆ ...
Image
  ಅದೊಮ್ಮೆ ನಮ್ಮನ್ನು ಹಿತೈಷಿಗಳೊಬ್ಬರು ಪ್ರಶ್ನಿಸಿದರು, “ಮೋದಿಯವರು ಅಷ್ಟೊಂದು ಜನಪ್ರಿಯರಾಗಲು ಏನು ಕಾರಣ?” ಎಂದು. ನಾವು ಅವರಿಗೆ ಹೇಳಿದ್ದು “ಮೋದಿಯವರು ದೇಶಕ್ಕಾಗಿ ಮಾತನಾಡುತ್ತಾರೆ ಮತ್ತು ಅವರು ದೇಶವಾಗಿ ಮಾತನಾಡುತ್ತಾರೆ” ಆ ತಕ್ಷಣ, “ಬೇರೆಯವರಿಗೆ ಮತ್ತು ಬಹುತೇಕರಿಗೆ  ಮೋದಿಯವರಷ್ಟು ಜನಪ್ರಿಯರಾಗುವುದಕ್ಕೆ ಏಕೆ ಸಾಧ್ಯವಾಗುತ್ತಿಲ್ಲ?” ಎಂಬ ಪ್ರಶ್ನೆ ಎದುರಾಯಿತು.  ಅದಕ್ಕೆ ನಮ್ಮ ಉತ್ತರ. “ಬಹುತೇಕರು ದ್ವೇಷಕ್ಕಾಗಿ ಮಾತನಾಡುತ್ತಾರೆ ಮತ್ತು ದ್ವೇಷವಾಗಿ ಮಾತನಾಡುತ್ತಾರೆ”  ಮಾತನಾಡುವ ಶೈಲಿಯನ್ನು ಬದಲಾಯಿಸಿಕೊಂಡರೆ ಅವರೂ ಕೂಡ ಮೋದಿಯವರಷ್ಟೇ ಜನಪ್ರಿಯರಾಗುತ್ತಾರೆ.  ಮೋದಿಯವರದು ಮನ್ ಕೀ ಬಾತ್ -  ಆದ್ದರಿಂದ ಅವರು ಜನಪ್ರಿಯರು. ಬಹುತೇಕರದು, ಪ್ರೆಸ್ ಮೀಟ್ ಕೀ ಬಾತ್ -  ಇದು ಕಾರಣ, ಅವರಿಗೆ ಆ ಪ್ರಮಾಣದ ಜನಪ್ರಿಯತೆಯನ್ನು  ದಾಖಲಿಸಲಿಕ್ಕೆ ಆಗುತ್ತಿಲ್ಲ.  ಡಾ. ಶಿವಾನಂದ ಶಿವಾಚಾರ್ಯರು ಹಿರೇಮಠ, ತುಮಕೂರು
Image
  Good Morning, Happy Saturday 17th September 2022 @ TapOvanam, Hiremath, Tumkur ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಇದು ಮೋದಿಯವರ 72ನೇ ಜನ್ಮವರ್ಧಂತಿ ಮಹೋತ್ಸವ. ಡಾ. ಶಿವಾನಂದ ಶಿವಾಚಾರ್ಯರು ಹಿರೇಮಠ, ತುಮಕೂರು
Image
  Good Morning, Happy Wednesday 14th September 2022 @ TapOvanam, Hiremath, Tumkur ಮಹಾಭಾರತದಲ್ಲಿ ಹದಿನೆಂಟು ಪರ್ವಗಳಿವೆ. ವ್ಯಾಸ ವಿರಚಿತ ಮಹಾಭಾರತದಲ್ಲಿ ಹದಿನೆಂಟು ಪರ್ವಗಳಿವೆ ನಮ್ಮ, ನಿಮ್ಮಗಳ ಜೀವನದಲ್ಲಿ ನಾಲ್ಕು ಪರ್ವಗಳಿವೆ. 1. ಬೇಕು ಪರ್ವ 2. ಬೇಕೇ ಬೇಕು ಪರ್ವ 3. ಸಾಕು ಪರ್ವ 4. ಸಾಕಪ್ಪಾ ಸಾಕು ಪರ್ವ. ಬಾಲ್ಯದಲ್ಲಿ ಬೇಕು ಪರ್ವ. ಯೌವನದಲ್ಲಿ ಬೇಕೇ ಬೇಕು ಪರ್ವ. ಐವತ್ತು, ಅರವತ್ತರ ನಂತರ ಸಾಕು ಪರ್ವ. ಎಪ್ಪತ್ತು, ಎಂಬತ್ತರ ನಂತರ ಸಾಕಪ್ಪಾ ಸಾಕು ಪರ್ವ. ರಾಮಾಯಣದಲ್ಲಿ ಏಳು ಕಾಂಡಗಳಿವೆ. ವಾಲ್ಮೀಕಿ ಬರೆದ ರಾಮಾಯಣದಲ್ಲಿ ಏಳು ಕಾಂಡಗಳಿವೆ. ನಮ್ಮ, ನಿಮ್ಮಗಳ ಜೀವನದಲ್ಲಿ ಏಳೆಂಟು ಕಾಂಡಗಳು ಮಾತ್ರವಲ್ಲ; ನಮ್ಮ, ನಿಮ್ಮಗಳ ಜೀವನದಲ್ಲಿ ಕಾಂಡಗಳೋ ಕಾಂಡಗಳು!! ಅಸಂಖ್ಯಾತ ಕಾಂಡಗಳು....!! ಕೆಲವು ಪರಿಹಾರಯೋಗ್ಯವಾದ ಕಾಂಡಗಳಾದರೆ ಇನ್ನು ಕೆಲವು ಪರಿಹಾರದ ಯೋಗವೇ ಇಲ್ಲದ ಕಾಂಡಗಳು!! ಡಾ. ಶಿವಾನಂದ ಶಿವಾಚಾರ್ಯರು ಹಿರೇಮಠ, ತುಮಕೂರು
Image
Good Morning, Happy Wednesday 14th September 2022 @ TapOvanam, Hiremath, Tumkur ಹನ್ನೆರಡು ಜನ ಬುದ್ಧಿವಂತರ ಕಥೆ ಗೊತ್ತಿದೆಯಲ್ಲವೆ? ತಂಡದಲ್ಲಿರುವ ಹನ್ನೆರಡೂ ಜನ ಬುದ್ಧಿವಂತರಾದರೆ ಯಾರೂ ಸಹ ದಡವನ್ನು ಮುಟ್ಟಲಾರರು. ಹಾಗೆ ಒಂದು ಮನೆಯಲ್ಲಿರುವ ಎಲ್ಲರೂ ಬುದ್ಧಿವಂತರಾದರೆ ಮತ್ತು ಬುದ್ಧಿವಂತರ ಹಾಗೆ ಮಾತನಾಡಲು ಶುರುಹಚ್ಚಿಕೊಂಡರೆ ಆ ಮನೆ ಶಾಂತಿ, ಸಮಾಧಾನ, ನೆಮ್ಮದಿಯನ್ನು ಕಳೆದುಕೊಳ್ಳುತ್ತದೆ. ಡಾ. ಶಿವಾನಂದ ಶಿವಾಚಾರ್ಯರು ಹಿರೇಮಠ, ತುಮಕೂರು
Image
  Good Evening, Happy Monday, 12th September 2022 @ TapOvanam, Hiremath, Tumkur ದಾಸರ ಮಾತು, ಬರೀ ಮಾತಲ್ಲ; ಅದು ವಾಣಿ ದಾಸವಾಣಿ. ಅದು ಆರ್ಷವಾಣಿ. ಬಿಂದಾಸ್ ಮಾತು, ಬರೀ ಮಾತು, ಬಾಯ್ಮಾತು ಅಷ್ಟೇ. ದಾಸರ ಮಾತು, ದಾಸ ಉವಾಚವಿದು ದಾಸವಾಣಿಯಾಗುತ್ತದೆ. ಅಂತಿಂಥ ಬಿಂದಾಸ್ ಮಾತು, ಗಾಳಿಮಾತಾಗುತ್ತದೆ. ದಾಸರ ಮಾತಲ್ಲಿ ಘನತೆ ಇದೆ, ಗೌರವ ಇದೆ, ಗಾಂಭೀರ್ಯವಿದೆ. ಬಿಂದಾಸ್ ಮಾತುಗಳಲ್ಲಿ ಮೇಲಿನ ಈ ಯಾವೊಂದೂ ಅಕ್ಷರಶಃ ಇಲ್ಲ. ದಾಸರ ಮಾತುಗಳಲ್ಲಿ ತೂಕವಿದೆ. ಬಿಂದಾಸ್ ಮಾತುಗಳಲ್ಲಿ ತೂಕವಿಲ್ಲ. ದಾಸರ ಮಾತು ಅನುಭವಕ್ಕೆ ವೇದಿಕೆಯಾಗುತ್ತದೆ. ಬಿಂದಾಸ್ ಮಾತು ಚರ್ಚೆಗೆ ವೇದಿಕೆಯಾಗುತ್ತದೆ. ದಾಸರ ಮಾತು ದಿಕ್ಕು ತೋರಿಸುತ್ತದೆ. ಬಿಂದಾಸ್ ಮಾತು ದಿಕ್ಕು ತಪ್ಪಿಸುತ್ತದೆ. ದಾಸರ ಮಾತು ಅನುಭವಮಂಟಪ. ಬಿಂದಾಸ್ ಮಾತು ಸಮಾಜಕಂಟಕ. ದಾಸರ ಮಾತು ವಿಶ್ವವಿದ್ಯಾಲಯ. ಬಿಂದಾಸ್ ಮಾತು ವಿಷಮೋದ್ಯಮ. ದಾಸರ ಮಾತು ಪ್ರಮಾಣ. ಬಿಂದಾಸ್ ಮಾತು ಪ್ರಮಾಣವಲ್ಲ. ದಾಸರ ಮಾತು ಪ್ರಮಾಣವಾದ ಕಾರಣ, ಕನಕದಾಸರು, ಪುರಂದರದಾಸರು, ಸೂರದಾಸ್‌ರು, ಕಬೀರದಾಸರು ಇವರೆಲ್ಲರುಗಳ ಮಾತುಗಳು ಪ್ರಮಾಣವಾಗಿವೆ ಮತ್ತು ಜನವಾಣಿಯಾಗಿವೆ. ಬಿಂದಾಸ್ ಮಾತುಗಳು ಬರೀ ಗಾಳಿಮಾತುಗಳಾಗಿದ್ದರಿಂದ ಪ್ರಮಾಣವಾಗದೆ ಅವು ಅಲ್ಲಿ, ಇಲ್ಲಿ, ಅಲ್ಲಲ್ಲಿ ಸೋರಿಹೋಗಿವೆ. ಡಾ. ಶಿವಾನಂದ ಶಿವಾಚಾರ್ಯರು ಹಿರೇಮಠ, ತುಮಕೂರು 1 Latha Aradhya
Image
  Good Evening, Happy Monday 12th September 2022 @ TapOvanam, Hiremath, Tumkur ದುರಾಸೆ ಓಡುವಂತೆ ಮಾಡುತ್ತದೆ. ನಿರಾಶೆ ಸಾಯುವಂತೆ ಮಾಡುತ್ತದೆ. ಡಾ. ಶಿವಾನಂದ ಶಿವಾಚಾರ್ಯರು ಹಿರೇಮಠ, ತುಮಕೂರು
Image
  ಅಪ್ಪ, ಅಮ್ಮನಿಗಾಗಿ ಗಣಪತಿ ಎಲ್ಲದಕ್ಕೂ ಸಿದ್ಧ. ಸಮರಕ್ಕೂ ಸರಿ, ಸಮರಸಕ್ಕೂ ಸರಿ;  ಸಂಧಾನಕ್ಕೂ ಸರಿ; ಸಂಘರ್ಷಕ್ಕೂ ಸರಿ!! ಗಣಪತಿಯನ್ನು ಕುರಿತು ಹೇಳುವುದಕ್ಕೆ ಮತ್ತು ಕೇಳುವುದಕ್ಕೆ ಬಹಳಷ್ಟಿದೆ.  ಗಣಪತಿಯ ಕುರಿತಾಗಿ, ಅಷ್ಟಿಷ್ಟಲ್ಲ, ಸಾಕಷ್ಟನ್ನು ಹೇಳುವುದಕ್ಕೆ  ಒಂದು ಪುರಾಣವೇ ಮೀಸಲಿದೆ.  ಗಣೇಶ ಪುರಾಣವೆಂದೇ ಅದು ಬಹುಶ್ರುತ ಮತ್ತು ಸುಪ್ರಸಿದ್ಧ.  ಗಣಪತಿ ನಮ್ಮ ರಾಷ್ಟ್ರೀಯ ದೇವತೆ.  ಬರೀ ನಮ್ಮ ರಾಷ್ಟ್ರದಲ್ಲಷ್ಟೇ ಅಲ್ಲ;  ಅಂತರ್ರಾಷ್ಟ್ರೀಯ ಮಟ್ಟದಲ್ಲೂ  ಬಹುದೊಡ್ಡ ಪ್ರಮಾಣದಲ್ಲಿ ಸುದ್ದಿಮಾಡಿದ  ಹಿರಿಮೆ ಮತ್ತು ಹೆಗ್ಗಳಿಕೆ ಗಣಪತಿಯದು.  ಗಣಪತಿ ನಮ್ಮ ದೇಶದ ಹಾಗೆ ಹತ್ತು ಹಲವಾರು ದೇಶಗಳಲ್ಲಿ  ಬಹುವಿಜೃಂಭಣೆಯಿಂದ ಪೂಜೆಗೊಳ್ಳುತ್ತಾನೆ.  ಗಣಪತಿ ಅಪ್ಪ, ಅಮ್ಮನ ಮನ ಮೆಚ್ಚಿದ ಮಗ.  ಆತ ಅಪ್ಪ, ಅಮ್ಮನ “ಡಾರ್ಲಿಂಗ್ ಸನ್”.  ಆತ ಅಮ್ಮನ ಆದೇಶಪಾಲನೆಗಾಗಿ  ಮತ್ತು ಅಪ್ಪನ ಆತ್ಮಲಿಂಗವನ್ನು ರಕ್ಷಿಸುವುದಕ್ಕಾಗಿ  ತನ್ನನ್ನೇ ತಾನು ಅಪಾಯಕ್ಕೆ ಒಡ್ಡಿಕೊಳ್ಳುತ್ತಾನೆ.  ಆತ ಸ್ವತಃ “ರಿಸ್ಕ್” ಮತ್ತು “ರಿಸ್ಪಾನ್ಸಿಲಿಟಿ”-  ಅಪಾಯ ಮತ್ತು ಜವಾಬ್ದಾರಿಗಳಿಗೆ ತನ್ನನ್ನು ತಾನು ಕೊಟ್ಟುಕೊಳ್ಳುತ್ತಾನೆ.  ಇದು ಕಾರಣ, ಆತ ಭಕ್ತವತ್ಸಲನೂ ಅಹುದು;  ಆತ ದೇವವತ್ಸಲನೂ ಅಹುದು. ಗಣಪತಿಯ ಇನ್ನೊಂದು ವಿಶೇಷತೆ ಏನೆಂದರೆ, ಸ್ವತಃ...